Homeಕ್ರೀಡಾ ಸುದ್ದಿ2ನೇ ಟೆಸ್ಟ್‌: 356 ರನ್‌ಗಳಿಗೆ ನ್ಯೂಜಿಲ್ಯಾಂಡ್‌ ಅಲ್‌ಔಟ್‌

2ನೇ ಟೆಸ್ಟ್‌: 356 ರನ್‌ಗಳಿಗೆ ನ್ಯೂಜಿಲ್ಯಾಂಡ್‌ ಅಲ್‌ಔಟ್‌

ಕ್ರೈಸ್ಟ್‌ಚರ್ಚ್‌, ನ. 28 (ಪಿಟಿಐ): ಇಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದ ಎರಡನೇ ದಿನದಂದು ನ್ಯೂಜಿಲೆಂಡ್‌ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 356 ರನ್‌ಗಳಿಗೆ ಆಲೌಟ್‌ ಆಗಿದೆ. ಭಾರತದ ವೇಗದ ಬೌಲರ್‌ ಆಕಾಶ್‌ ದೀಪ್‌ ಐದು ವಿಕೆಟ್‌ಗಳನ್ನು ಕಬಳಿಸಿದರೆ, ಗುರ್ನೂರ್‌ ಬ್ರಾರ್‌ ಅವರು ದೃಢವಾಗಿ ನಿಂತಿದ್ದ ಟಾಮ್‌ ಬ್ಲಂಡೆಲ್‌ ಅವರನ್ನು ಔಟ್‌ ಮಾಡಿದರು.

ಮಧ್ಯಾಹ್ನದ ಊಟದ ವಿರಾಮದ ವೇಳೆಗೆ 8 ವಿಕೆಟ್‌ಗೆ 330 ರನ್‌ ಗಳಿಸಿದ್ದ ನ್ಯೂಜಿಲೆಂಡ್‌ ವಿರಾಮದ ನಂತರ ಕೇವಲ 26 ರನ್‌ಗಳನ್ನು ಸೇರಿಸಲಷ್ಟೇ ಶಕ್ತವಾಯಿತು. 116.3 ಓವರ್‌ಗಳಲ್ಲಿ ತಂಡದ ಇನ್ನಿಂಗ್‌್ಸ 356 ರನ್‌ಗಳಿಗೆ ಕೊನೆಗೊಂಡಿತು. ಇನ್ನಿಂಗ್‌್ಸಗೆ ಆಧಾರಸ್ತಂಭವಾಗಿದ್ದ ಟಾಮ್‌ ಬ್ಲಂಡೆಲ್‌‍, ಔಟಾದ ಕೊನೆಯ ಪ್ರಮುಖ ಬ್ಯಾಟರ್‌ ಆಗಿದ್ದರು. ಅವರು 211 ಎಸೆತಗಳನ್ನು ಎದುರಿಸಿ 89 ರನ್‌ ಗಳಿಸಿ, ಭಾರತೀಯ ಬೌಲರ್‌ಗಳನ್ನು ದೀರ್ಘಕಾಲದವರೆಗೆ ತಡೆಹಿಡಿದಿದ್ದರು.

ಭಾರತದ ಪರ ಆಕಾಶ್‌ ದೀಪ್‌ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ನೀಡಿ 99 ರನ್‌ಗಳಿಗೆ 5 ವಿಕೆಟ್‌ಗಳನ್ನು ಪಡೆದರು. ಬ್ಲಂಡೆಲ್‌ ಅವರನ್ನು ಔಟ್‌ ಮಾಡಿದ ಗುರ್ನೂರ್‌ ಬ್ರಾರ್‌ (78 ರನ್‌ಗೆ 2 ವಿಕೆಟ್‌‍) ಮತ್ತು ಅಂಶುಲ್‌ ಕಂಬೋಜ್‌ (79 ರನ್‌ಗೆ 2 ವಿಕೆಟ್‌‍) ತಲಾ ಎರಡು ವಿಕೆಟ್‌ಗಳನ್ನು ಪಡೆದರು. ಎರಡನೇ ದಿನದ ಆರಂಭದಲ್ಲಿ, ನ್ಯೂಜಿಲೆಂಡ್‌ 5 ವಿಕೆಟ್‌ಗೆ 246 ರನ್‌ಗಳಿಂದ ಆಟ ಮುಂದುವರಿಸಿದಾಗ, ಅಂಶುಲ್‌ ಕಂಬೋಜ್‌ ಅವರು ಗ್ಲೆನ್‌ ಫಿಲಿಪ್‌್ಸ (36) ಅವರನ್ನು ಔಟ್‌ ಮಾಡುವ ಮೂಲಕ ಭಾರತಕ್ಕೆ ಆರಂಭಿಕ ಯಶಸ್ಸು ತಂದುಕೊಟ್ಟರು. ಆದಾಗ್ಯೂ, ಹಿಂದಿನ ದಿನದ ಮತ್ತೊಬ್ಬ ಬ್ಯಾಟರ್‌ ಟಾಮ್‌ ಬ್ಲಂಡೆಲ್‌ (53 ರನ್‌ಗಳೊಂದಿಗೆ ಅಜೇಯರಾಗಿದ್ದರು) ಮಧ್ಯಾಹ್ನದ ಊಟದ ವಿರಾಮದ ವೇಳೆಗೆ 80 ರನ್‌ ತಲುಪಿದರು.

ಅವರಿಗೆ ನಾಥನ್‌ ಸ್ಮಿತ್‌ (26) ಉತ್ತಮ ಸಾಥ್‌ ನೀಡಿದರು. ಸ್ಮಿತ್‌ ಅವರನ್ನು ಆಕಾಶ್‌ ದೀಪ್‌ ಸ್ವತಃ ಕ್ಯಾಚ್‌ ಹಿಡಿದು ಔಟ್‌ ಮಾಡಿದರು; ಇದು ಆಕಾಶ್‌ ದೀಪ್‌ ಅವರ ಮೂರನೇ ವಿಕೆಟ್‌ ಆಗಿತ್ತು. ಈ ಹಂತದಲ್ಲಿ ನ್ಯೂಜಿಲೆಂಡ್‌ 7 ವಿಕೆಟ್‌ಗೆ 291 ರನ್‌ಗಳಿಗೆ ಕುಸಿಯಿತು. ನಂತರ ಬ್ಲಂಡೆಲ್‌ ಮತ್ತು ಕೈಲ್‌ ಜೇಮಿಸನ್‌ (19) ಭಾರತೀಯ ಬೌಲರ್‌ಗಳನ್ನು ಇನ್ನಷ್ಟು ಕಷ್ಟಕ್ಕೆ ಸಿಲುಕಿಸಿದರು. ತಂಡದ ಮೊತ್ತವನ್ನು 300 ರನ್‌ಗಳ ಗಡಿ ದಾಟಿಸಿದ ಬಳಿಕ, ಆಕಾಶ್‌ ದೀಪ್‌ ಅವರು ಜೇಮಿಸನ್‌ ಅವರನ್ನು ಔಟ್‌ ಮಾಡುವ ಮೂಲಕ ತಮ್ಮ ನಾಲ್ಕನೇ ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರ್‌ಗಳು: ನ್ಯೂಜಿಲೆಂಡ್‌ ಮೊದಲ ಇನ್ನಿಂಗ್‌್ಸ 116.3 ಓವರ್‌ಗಳಲ್ಲಿ 356 (ಟಾಮ್‌ ಲ್ಯಾಥಮ್‌ 59, ಡೆವೊನ್‌ ಕಾನ್ವೇ 31, ಡೇರಿಲ್‌ ಮಿಚೆಲ್‌ 31, ಟಾಮ್‌ ಬ್ಲಂಡೆಲ್‌ 89, ಗ್ಲೆನ್‌ ಫಿಲಿಪ್‌್ಸ 36; ಅಂಶುಲ್‌ ಕಂಬೋಜ್‌ 2/79, ಆಕಾಶ್‌ ದೀಪ್‌ 5/99, ಗುರುನೂರ್‌ ಬ್ರಾರ್‌ 2/78).

RELATED ARTICLES

Latest News