Friday, November 22, 2024
Homeಕ್ರೀಡಾ ಸುದ್ದಿ | Sportsಭಾರತ ತಂಡಕ್ಕೆ ವಿರಾಟ್‌ ಕೊಹ್ಲಿಯ ಅನುಭವ ಅವಶ್ಯಕ : ಮ್ಯಾಥ್ಯೂ ಹೇಡನ್‌

ಭಾರತ ತಂಡಕ್ಕೆ ವಿರಾಟ್‌ ಕೊಹ್ಲಿಯ ಅನುಭವ ಅವಶ್ಯಕ : ಮ್ಯಾಥ್ಯೂ ಹೇಡನ್‌

ಬೆಂಗಳೂರು, ಏ. 29- ವೆಸ್ಟ್ ಇಂಡೀಸ್‌ ಹಾಗೂ ಅಮೇರಿಕಾದ ಜಂಟಿ ಆತಿಥ್ಯದಲ್ಲಿ ಆಯೋಜನೆ ಗೊಂಡಿರುವ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡವು ಚಾಂಪಿಯನ್‌ ಪಟ್ಟ ಅಲಂಕರಿಸಬೇಕಾದರೆ ವಿರಾಟ್‌ ಕೊಹ್ಲಿಯ ಅನುಭವ ಅವಶ್ಯಕ ಎಂದು ಆಸ್ಟ್ರೇಲಿಯಾದ ಮಾಜಿ ಆರಂಭಿಕ ಮ್ಯಾಥ್ಯೂ ಹೇಡನ್‌ ಹೇಳಿದ್ದಾರೆ.

ಗುಜರಾತ್‌ ಟೈಟನ್‌್ಸ ವಿರುದ್ಧ ವಿಶ್ವಶ್ರೇಷ್ಠ ಸ್ಪಿನ್ನರ್‌ ರಶೀದ್‌ಖಾನ್‌ ಸೇರಿದಂತೆ ಇತರ ಸ್ಪಿನ್ನರ್‌ಗಳ ವಿರುದ್ಧ ಪ್ರಾಬಲ್ಯ ಮೆರೆದು 44 ಎಸೆತಗಳಲ್ಲಿ 70 ರನ್‌ ಗಳಿಸಿದ ವಿರಾಟ್‌ ಕೊಹ್ಲಿಯನ್ನು ಹೇಡನ್‌ ಮುಕ್ತಕಂಠದಿಂದ ಕೊಂಡಾಡಿದ್ದಾರೆ.

ಸ್ಟಾರ್‌ ಸ್ಪೋರ್ಟ್ಸ್ ಜೊತೆ ಸಂವಾದ ನಡೆಸಿದ ಖ್ಯಾತ ಕ್ರಿಕೆಟ್‌ ವಿವರಣೆಕಾರ ಮ್ಯಾಥ್ಯೂಹೇಡನ್‌ ಅವರು, `ಮುಂಬರುವ ಚುಟುಕು ವಿಶ್ವಕಪ್‌ ಟೂರ್ನಿಯ ಲೀಗ್‌ ಹಂತದಲ್ಲಿ ಭಾರತ ತಂಡವು 4 ಪಂದ್ಯಗಳನ್ನು ಆಡಲಿದ್ದು, ಚುಟುಕು ವಿಶ್ವಕಪ್‌ ಟೂರ್ನಿಯಲ್ಲಿ ಟೀಮ್‌ ಇಂಡಿಯಾ ಪರ ಬಹುತೇಕ ಹೊಸಮುಖಗಳೇ ಆಯ್ಕೆ ಆಗುವ ಸಂಭವವಿದ್ದು, ಅವರಿಗೆ ಸಲಹೆ ನೀಡಲು ವಿರಾಟ್‌ ಕೊಹ್ಲಿಯ ಅನುಭವ ಅಗತ್ಯ’ ಎಂದು ಹೇಳಿದ್ದಾರೆ.

ವಿಶ್ವಕಪ್‌ ಟೂರ್ನಿಯಗಳಲ್ಲಿ ದೀರ್ಘಾವಾದಿವರೆಗೂ ಬ್ಯಾಟಿಂಗ್‌ ಮಾಡುವತ್ತ ಬ್ಯಾಟರ್‌ಗಳು ಗಮನ ಹರಿಸಬೇಕಾಗುತ್ತದೆ, ಸ್ವೀಪ್‌ ಶಾಟ್‌ ಅಲ್ಲದೆ ಸುದೀರ್ಘ ಕಾಲದವರೆಗೂ ಬ್ಯಾಟ್‌ ಮಾಡುವ ಸಾಮರ್ಥ್ಯ ಹೊಂದಿರುವ ವಿರಾಟ್‌ ಕೊಹ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಅವಶ್ಯಕವಾಗಿದೆ.

ಇತ್ತೀಚಿನ ದಿನಗಳಲ್ಲಿ ವಿರಾಟ್‌ ಕೊಹ್ಲಿ ಅವರು ಸೆ್ಟ್ರಕ್‌ರೇಟ್‌ ಸಮಸ್ಯೆ ಎದುರಿಸುತ್ತಿದ್ದಾರೆ, ಐಪಿಎಲ್‌ ಟೂರ್ನಿಯಲ್ಲೂ 500 ರನ್‌ ಗಳಿಸಿದ್ದರೂ ಕೂಡ ತಮ್ಮ ನಿಧಾನಗತಿಯ ಆಟಕ್ಕೆ ವಿರಾಟ್‌ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದಾರೆ. ಅಲ್ಲದೆ ಕೊಹ್ಲಿ ಸ್ಪಿನ್ನರ್‌ಗಳ ವಿರುದ್ಧ ತಮ್ಮ ನೈಜ ಆಟದ ಮೂಲಕ ಸ್ವೀಪ್‌ ಶಾಟ್ಸ್ ಗಳನ್ನು ಹೊಡೆಯುವಲ್ಲಿ ಎಡವಿದ್ದಾರೆ. ಆದರೆ ಗುಜರಾತ್‌ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಆಪ್ಘಾನಿಸ್ತಾನದ ಇಬ್ಬರು ಶ್ರೇಷ್ಠ ಸ್ಪಿನ್ನರ್‌ಗಳ ವಿರುದ್ಧ ಅದ್ಭುತ ಆಟ ಪ್ರದರ್ಶಿಸಿದ್ದಾರೆ. ಇದೇ ರೀತಿಯ ಕೆಲಸವನ್ನು ವಿರಾಟ್‌ ಕೊಹ್ಲಿ ಅವರು ಮುಂದಿನ ಪಂದ್ಯಗಳಲ್ಲಿ ಮಾಡಬೇಕಾಗುತ್ತದೆ. ನಾನು ಕೂಡ ನನ್ನ ವೃತ್ತಿ ಜೀವನದಲ್ಲಿ ಇದೇ ಕೆಲಸವನ್ನು ಮಾಡುತ್ತಿದ್ದೆ’ ಎಂದು ಹೇಡನ್‌ ಹೇಳಿದ್ದಾರೆ.

RELATED ARTICLES

Latest News