Tuesday, May 21, 2024
Homeಮನರಂಜನೆಆತಹತ್ಯೆಗೆ ಶರಣಾದ ಭೋಜ್‌ಪುರಿ ನಟಿ ಅಮೃತಾ ಪಾಂಡೆ

ಆತಹತ್ಯೆಗೆ ಶರಣಾದ ಭೋಜ್‌ಪುರಿ ನಟಿ ಅಮೃತಾ ಪಾಂಡೆ

ಪಾಟ್ನಾ,ಏ.30- ಭೋಜ್‌ಪುರಿ ನಟಿ ಅಮತಾ ಪಾಂಡೆ ಆತಹತ್ಯೆ ಮಾಡಿಕೊಂಡಿದ್ದಾರೆ.27 ವರ್ಷದ ನಟಿ ಪಾಂಡೆ ಅವರು ಬಿಹಾರದ ಭಾಗಲ್ಪುರದಲ್ಲಿರುವ ತಮ ಅಪಾರ್ಟ್‌ಮೆಂಟ್‌ನಲ್ಲಿ ಅವರು ಶವವಾಗಿ ಪತ್ತೆಯಾಗಿದ್ದು ಆಕೆ ಆತಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಆಕೆ ಸಾಯುವ ಮುನ್ನ ವಾಟ್ಸಾಪ್‌ ಸ್ಟೇಟಸ್‌‍ನಲ್ಲಿ ದೋ ನಾವ್‌ ಮೆ ಸವಾರ್‌ ಥಿ ಉಸ್ಕಿ ಜಿಂದಗಿ, ಹಮ್ನೆ ಅಪ್ನಿ ನಾವ್‌ ದುಬಾ ಕೆ ಉಸ್ಕಾ ಸಫರ್‌ ಆಸಾನ್‌ ಕರ್‌ ದಿಯಾ (ಅವನ/ಆಕೆಯ ಜೀವನ ಎರಡು ದೋಣಿಗಳಲ್ಲಿ ಸಾಗುತ್ತಿತ್ತು, ನಾವು ಅದನ್ನು ತಯಾರಿಸಿದ್ದೇವೆ. ಒಂದನ್ನು ಮುಳುಗಿಸುವ ಮೂಲಕ ಪ್ರಯಾಣ ಸುಲಭ) ಎಂದು ಬರೆದುಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅಮೃತಾ ಅವರಿಗೆ ಸಾಕಷ್ಟು ಕೆಲಸ ಸಿಗದೆ ಖಿನ್ನತೆಯಿಂದ ಬಳಲುತ್ತಿದ್ದರಿಂದ ಅವರ ವತ್ತಿ ಜೀವನದ ಬಗ್ಗೆ ಚಿಂತಿತರಾಗಿದ್ದರು ಎಂದು ಅಮೃತಾ ಕುಟುಂಬದವರು ತಿಳಿಸಿದ್ದಾರೆ. ಆಕೆ ಖಿನ್ನತೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಳು ಎಂದು ಕುಟುಂಬದವರು ತಿಳಿಸಿದ್ದಾರೆ.

ನಟಿ ತನ್ನ ಪತಿ ಚಂದ್ರಮಣಿ ಜಂಗಡ್‌ ಅನಿಮೇಷನ್‌ ಇಂಜಿನಿಯರ್‌ ಅವರೊಂದಿಗೆ ಮುಂಬೈನಲ್ಲಿ ವಾಸಿಸುತ್ತಿದ್ದರು. ಏಪ್ರಿಲ್‌ 18 ರಂದು ತನ್ನ ಸಹೋದರಿಯ ಮದುವೆಯಲ್ಲಿ ಪಾಲ್ಗೊಳ್ಳಲು ಅವಳು ಭಾಗಲ್ಪುರಕ್ಕೆ ಹೋಗಿದ್ದಳು. ಮದುವೆಯ ನಂತರ ಅವಳ ಪತಿ ಮನೆಗೆ ಮರಳಿದಳು ಆದರೆ ಅಮೃತಾ ಮತ್ತೆ ಉಳಿಯಲು ನಿರ್ಧರಿಸಿದ್ದರು.

ನಟ ಭೋಜ್‌ಪುರಿ ಸ್ಟಾರ್‌ ಖೇಸರಿ ಲಾಲ್‌ ಯಾದವ್‌ ಜೊತೆಗೆ ದೀವಾನಪನ್‌ ಚಿತ್ರದಲ್ಲಿ ನಟಿಸಿದ್ದಾರೆ. ಅವರು ಹಿಂದಿ ಚಲನಚಿತ್ರಗಳು, ಟಿವಿ ಶೋಗಳು ಮತ್ತು ವೆಬ್‌ ಸರಣಿಗಳಲ್ಲಿ ನಟಿಸಿದ್ದಾರೆ. ಅವರು ಪರಿಶೋಧ್‌ ವೆಬ್‌ ಸರಣಿಯಲ್ಲಿನ ಪಾತ್ರಕ್ಕಾಗಿಯೂ ಹೆಸರುವಾಸಿಯಾಗಿದ್ದಾರೆ.

ಈ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸುತ್ತೇವೆ ಎಂದು ನಗರ ಪೊಲೀಸ್‌‍ ವರಿಷ್ಠಾಧಿಕಾರಿ ರಾಜ್‌ ಹೇಳಿದ್ದಾರೆ. ತಂಡ ರಚಿಸಲಾಗಿದ್ದು, ಕುಟುಂಬ ಸದಸ್ಯರ ವಿಚಾರಣೆ ನಡೆಸಲಾಗುತ್ತಿದ್ದು, ಪ್ರಕರಣದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.

RELATED ARTICLES

Latest News