Homeರಾಷ್ಟ್ರೀಯಕೇವಲ ಪಿಯುಸಿ ಓದಿದವನಿಗೆ ಡಾಕ್ಟರ್ ಪದವಿ..! ಹೇಗಪ್ಪಾ..?

ಕೇವಲ ಪಿಯುಸಿ ಓದಿದವನಿಗೆ ಡಾಕ್ಟರ್ ಪದವಿ..! ಹೇಗಪ್ಪಾ..?

ನವದೆಹಲಿ,ನ.27- ಕೇವಲ ಪಿಯುಸಿ ಓದಿದವನಿಗೆ ಡಾಕ್ಟರ್ ಪದವಿ..! ಹೇಗಪ್ಪಾ ಅಂತ ಯೋಚಿಸ್ತಿದ್ದಿರಾ ನಮ್ ದೇಶದಲ್ಲಿ ಕಾಸ್ ಕೊಟ್ರೇ ಏನ್ ಬೇಕಾದ್ರೂ ಸಿಗುತ್ತೆ. ಇನ್ನು ಡಾಕ್ಟರ್ ಕೆಲಸ ಸಿಗಲ್ವಾ..?
ರಾಜಸ್ತಾನದಲ್ಲಿ 15 ಲಕ್ಷ ಹಣಕ್ಕೆ ಬೇಕಾಬಿಟ್ಟಿ ಡಾಕ್ಟರ್ ಪದವಿಗಳನ್ನು ನೀಡಲಾಗಿದೆ. ಅದರಲ್ಲೂ ಕೇವಲ ಪಿಯುಸಿ ಓದಿದ ವ್ಯಕ್ತಿಗೂ ಡಾಕ್ಟರ್ ಪದವಿ ಸಿಕ್ಕಿದೆ. ಇದೇ ರೀತಿ ನೂರಾರು ಮಂದಿ ನಕಲಿ ಡಾಕ್ಟರ್ಗಳು ವೈದ್ಯಕೀಯ ಮಂಡಳಿಯಲ್ಲಿ ನೋಂದಣಿ ಮಾಡಿಸಿಕೊಂಡು ಆಸ್ಪತ್ರೆಗಳಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎನ್ನುವುದು ಅಚ್ಚರಿಯ ಸಂಗತಿಯಾಗಿದೆ.

ದೇಶದ 4 ರಾಜ್ಯಗಳಲ್ಲಿ ನಕಲಿ ವೈದ್ಯಕೀಯ ಪದವಿಗಳನ್ನು ಮಾರಾಟ ಮಾಡುತ್ತಿದ್ದ ಬೃಹತ್ ಜಾಲವೊಂದನ್ನು ರಾಜಸ್ಥಾನ ವಿಶೇಷ ಕಾರ್ಯಾಚರಣೆ ದಳದ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಆರೋಪಿಗಳು ಸುಮಾರು 300 ಮಂದಿಗೆ ನಕಲಿ ಎಂಬಿಬಿಎಸ್, ಎಂಡಿ ಹಾಗೂ ಡಿಎಂಆರ್ಡಿ ಪದವಿಗಳನ್ನ ಮಾರಾಟ ಮಾಡಿದ್ದು, ಇದಕ್ಕಾಗಿ 15 ಲಕ್ಷ ರೂ. ಗಿಂತಲೂ ಅಧಿಕ ಹಣ ಸಂಗ್ರಹಿಸಿರುವ ಶಂಕೆ ವ್ಯಕ್ತವಾಗಿದೆ.

ವಿಶ್ವವಿದ್ಯಾಲಯಗಳ ವೆಬ್ಸೈಟ್ಗಳಲ್ಲಿ ನಕಲಿ ಪದವಿಗಳ ವಿವರಗಳನ್ನ ಅಪ್ಲೋಡ್ ಮಾಡಿಸಿ, ಅವು ನೈಜ ಪದವಿಗಳೆಂಬಂತೆ ಬಿಂಬಿಸಲಾಗುತ್ತಿತ್ತು. ಈ ಮೂಲಕ ನಕಲಿ ಪದವಿ ಪಡೆದವರು ವೈದ್ಯಕೀಯ ಮಂಡಳಿಯಲ್ಲಿ ನೋಂದಣಿ ಮಾಡಿಸಿಕೊಂಡು ಆಸ್ಪತ್ರೆಗಳಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಲಾಗುತ್ತಿತ್ತು ಎಂಬ ಸ್ಫೋಟಕ ವಿಚಾರ ತನಿಖೆಯಲ್ಲಿ ಬಯಲಾಗಿದೆ.

ಈ ಪ್ರಕರಣದಲ್ಲಿ ಬೆಳಕಿಗೆ ಬಂದ ಪ್ರಮುಖ ಸಂಗತಿಯೆಂದರೆ, ರಾಮಕಿಶೋರ್ ಮಹಾವರ್ ಎಂಬಾತ ಕೇವಲ 11ನೇ ತರಗತಿಯವರೆಗೆ ಶಿಕ್ಷಣ ಪಡೆದಿದ್ದರೂ, ನಕಲಿ ಶೈಕ್ಷಣಿಕ ದಾಖಲೆಗಳ ಮೂಲಕ ವೈದ್ಯನೆಂದು ಗುರುತಿಸಿಕೊಂಡಿದ್ದಾನೆ. ನಕಲಿ ಪದವಿಗಳ ಆಧಾರದಲ್ಲಿ ರಾಜಸ್ಥಾನ ವೈದ್ಯಕೀಯ ಮಂಡಳಿಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದ ಈತ, ರಾಜಸ್ಥಾನ ಹಾಗೂ ದೆಹಲಿಯ ಆಸ್ಪತ್ರೆಗಳಲ್ಲಿ ವೈದ್ಯನಾಗಿ ಕೆಲಸ ಮಾಡಿದ್ದಾನೆ. ಅಷ್ಟೇ ಅಲ್ಲದೆ, ದೆಹಲಿಯ ಆಸ್ಪತ್ರೆಯೊಂದರಲ್ಲಿ ಸ್ತ್ರೀರೋಗ ತಜ್ಞನೆಂದು ಹೇಳಿಕೊಂಡು ಅಲ್ಟ್ರಾಸೌಂಡ್ ಪರೀಕ್ಷೆಗಳನ್ನೂ ನಡೆಸುತ್ತಿದ್ದ. ಪ್ರತಿದಿನ ಸುಮಾರು 15ರಿಂದ 20 ಮಂದಿಗೆ ಸೋನೋಗ್ರಫಿ ಪರೀಕ್ಷೆಗಳನ್ನ ನಡೆಸುತ್ತಿದ್ದ. ಅಗತ್ಯ ವೈದ್ಯಕೀಯ ಅರ್ಹತೆಯೇ ಇಲ್ಲದ ವ್ಯಕ್ತಿಯೊಬ್ಬ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಸಂಗತಿ ಗಂಭೀರ ಆತಂಕಕ್ಕೆ ಕಾರಣವಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನ ಬಂಧಿಸಲಾಗಿದೆ. ಮಧ್ಯಪ್ರದೇಶದ ಗ್ವಾಲಿಯರ್ನಿಂದ ಮನೀಶ್ ಮಾಂಝಿ, ಲಕ್ನೋದಿಂದ ಖುರ್ರಂ ತೌಫೀಕ್ ಹಾಗೂ ಮುಂಬೈನಿಂದ ಸತ್ಯಜಿತ್ ಪಾಣಿಗ್ರಹಿ ಎಂಬಾತನನ್ನು ಬಂಧಿಸಲಾಗಿದೆ. ಕ್ರಮವಾಗಿ ಮೊದಲಿಬ್ಬರು ನಕಲಿ ಪದವಿಗಳನ್ನು ವಿಶ್ವವಿದ್ಯಾಲಯಗಳ ವೆಬ್ಸೈಟ್ಗಳಲ್ಲಿ ಅಪ್ಲೋಡ್ ಮಾಡಿಸುತ್ತಿದ್ದರು, ಕೊನೇ ಆರೋಪಿ ನಕಲಿ ಪದವಿಗಳನ್ನು ಪೂರೈಸುತ್ತಿದ್ದ ಎಂದು ತಿಳಿದುಬಂದಿದೆ.

RELATED ARTICLES

Latest News