Friday, November 22, 2024
Homeರಾಷ್ಟ್ರೀಯ | Nationalಛತ್ತೀಸ್‌ಘಡದ ಸುಕ್ಮಾ ಜಿಲ್ಲೆಯಲ್ಲಿ ಎನ್‌ಕೌಂಟರ್‌ಗೆ ನಕ್ಸಲ್‌ ಬಲಿ

ಛತ್ತೀಸ್‌ಘಡದ ಸುಕ್ಮಾ ಜಿಲ್ಲೆಯಲ್ಲಿ ಎನ್‌ಕೌಂಟರ್‌ಗೆ ನಕ್ಸಲ್‌ ಬಲಿ

ರಾಯ್‌ಪುರ,ಏ.29 (ಪಿಟಿಐ) : ಛತ್ತೀಸ್‌ಘಡದ ಸುಕ್ಮಾ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಭದ್ರತಾ ಸಿಬ್ಬಂದಿ ನಡೆಸಿದ ಎನ್ಕೌಂಟರ್‌ನಲ್ಲಿ ನಕ್ಸಲೀಯನೊಬ್ಬ ಹತನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲಾ ರಿಸರ್ವ್‌ ಗಾರ್ಡ್‌ (ಡಿಆರ್‌ಜಿ) ಮತ್ತು ಕಮಾಂಡೋ ಬೆಟಾಲಿಯನ್‌ ಫಾರ್‌ ರೆಸಲ್ಯೂಟ್‌ ಆಕ್ಷನ್‌ (ಕೋಬ್ರಾ- ಸಿಆರ್‌ಪಿಎಫ್‌ನ ಗಣ್ಯ ಘಟಕ) ನ ಪ್ರತ್ಯೇಕ ತಂಡಗಳು ನಕ್ಸಲ್‌ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಕಿಸ್ತಾರಾಮ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಅರಣ್ಯದಲ್ಲಿ ಗುಂಡಿನ ಚಕಮಕಿ ನಡೆದಿದೆ ಎಂದು ಸುಕ್ಮಾ ಪೊಲೀಸ್‌ ಅಧೀಕ್ಷಕರು ಕಿರಣ್‌ ಜಿ ಚವಾಣ್‌ ಪಿಟಿಐಗೆ ತಿಳಿಸಿದ್ದಾರೆ.

ರಾಜ್ಯ ರಾಜಧಾನಿ ರಾಯ್‌ಪುರದಿಂದ ಸುಮಾರು 450 ಕಿಮೀ ದೂರದಲ್ಲಿರುವ ಅರಣ್ಯದಲ್ಲಿ ನಕ್ಸಲೀಯರು ಮತ್ತು ಡಿಆರ್‌ಜಿ ತಂಡದ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ಅವರು ಹೇಳಿದರು.

ಗುಂಡಿನ ಚಕಮಕಿ ನಿಲ್ಲಿಸಿದ ನಂತರ, ಸ್ಥಳದಿಂದ ನಕ್ಸಲೀಯರ ಶವ ಮತ್ತು ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಹೇಳಿದರು, ಈ ಪ್ರದೇಶದಲ್ಲಿ ಇನ್ನೂ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಹೇಳಿದರು.

ಈ ಘಟನೆಯೊಂದಿಗೆ, ಸುಕ್ಮಾ ಸೇರಿದಂತೆ ಏಳು ಜಿಲ್ಲೆಗಳನ್ನು ಒಳಗೊಂಡಿರುವ ಬಸ್ತಾರ್‌ ಪ್ರದೇಶದಲ್ಲಿ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಈ ವರ್ಷ ಇದುವರೆಗೆ 81 ನಕ್ಸಲೀಯರು ಕೊಲ್ಲಲ್ಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಏಪ್ರಿಲ್‌ 16 ರಂದು, ಪ್ರದೇಶದ ಕಂಕೇರ್‌ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಕಾರ್ಯಚರಣೆಯಲ್ಲಿ 29 ನಕ್ಸಲೀಯರನ್ನು ಕೊಲ್ಲಲಾಗಿತ್ತು.

RELATED ARTICLES

Latest News