Thursday, December 25, 2025
Homeಬೆಂಗಳೂರುಬೆಂಗಳೂರಲ್ಲಿ ಬೀದಿ ನಾಯಿಗಳನ್ನು ದತ್ತು ಪಡೆಯಲು ಅವಕಾಶ ಕಲ್ಪಿಸಿದ ಜಿಬಿಎ

ಬೆಂಗಳೂರಲ್ಲಿ ಬೀದಿ ನಾಯಿಗಳನ್ನು ದತ್ತು ಪಡೆಯಲು ಅವಕಾಶ ಕಲ್ಪಿಸಿದ ಜಿಬಿಎ

GBA allows adoption of stray dogs in Bengaluru

ಬೆಂಗಳೂರು, ಡಿ.25- ಪ್ರಾಣಿ ಪ್ರಿಯರು ಬೀದಿ ನಾಯಿಗಳನ್ನು ದತ್ತು ಪಡೆಯಲು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಅವಕಾಶ ಕಲ್ಪಿಸಿಕೊಟ್ಟಿದೆ.ನಗರ ವ್ಯಾಪ್ತಿಯಲ್ಲಿ ಇರುವ ಬೀದಿ ನಾಯಿಗಳನ್ನು ದತ್ತು ಪಡೆದು ಸಾಕಲು ಮುಂದಾಗುವ ಶ್ವಾನ ಪ್ರಿಯರಿಗೆ ಕೇಂದ್ರ ನಗರಪಾಲಿಕೆಯಿಂದ ಹೊಸ ಯೋಜನೆ ಜಾರಿಗೊಳಿಸಲಾಗಿದೆ.

ಜಿಬಿಎಯ ಪಶುಸಂಗೋಪನೆ ಇಲಾಖೆಯಿಂದ ಯೋಜನೆ ಜಾರಿ ಮಾಡಲಾಗಿದ್ದು, ಮಾನವೀಯತೆ ದೃಷ್ಟಿಯಿಂದ ಬೀದಿ ನಾಯಿಗಳನ್ನು ಸಾಕೋದಕ್ಕೆ ಅವಕಾಶ ನೀಡಲಾಗಿದೆ.ಸಾರ್ವಜನಿಕರು, ಸಂಘ ಸಂಸ್ಥೆಗಳು.ಅಪಾರ್ಟ್‌ಮೆಂಟ್‌ ನಿವಾಸಿಗಳು..ಸ್ವಯಂಸೇವಾ ಸಂಸ್ಥೆಗಳು ಬೀದಿ ನಾಯಿಗಳನ್ನು ದತ್ತು ಪಡೆಯಲು ಅವಕಾಶ ನೀಡಲಾಗಿದೆ.

ಜಿಬಿಎ ಇಂದ ದತ್ತು ಪಡೆಯುವ ನಾಯಿಗಳಿಗೆ ಉಚಿತವಾಗಿ ಅರೋಗ್ಯ ತಪಾಸಣೆ, ರ್ಯಾಬಿಸ್‌‍ ಲಸಿಕೆ, ಸಂತಾನ ನಿರೋಧಕ ಶಸ್ತ್ರಚಿಕಿತ್ಸೆ ಮಾಡಿಸಲಾಗುವುದು. ಅಸಕ್ತಿ ವ್ಯಕ್ತಿಗಳು ಜಿಬಿಎ ಪಶುಪಾಲನೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

ಬೀದಿ ನಾಯಿಗಳ ದತ್ತಕವು ಪ್ರಾಣಿಕಲ್ಯಾಣವನ್ನು ಉತ್ತೇಜಿಸುವುದರ ಜೊತೆಗೆ ನಗರದಲ್ಲಿ ಸಹಬಾಳ್ವೆ ಮತ್ತು ಸಾರ್ವಜನಿಕ ಆರೋಗ್ಯದ ರಕ್ಷಣೆಗೆ ಸಹಕಾರಿಯಾಗುತ್ತದೆ.ಆಸಕ್ತ ವ್ಯಕ್ತಿಗಳು ಮತ್ತು ಸಂಸ್ಥೆಗಳು ಹೆಚ್ಚಿನ ಮಾಹಿತಿಗಾಗಿ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ, ಬೆಂಗಳೂರು ಕೇಂದ್ರ ನಗರ ನಿಗಮವನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.

RELATED ARTICLES

Latest News