Sunday, September 8, 2024
Homeಜಿಲ್ಲಾ ಸುದ್ದಿಗಳು | District Newsನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ನೆನಪು ಸರ್ವಕಾಲಿಕ

ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ನೆನಪು ಸರ್ವಕಾಲಿಕ

ಮಹದೇವಪುರ,ಮೇ.8- ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ನೆನಪು ಸರ್ವಕಾಲಿಕವಾದದ್ದು ಎಂದು ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಹಾಗೂ ಸಾಹಿತಿ ಎಂ.ಆರ್‌. ಉಪೇಂದ್ರ ಕುಮಾರ್‌ ತಿಳಿಸಿದರು.

ಕ್ಷೇತ್ರದ ಬಿದರಹಳ್ಳಿಯ ಗುಂಡೂರು ಗ್ರಾಮದಲ್ಲಿ 110ನೇ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಕಸಾಪ ಸಂಸ್ಥಾಪಕರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಕುರಿತ ಏರ್ಪಡಿಸಿದ ವಿಚಾರ ಸಂಕಿರಣದಲ್ಲಿ ಭಾಗಿಯಾಗಿ ಮಾತನಾಡಿದರು.

ಉದ್ಯೋಗದಲ್ಲಿ ಮೀಸಲಾತಿ, ಎಲ್ಲಾ ವರ್ಗದ ಮಕ್ಕಳಿಗೂ ಶಿಕ್ಷಣ ಹಕ್ಕು, ಮೂಲಭೂತ ಅಗತ್ಯಗಳಿಗೆ ಆದ್ಯತೆ, ಆಸ್ಪತ್ರೆಗಳು, ಗ್ರಾಮೀಣಾಭಿವೃದ್ಧಿ, ರಸ್ತೆಯ ಎಡಬಲ ವಿದ್ಯುತ್‌ ದೀಪ, ಕಲಾ ಪೋಷಣೆಯು, ನಮಗೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ನೆನಪು ಸಾರ್ವಕಾಲಿಕ ವೆನ್ನಿಸುತ್ತದೆ.

ಇವರ ಜೀವನ ಪ್ರೀತಿ ರಾಜಕಾರಣಿಗಳಿಗೆ ಮಾದರಿ ಎಂದರು.ಬೆಂಗಳೂರಿಗೆ ವಿದ್ಯುತ್‌ ಶಕ್ತಿ ತಂದವರು, 1915 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಆರಂಭಿಸಿದವರು, ಮೈಸೂರು ವಿಶ್ವವಿದ್ಯಾಲಯ ಸ್ಥಾಪಿದವರು, ಹಲವಾರು ಜಲಾಶಯಗಳು, ಅಣೆಕಟ್ಟುಗಳು, ಗುಡಿ ಕೈಗಾರಿಕೆಗಳು, ಕಾರ್ಖಾನೆಗಳನ್ನು ಉದ್ಘಾಟಸಿದ ಕೀರ್ತಿ ಅವರದ್ದು ಎಂದು ಹೇಳಿದರು.

ಲೇಖಕರು ಹಾಗೂ ಪ್ರಾಂಶುಪಾಲರಾದ ಕೆ ಜಿ ತಾರಾಚಂದ್ರ ಸಿಂಹ, ಸಾಹಿತಿ, ಪ್ರಾಧ್ಯಾಪಕರಾದ ಎಸ್‌‍.ಮಂಜಯ್ಯ ಪ್ರಬಂಧಗಳನ್ನು ಮಂಡಿಸಿದರು, ಕನ್ನಡಪರ ಹೋರಾಟಗಾರ ನಾರಾಯಣರೆಡ್ಡಿ , ಲೇಖಕಿ, ಸಂಪಾದಕಿ, ಡಾ, ಶೈಲಜಾ, ಸಮಾಜ ಸೇವಕರಾದ ಗಂಗಾಧರ್‌ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

RELATED ARTICLES

Latest News