ಬೆಂಗಳೂರು,ಮೇ.3- ಅಶ್ಲೀಲ ಸಿಡಿ ಪ್ರಕರಣದ ಸಂಬಂಧ ಬಂಧನದ ಭೀತಿಯಿಂದ ವಿದೇಶಕ್ಕೆ ಫಲಾಯನ ಮಾಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲಾಗಿದೆ. ಈ ಹಿಂದೆ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿತ್ತು. ಇದು ಅವರ ಮೇಲೆ ದಾಖಲಾಗಿರುವ 2 ನೇ ಅತ್ಯಾಚಾರ ಪ್ರಕರಣವಾಗಿದೆ.
ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ವಿಶೇಷ ತನಿಖಾ ದಳದ(ಎಸ್‌ಐಟಿ ) ಅಧಿ ಕಾರಿಗಳು ಪ್ರಜ್ವಲ್ ವಿರುದ್ಧ ಐಟಿ ಕಾಯಿದೆ ಅಡಿ ಐಪಿಸಿ ಸೆಕ್ಷನ್ 376 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದು ಸೆಕ್ಷನ್ 376(2) (N) (ಪದೇ ಪದೇ ಅತ್ಯಾಚಾರ ಎಸಗುವುದು), 506 (ಕ್ರಿಮಿನಲ್ ಬೆದರಿಕೆ), 354A (1)(ii) (ಲೈಂಗಿಕ ಪರವಾಗಿ ಬೇಡಿಕೆ), 354 (B) (ಮಹಿಳೆಯ ಮೇಲೆ ಆಕ್ರಮಣ ಅಥವಾ ಕ್ರಿಮಿನಲ್ ಬಲಪ್ರಯೋಗದ ಅಡಿಯಲ್ಲಿ ಆರೋಪಗಳನ್ನು ಪಟ್ಟಿ ಮಾಡುತ್ತದೆ. ಅವಳನ್ನು ವಸಾ್ತ್ರಪಹರಣ ಮಾಡುವ ಉದ್ದೇಶದಿಂದ), ಮತ್ತು 354(ಸಿ) (ನಗ್ನ ಅಥವಾ ಅರೆ-ನಗ್ನ ಚಿತ್ರಗಳ ಅಪ್ಲೋಡ್) ದೂರು ದಾಖಲಿಸಿದೆ.
ಈ ಹಿಂದೆ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ನಲ್ಲಿ ತನಿಖಾಧಿ ಕಾರಿಗಳು ದುರ್ಬಲ ಸೆಕ್ಷನ್‌ಗಳನ್ನು ದಾಖಲಿಸಿದ್ದಾರೆ ಎಂದು ಕೆಲವರು ಆಕ್ಷೇಪಿಸಿದ ಹಿನ್ನೆಲೆಯಲ್ಲಿ ಇದೀಗ ಐಪಿಸಿ ಸೆಕ್ಷನ್ 370 ರಡಿ ದೂರು ದಾಖಲಿಸಿದೆ.
ಅಶ್ಲೀಲ ವಿಡಿಯೋ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿ ಕಾರಿಗಳು ವಿಡಿಯೋದಲ್ಲಿ ಬರುವ ಯಾವುದೇ ಮಹಿಳೆಯರೂ ಮುಕ್ತವಾಗಿ ಬಂದು ತಮ್ಮ ಬಳಿ ಹೇಳಿಕೆ ದಾಖಲಿಸಬೇಕೆಂದು ಎಸ್‌ಐಟಿ ಅಧಿ ಕಾರಿಗಳು ಮನವಿ ಮಾಡಿದ್ದರು. ಇದರಂತೆ ಸಂತ್ರಸ್ತ ಮಹಿಳೆಯೊಬ್ಬಳು ನೀಡಿದ ಹೇಳಿಕೆ ಆಧಾರದ ಮೇಲೆ ಸಿಆರ್‌ಪಿ ಸೆಕ್ಷನ್ 164 ರಡಿ ಹೇಳಿಕೆಯನ್ನು ದಾಖಲಿಸಲಾಗಿದೆ. ಮಹಿಳೆಯ ವಿವರಗಳನ್ನು ತನಿಖಾಧಿ ಕಾರಿಗಳು ಗೌಪ್ಯವಾಗಿ ಇರಿಸಿದ್ದಾರೆ.
ಮತ್ತೊಂದು ನೋಟೀಸ್ :
ಈ ಬೆಳವಣಿಗೆಗಳ ನಡುವೆಯೇ ಪ್ರಕರಣದ ಪ್ರಮುಖ ಆರೋಪಿ ಸ್ಥಾನದಲ್ಲಿರುವ ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಗೂ 2ನೇ ಆರೋಪಿ ಪ್ರಜ್ವಲ್ ರೇವಣ್ಣಗೆ ಎಸ್‌ಐಟಿ ವಿಚಾರಣೆಗೆ ಹಾಜರಾಗುವಂತೆ 2ನೇ ಬಾರಿಗೆ ನೋಟೀಸ್ ಜಾರಿ ಮಾಡಿದೆ.
ಈ ಹಿಂದೆ ಮೊದಲನೇ ನೋಟೀಸ್‌ನಲ್ಲಿ ವಿಚಾರಣೆಗೆ ಹಾಜರಾಗುವಂತೆ ಇಬ್ಬರಿಗೂ ಎಸ್‌ಐಟಿ ಸೂಚನೆ ಕೊಟ್ಟಿತ್ತು. ಆದರೆ ವಿದೇಶದಲ್ಲಿರುವ ಕಾರಣ ವಿಚಾರಣೆಗೆ ಹಾಜರಾಗಲು ಒಂದು ವಾರಗಳ ಕಾಲ ಸಮಯಾವಕಾಶ ನೀಡಬೇಕೆಂದು ಪ್ರಜ್ವಲ್ ರೇವಣ್ಣ ತಮ್ಮ ವಕೀಲ ಅರುಣ್ ಮೂಲಕ ಮನವಿ ಮಾಡಿಕೊಂಡಿದ್ದರು.
ಇತ್ತ ರೇವಣ್ಣ ಕೂಡ ವಿಚಾರಣೆಗೆ ಹಾಜರಾಗದೆ ನ್ಯಾಯಾಲಯಕ್ಕೆ ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಎಸ್‌ಐಟಿ ಮತ್ತೊಂದು ನೋಟೀಸ್ ಜಾರಿ ಮಾಡಿದ್ದು, 24 ಗಂಟೆಯೊಳಗೆ ವಿಚಾರಣೆಗೆ ಹಾಜರಾಗುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಒಂದು ವೇಳೆ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನಿನ ಪ್ರಕಾರ, ಕ್ರಮ ಜರುಗಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ತನಿಖಾಧಿ ಕಾರಿಗಳು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಎಸ್‌ಐಟಿ ದಾಳಿ:
ಎಸ್‌ಐಟಿ ತನಿಖೆಯನ್ನು ಚುರುಕುಗೊಳಿಸಿದ್ದು, ಇನ್ನು ಮುಂದೆ ಹಾಸನದ ವಿವಿಧ ಕಡೆ ಮಾಜಿ ಸಚಿವ ಎಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸೇರಿದ ಮನೆ, ಫಾರಂಹೌಸ್ ಸೇರಿದಂತೆ ಮತ್ತಿತರ ಕಡೆ ದಾಳಿ ನಡೆಸಿ ಪ್ರಕರಣ ಸಂಬಂಧ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದೆ.
ತನಿಖಾ ತಂಡದ ಎಸ್‌ಪಿ ಸೀಮಾ ಲಾಟ್ಕರ್ ನೇತೃತ್ವದಲ್ಲಿ 5 ವಾಹನಗಳಲ್ಲಿ ಮುಂಜಾನೆ 3.15ಕ್ಕೆ ಹಾಸನ ಜಿಲ್ಲೆ, ಹೊಳೆನರಸೀಪುರ ತಾಲ್ಲೂಕಿನ ಪಡವಲಹಿಪ್ಪೆ ಗ್ರಾಮದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಒಡೆತನಕ್ಕೆ ಸೇರಿದ ಫಾರಂಹೌಸ್‌ನಲ್ಲಿ ದಾಳಿ ನಡೆಸಿದೆ.
ನಂತರ ಘನ್ನಿಕಡ, ಕಾನೇನಹಳ್ಳಿ ಬಳಿ ಮತ್ತೊಂದು ಫಾರಂಹೌಸ್‌ಗೆ ಅಧಿ ಕಾರಿಗಳು ದಾಳಿ ನಡೆಸಿ ಮಾಹಿತಿಯನ್ನು ಪಡೆದಿದೆ.
ಪಡವಲಹಿಪ್ಪೆ ಫಾರಂಹೌಸ್‌ನಲ್ಲಿರುವ ಅಸ್ಸಾಂ ಮತ್ತು ಬಿಹಾರಿ ಮೂಲದ ಕಾರ್ಮಿಕರಿಂದ ತನಿಖಾ ತಂಡ ಮಾಹಿತಿಯನ್ನು ಕಲೆ ಹಾಕಿದೆ.ಆರೋಪಿ ಸ್ಥಾನದಲ್ಲಿರುವ ಪ್ರಜ್ವಲ್ ರೇವಣ್ಣ ಇಲ್ಲಿಗೆ ಯಾವ ಸಮಯದಲ್ಲಿ ಬರುತ್ತಿದ್ದರು? ವಾರದಲ್ಲಿ ಎಷ್ಟು ಬಾರಿ ಭೇಟಿ ನೀಡುತ್ತಿದ್ದರು? ಇಲ್ಲಿಯೇ ಉಳಿದುಕೊಳ್ಳುತ್ತಿದ್ದರೇ? ಎಂಬೆಲ್ಲಾ ವಿಷಯಗಳನ್ನು ಕಲೆ ಹಾಕಿದೆ.ವಿಡಿಯೋ ಚಿತ್ರೀಕರಣ ಸಂಬಂಧವೂ ತನಿಖಾ ತಂಡ ಮಾಹಿತಿಯನ್ನು ಕಲೆ ಹಾಕಿದೆ.