ಮುಂಬೈ, ಮೇ 6 (ಪಿಟಿಐ) – ಕಸ್ಟಮ್ಸ ಇಲಾಖೆಯ ಅಧಿಕಾರಿಗಳು ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 4 ದಿನಗಳ ಕಾರ್ಯಾಚರಣೆಯಲ್ಲಿ 8.37 ಕೋಟಿ ರೂಪಾಯಿ ಮೌಲ್ಯದ 12.47 ಕೆಜಿ ಚಿನ್ನ ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಪಡಿಸಿಕೊಂಡಿದೆ.
ಕಳ್ಳಸಾಗಾಣಿಕೆಯಲ್ಲಿ ಭಾಗಿಯಾಗಿದ್ದ 10 ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಕರನದಲ್ಲಿ ವಿವಿಧ ಪ್ರಯಾಣಿಕರು ಚಿನ್ನವನ್ನು ಮೇಣದ ರೂಪದಲ್ಲಿ ಧೂಳು, ಚಿನ್ನದ ಪದರದ ಬಟ್ಟೆಗಳು, ಕಚ್ಚಾ ಆಭರಣಗಳು ಮತ್ತು ಗಟ್ಟಿಗಳು , ನೀರಿನ ಬಾಟಲಿಯಲ್ಲಿ, ದೇಹ ವಿವಿಧ ಭಾಗದಲ್ಲಿ ಅಂಟಿಸಿಕೊಂಡು ಮತ್ತು ಗುದನಾಳದಲ್ಲಿ ಬಚ್ಚಿಟ್ಟಿಕೊಂಡು ಬಂದಿದ್ದು ಕಂಡುಬಂದಿದೆ.
ಇದೇ ವೇಳೆ ವಿಮಾನ ನಿಲ್ದಾಣದಲ್ಲಿ ಗುತ್ತಿಗೆ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ಭಾರತೀಯ ಪ್ರಜೆಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ವಶಕ್ಕೆ ಪಡೆದು ಕಸ್ಟಮ್ಸೌ ಅಧಿಕಾರಿಗಳ ವಶಕ್ಕೆ ಒಪ್ಪಿಸಿದ್ದಾರೆ. ಆತನನ್ನು ಪರೀಕ್ಷೀಸುವ ವೇಳೆ ಆತನ ನೀರಿನ ಬಾಟಲಿಯಲ್ಲಿ 2.58 ಕೆಜಿ ತೂಕದ ಮೇಣದ ರೂಪದಲ್ಲಿ (ಎಂಟು ತುಂಡುಗಳು) ಚಿನ್ನದ ಬಚ್ಚಿಟ್ಟಿರುವುದು ಪತ್ತೆಯಾಗಿದೆ.
ಮತ್ತೊಂದು ಪ್ರಕರಣದಲ್ಲಿ, ದುಬೈನಿಂದ ಬಂದ ನಾಲ್ವರು ಭಾರತೀಯ ಪ್ರಜೆಗಳನ್ನು ತಡೆ ಪರಿಶೀಲಿಸಿದಾಗ ಒಳ ಉಡುಪು, ಗುದನಾಳದಲ್ಲಿ ಬಚ್ಚಿಟ್ಟಿದ್ದ 3.335 ಕೆಜಿ ಚಿನ್ನ ಸಾಗಿಸುತ್ತಿರುವುದು ಪತ್ತೆಯಾಗಿದೆ.ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.
ಇದಲ್ಲದೆ ವಿಮಾನದ ಸೀಟಿನ ಕೆಳಗಿನ ಪೈಪ್‌ಗಳಿಂದ 1.5 ಕೆಜಿ ತೂಕದ ಆರು ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಳ್ಳಲಾಗಿದೆ ಇದ್ದಕ್ಕೆ ಸಂಬಂಧಿಸಿದಂತೆ ಕಸ್ಟಮ್ಸೌ ಸಿಬ್ಬಂದಿ ದುಬೈನಿಂದ ಬಂದ 10, ಮಸ್ಕತ್‌ನಿಂದ ಇಬ್ಬರು ಮತ್ತು ಅಬುಧಾಬಿ, ಬಹ್ರೇನ್ ಮತ್ತು ಜೆಡ್ಡಾದಿಂದ ತಲಾ ಒಬ್ಬರು ಪ್ರಯಾಣಿಕರೂ ಸೇರಿದಂತೆ 15 ಇತರ ಭಾರತೀಯರನ್ನು ವಶಕ್ಕೆ ಪಡೆಯಲಾಗಿದೆ. ಇವರೂ ಕೂಡ ಒಳ ಉಡುಪುಗಳು, ಜೀನ್ಸ್ ಪಾಕೆಟ್‌ಗಳು, ವಿಮಾನ ನಿಲ್ದಾಣದ ಬ್ಯಾಗೇಜ್ ಟ್ರಾಲಿಯ ಬುಟ್ಟಿಯಲ್ಲಿ, ಚ್ಚಿಟ್ಟ 5.32 ಕೆಜಿ ಚಿನ್ನ ಕಳ್ಳಸಾಗನೆ ಪತ್ತೆಯಾಗಿದೆ ಎಂದು ತಿಳಿಸಿದೆ.
ಮತ್ತೊಂದು ಪ್ರಕರಣದಲ್ಲಿ ದುಬೈನಿಂದ ಬಂದ ಪ್ರಯಾಣಿಕನಿಂದ 14.21 ಲಕ್ಷ ರೂಪಾಯಿ ಮೌಲ್ಯದ 9 ಐಫೋನ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಕೈಚೀಲಗಳು ಮತ್ತು ಚೆಕ್‌ಇನ್ ಲಗೇಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.