Homeರಾಷ್ಟ್ರೀಯಜ್ಯುವೆಲ್ಲರಿ ಅಂಗಡಿ ಮೇಲೆ ಗುಂಡಿನ ದಾಳಿ: 10 ಕೋಟಿ ಸುಲಿಗೆಗೆ ಯತ್ನ

ಜ್ಯುವೆಲ್ಲರಿ ಅಂಗಡಿ ಮೇಲೆ ಗುಂಡಿನ ದಾಳಿ: 10 ಕೋಟಿ ಸುಲಿಗೆಗೆ ಯತ್ನ

ಮುಂಬೈ, ನ. 27-ಮುಂಬೈನ ಆಭರಣ ಅಂಗಡಿಯೊಂದರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆದಿದೆ. ಪೊಲೀಸರು ಸ್ಥಳಕ್ಕೆ ದಾವಿಸಿ ಪ್ರಾಥಮಿಕ ತನಿಖೆ ನಡೆಸಿದ್ದು ಇದು 10 ಕೋಟಿ ಸುಲಿಗೆ ಯತ್ನಕ್ಕೆ ಸಂಬಂಧಿಸಿರಬಹುದು ಎಂದು ಶಂಕಿಸಿದ್ದಾರೆ. ಕಳೆದ ತಿಂಗಳು ಅಂಗಡಿ ಮಾಲೀಕರಿಗೆ ಹಲವು ಬಾರಿ ಬೆದರಿಕೆ ಸಂದೇಶಗಳು ಬಂದಿದ್ದರೂ, ಅವರು ಅವುಗಳನ್ನು ನಿರ್ಲಕ್ಷಿಸಲಾಗಿತ್ತು.

ಅಂಗಡಿ ಮಾಲೀಕರಿಗೆ ಕಳುಹಿಸಲಾಗಿದ್ದ ಸಂದೇಶವೊಂದರಲ್ಲಿ, ಝಡ್-ಪ್ಲಸ್ ಭದ್ರತೆ ಇದ್ದರೂ ನಿಮನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ಬೆದರಿಕೆ ಹಾಕಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಬೈನ ಮಾಹಿಮ್ನಲ್ಲಿರುವ ಪಿಸಿ ಜೈನ್ ಜ್ಯುವೆಲ್ಲರ್ಸ್ ಅಂಗಡಿ ಮೇಲೆ ಕಳೆದ ರಾತ್ರಿ ಹೆಲೆಟ್ ಧರಿಸಿದ್ದ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮೂರು ಸುತ್ತು ಗುಂಡು ಹಾರಿಸಿ, ಬಳಿಕ ಬಾಂದ್ರಾ ಕಡೆಗೆ ಪರಾರಿಯಾಗಿದ್ದಾರೆ ಆದರೆ ಗುಂಡಿನ ದಾಳಿಯಲ್ಲಿ ಯಾರಿಗೂ ಗಾಯಗಳಾಗಿಲ್ಲ.ಆದರೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಪೊಲೀಸರ ಪ್ರಕಾರ, ಅಂಗಡಿ ಮಾಲೀಕ ಭರತ್ ಜೈನ್ ಅವರಿಗೆ ಕಳೆದ ಒಂದು ತಿಂಗಳಿನಿಂದ ವಾಟ್‌್ಸಆ್ಯಪ್ ಸಂದೇಶಗಳು ಹಾಗೂ ಫೋನ್ ಕರೆಗಳ ಮೂಲಕ ಪದೇಪದೆ ಬೆದರಿಕೆಗಳು ಬರುತ್ತಿದ್ದವು. ಆದರೆ, ಅವು ಸ್ಪ್ಯಾಮ್ ಸಂದೇಶಗಳೆಂದು ಭಾವಿಸಿದ್ದ ಅವರು ಪೊಲೀಸರನ್ನು ಸಂಪರ್ಕಿಸಿರಲಿಲ್ಲ.

ಆದರೆ ಅ.31ರಂದು ಬಂದ ಕೊನೆಯ ಬೆದರಿಕೆ ಸಂದೇಶದಲ್ಲಿ 10 ಕೋಟಿ ಹಣಕ್ಕೆ ನೇರ ಬೇಡಿಕೆ ಇಟ್ಟಿದ್ದಲ್ಲದೆ, ಜೀವ ಬೆದರಿಕೆಯನ್ನೂ ಹಾಕಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಭೇದಿಸಲು ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ದಾಳಿ ನಡೆಸಿ ಪರಾರಿಯಾದ ಇಬ್ಬರನ್ನು ಪತ್ತೆಹಚ್ಚಲು ತಾಂತ್ರಿಕ ನಿಗಾ ವ್ಯವಸ್ಥೆಯನ್ನೂ ಬಳಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

Latest News