ಬೆಂಗಳೂರು, ಅ.13- ತೆರಿಗೆ ಪಾವತಿಸದೆ ಸಂಚಾರ ಮಾಡುವ ಖಾಸಗಿ ಬಸ್‍ಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿರುವ ಸಾರಿಗೆ ಇಲಾಖೆ ಅಕಾರಿಗಳು ಹಲವು ಬಸ್‍ಗಳನ್ನು ಜಪ್ತಿ ಮಾಡಿ ಭಾರೀ ಪ್ರಮಾಣದ ದಂಡ ವಿಧಿಸಿದ್ದಾರೆ.
ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾದ ಮಲ್ಲಿಕಾರ್ಜುನ, ಜಂಟಿ ಆಯುಕ್ತರಾದ ಶೋಭಾ ಅವರ ಮಾರ್ಗದರ್ಶನದಲ್ಲಿ ಕಸ್ತೂರಿನಗರದ ಸಾರಿಗೆ ಪೂರ್ವ ಕಚೇರಿಯ ಆರ್‍ಟಿಒ ಶ್ರೀನಿವಾಸ ಪ್ರಸಾದ್ ಅವರು ಕಾರ್ಯಾಚರಣೆ ನಡೆಸಿದ್ದು, ಅಖಿಲ ಭಾರತ ರಹದಾರಿ ಹೊಂದಿದ್ದ ಖಾಸಗಿ ಐಶರಾಮಿ ಬಸ್‍ನ್ನು ಜಪ್ತಿ ಮಾಡಿದ್ದಾರೆ.
ಬೆಂಗಳೂರಲ್ಲಿ ಐಟಿ ದಾಳಿ : ಮಂಚದ ಕೆಳಗಿದ್ದ ಕಾಂಚಾಣ ಕಂಡು ಅಧಿಕಾರಿಗಳು ಶಾಕ್.
30 ಸೀಟುಗಳ ಈ ಸ್ಲಿಪರ್ ಕೋಚ್‍ಗೆ ಜುಲೈ 1ನಿಂದ ಎರಡು ತ್ರೈಮಾಸಿಕದಲ್ಲಿ ತೆರಿಗೆ ಪಾವತಿಸಿಲ್ಲ ಎಂದು ಹೇಳಲಾಗಿದೆ. ದಂಡ ಮತ್ತು ತೆರಿಗೆ ಹಿಂಬಾಕಿ ಸೇರಿ 2,19,780 ರೂಪಾಯಿ ಪಾವತಿಸುವಂತೆ ಸಾರಿಗೆ ಇಲಾಖೆ ಬಸ್ ಮಾಲೀಕರಿಗೆ ನೋಟಿಸ್ ನೀಡಿದೆ. ಇದಲ್ಲದೆ ರಹದಾರಿ ನಿಯಮಾವಳಿಗಳನ್ನು ಉಲ್ಲಂಘಿಸಿದ್ದ ಎಂಟು ಬಸ್ ಗಳನ್ನು ಸಾರಿಗೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.