Monday, November 25, 2024
Homeರಾಷ್ಟ್ರೀಯ | Nationalಪನ್ನುನ್‌ ಹತ್ಯೆಗೆ ಹಿಟ್‌ ತಂಡ ನೇಮಿಸಿಕೊಂಡಿದ್ದಾರೆಂಬುದು ಆಧಾರರಹಿತ : ಭಾರತ

ಪನ್ನುನ್‌ ಹತ್ಯೆಗೆ ಹಿಟ್‌ ತಂಡ ನೇಮಿಸಿಕೊಂಡಿದ್ದಾರೆಂಬುದು ಆಧಾರರಹಿತ : ಭಾರತ

ನವದೆಹಲಿ,ಏ.30- ಅಮೆರಿಕ ಮೂಲದ ಖಲಿಸ್ತಾನಿ ಭಯೋತ್ಪಾದಕ ಗುರುಪತ್‌ವಂತ್‌ ಸಿಂಗ್‌ ಪನ್ನೂನ್‌ನನ್ನು ಕೊಲ್ಲಲು ಭಾರತೀಯ ಗುಪ್ತಚರ ಅಧಿಕಾರಿಯೊಬ್ಬರು ಹಿಟ್‌ ತಂಡವನ್ನು ನೇಮಿಸಿಕೊಂಡಿದ್ದಾರೆ ಎಂದು ದಿ ವಾಷಿಂಗ್ಟನ್‌ ಪೋಸ್ಟ್‌ ಮಾಡಿರುವ ಆರೋಪಗಳನ್ನು ಭಾರತವು ಅನರ್ಜಿ ಮತ್ತು ಆಧಾರರಹಿತ ಎಂದು ತಳ್ಳಿಹಾಕಿದೆ.

ಈ ವರದಿಯು ಪನ್ನುನ್‌ನನ್ನು ಕೊಲ್ಲುವ ಕಾರ್ಯಾಚರಣೆಯನ್ನು ಭಾರತದ ಬೇಹುಗಾರಿಕಾ ಸಂಸ್ಥೆ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ (ರಾ ) ಮುಖ್ಯಸ್ಥ ಸಮಂತ್‌ ಗೋಯೆಲ್‌ ಅನುಮೋದಿಸಿದ್ದಾರೆ ಎಂದು ಯುಎಸ್‌‍ ಗುಪ್ತಚರ ಸಂಸ್ಥೆಗಳು ಮೌಲ್ಯಮಾಪನ ಮಾಡಿವೆ. ಪ್ರಶ್ನೆಯಲ್ಲಿರುವ ವರದಿಯು ಗಂಭೀರ ವಿಷಯದ ಮೇಲೆ ಅನಗತ್ಯ ಮತ್ತು ಆಧಾರರಹಿತ ಆರೋಪಗಳನ್ನು ಮಾಡುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಂಘಟಿತ ಅಪರಾಧಿಗಳು, ಭಯೋತ್ಪಾದಕರು ಮತ್ತು ಇತರರ ನೆಟ್‌ವರ್ಕ್‌ಗಳಲ್ಲಿ ಯುಎಸ್‌‍ ಸರ್ಕಾರವು ಹಂಚಿಕೊಂಡಿರುವ ಭದ್ರತಾ ಕಾಳಜಿಗಳನ್ನು ಪರಿಶೀಲಿಸಲು ಭಾರತ ಸರ್ಕಾರವು ರಚಿಸಿರುವ ಉನ್ನತ ಮಟ್ಟದ ಸಮಿತಿಯ ತನಿಖೆ ನಡೆಯುತ್ತಿದೆ ಎಂದು ಜೈಸ್ವಾಲ್‌ ಹೇಳಿದರು. ಅದರ ಬಗ್ಗೆ ಊಹಾತಕ ಮತ್ತು ಬೇಜವಾಬ್ದಾರಿ ಕಾಮೆಂಟ್‌ಗಳು ಪ್ರಯೋಜನಕಾರಿಯಲ್ಲ ಎಂದು ಅವರು ಹೇಳಿದರು.

ಭಯೋತ್ಪಾದಕರು ಬೇರೆ ದೇಶಗಳಿಗೆ ಪರಾರಿಯಾಗಿದ್ದರೂ ಅವರನ್ನು ಹಿಂಬಾಲಿಸುವುದಾಗಿ ಭಾರತ ಇತ್ತೀಚಿನ ದಿನಗಳಲ್ಲಿ ಸೂಚಿಸಿದೆ. ಪಾಕಿಸ್ತಾನದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಪ್ರಯತ್ನಿಸಿದ ನಂತರ ಗಡಿಯಿಂದ ತಪ್ಪಿಸಿಕೊಳ್ಳುವವರನ್ನು ಕೊಲ್ಲಲು ಭಾರತವು ಪಾಕಿಸ್ತಾನವನ್ನು ಪ್ರವೇಶಿಸುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದರು.

ಉಗ್ರು ಪಾಕಿಸ್ತಾನಕ್ಕೆ ಓಡಿಹೋದರೆ, ಅವರನ್ನು ಕೊಲ್ಲಲು ನಾವು ಪಾಕಿಸ್ತಾನವನ್ನು ಪ್ರವೇಶಿಸುತ್ತೇವೆ ಎಂದು ಸಿಂಗ್‌ ಹೇಳಿದ್ದಾರೆ. ಭಾರತವು ಯಾವಾಗಲೂ ತನ್ನ ನೆರೆಯ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧವನ್ನು ಉಳಿಸಿಕೊಳ್ಳಲು ಬಯಸುತ್ತದೆ … ಆದರೆ ಯಾರಾದರೂ ಭಾರತಕ್ಕೆ ಕೋಪದ ಕಣ್ಣುಗಳನ್ನು ಮತ್ತೆ ಮತ್ತೆ ತೋರಿಸಿದರೆ, ಭಾರತಕ್ಕೆ ಬಂದು ಭಯೋತ್ಪಾದಕ ಚಟುವಟಿಕೆಗಳನ್ನು ಉತ್ತೇಜಿಸಲು ಪ್ರಯತ್ನಿಸಿದರೆ, ನಾವು ಅವರನ್ನು ಬಿಡುವುದಿಲ್ಲ ಎಂದು ಸಿಂಗ್‌ ಹೇಳಿದರು.

ಬ್ರಿಟಿಷ್‌ ಕೊಲಂಬಿಯಾದಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯಲ್ಲಿ ಭಾರತೀಯ ಸರ್ಕಾರಿ ಏಜೆಂಟರು ಭಾಗಿಯಾಗಿದ್ದಾರೆ ಎಂದು ಕೆನಡಾ ಆರೋಪಿಸಿದೆ. ಕೆನಡಾ ಭಾರತ ವಿರೋಧಿ ಉಗ್ರರಿಗೆ ನಿರಂತರವಾಗಿ ಜಾಗ ನೀಡುತ್ತಿದೆ ಎಂದು ಭಾರತ ನಿಯಮಿತವಾಗಿ ಗಮನಸೆಳೆದಿದೆ.

RELATED ARTICLES

Latest News