Thursday, May 2, 2024
Homeರಾಜಕೀಯರಾಜ್ಯವನ್ನು ಕತ್ತಲೆಗೆ ತಳ್ಳಿರುವುದು ನಾವಲ್ಲ : ಸಚಿವ ಕೆ.ಜೆ.ಜಾರ್ಜ್

ರಾಜ್ಯವನ್ನು ಕತ್ತಲೆಗೆ ತಳ್ಳಿರುವುದು ನಾವಲ್ಲ : ಸಚಿವ ಕೆ.ಜೆ.ಜಾರ್ಜ್

ಬೆಂಗಳೂರು, ಅ.13- ಬಿಜೆಪಿಯವರು ಆಡಳಿತದಲ್ಲಿದ್ದಾಗ ವಿದ್ಯುತ್ ಉತ್ಪಾದನೆಗೆ ಯಾವುದೇ ಕ್ರಮ ಕೈಗೊಳ್ಳದೆ ಇದ್ದರಿಂದ ಈಗ ರಾಜ್ಯದ ಜನ ಹಾಗೂ ರೈತರು ಸಮಸ್ಯೆ ಅನುಭವಿಸುವಂತಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಆರೋಪಿಸಿದ್ದಾರೆ. ಬಿಜೆಪಿಯ ಟೀಕೆಗೆ ಪ್ರತಿಕ್ರಿಯಿಸಿರುವ ಅವರು, ರಾಜ್ಯವನ್ನು ಕತ್ತಲೆಗೆ ತಳ್ಳಿರುವುದು ನಾವಲ್ಲಲ್ಲ, ಬಿಜೆಪಿಯವರು. ಹಿಂದೆ ನಾಲ್ಕು ವರ್ಷಗಳ ಕಾಲ ವಿದ್ಯುತ್ ಉತ್ಪಾದನೆಗೆ ಬಿಜೆಪಿಯವರು ಯಾವುದೇ ಕೆಲಸ ಮಾಡಲಿಲ್ಲ. ಅವರ ವೈಪಲ್ಯದಿಂದ ರಾಜ್ಯದ ಜನ ಅನುಭವಿಸುವಂತಾಗಿದೆ ಎಂದಿದ್ದಾರೆ.

ಸಿದ್ದರಾಮಯ್ಯ ಅವರು ಮೊದಲ ಹಂತದಲ್ಲಿ ಮುಖ್ಯಮಂತ್ರಿಯಾಗಿದ್ದಾಗ, ಹಲವು ಯೋಜನೆಗಳೊಂದಿಗೆ ಕೇಂದ್ರ ವಿದ್ಯುತ್ ಗ್ರಿಡ್‍ಗೆ ಸಾಕಷ್ಟು ವಿದ್ಯುತ್ ಸೇರ್ಪಡೆ ಮಾಡಲಾಗಿತ್ತು. ಬಿಜೆಪಿಯವರು ನಾಲ್ಕು ವರ್ಷ ಏನನ್ನು ಮಾಡಲಿಲ್ಲ. ಕೂಡಗಿಯಲ್ಲಿನ 250 ಮೆಘಾವ್ಯಾಟ್ ವಿದ್ಯುತ್ ಮಂಜೂರಾತಿಯನ್ನು ಬಳಸಿಕೊಳ್ಳದೆ ದೆಹಲಿಗೆ ಬಿಟ್ಟುಕೊಟ್ಟರು ಎಂದಿದ್ದಾರೆ.

ಕೋವಿಡ್‍ನಂತರ ಹಾಗೂ ಬರಗಾಲದಿಂದಾಗಿ ವಿದ್ಯುತ್ ಬಳಕೆ ದುಪಟ್ಟಾಗಿದೆ. ಕಳೆದ ವರ್ಷ ಮಾರ್ಚ್, ಜೂನ್‍ನಲ್ಲಿ 16 ಸಾವಿರ ಮೇಗಾವ್ಯಾಟ್ ಬೇಡಿಕೆ ಇತ್ತು, ಈಗ ಸೆಪ್ಟಂಬರ್​ನಲ್ಲೇ ಅಷ್ಟು ಬೇಡಿಕೆ ಬಂದಿದೆ. ಅದಕ್ಕಾಗಿ ತೊಂದರೆಯಾಗಿದೆ. ರಾಜ್ಯದಲ್ಲಿ 1500 ಮೆಗಾವ್ಯಾಟ್ ಕೊರತೆ ಇದೆ. ಅಷ್ಟನ್ನು ಖರೀದಿ ಮಾಡುತ್ತಿದ್ದೇವೆ. ಬಿಜೆಪಿಯವರು ಹೇಳಿದಂತೆ ವಿದ್ಯುತ್ ಕಡಿತ ಮಾಡುತ್ತಿಲ್ಲ. ಎಲ್ಲವನ್ನೂ ನಿರ್ವಹಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸರಿ ಹೋಗಲಿದೆ ಎಂದರು.

ನಾನು ಕಾಣೆಯಾಗಿದ್ದೇನೆ ಎಂದು ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ವೇಳೆಯಲ್ಲೇ ನಾನು ಕೇಂದ್ರ ಇಂಧನ ಸಚಿವರನ್ನು ಭೇಟಿಯಾಗಿರುವ ಪೋಟೋವನ್ನು ಹಂಚಿಕೊಂಡಿದ್ದೇನೆ. ರಾಜ್ಯಕ್ಕೆ ಅಗತ್ಯ ಇರುವ ಹೆಚ್ಚಿನ ವಿದ್ಯುತ್ ಪಡೆದುಕೊಳ್ಳಲು ಕೇಂದ್ರ ಸಚಿವರು, ಕೇಂದ್ರ ಇಂಧನ ಇಲಾಖೆ ಕಾರ್ಯದರ್ಶಿ ಸೇರಿದಂತೆ ಹಲವು ಅಧಿಕಾರಿಗಳನ್ನು ಭೇಟಿ ಮಾಡಿ ಸಮಾಲೋಚನೆ ನಡೆಸುತ್ತಿದ್ದೆ. ನಾನು ದೆಹಲಿಯಲ್ಲಿ ರಾಜ್ಯದ ಪರವಾಗಿ ಕೆಲಸ ಮಾಡಿದ್ದೆ ಎಂದು ಹೇಳಿದರು.

ಬೆಂಗಳೂರಲ್ಲಿ ಐಟಿ ದಾಳಿ : ಮಂಚದ ಕೆಳಗಿದ್ದ ಕಾಂಚಾಣ ಕಂಡು ಅಧಿಕಾರಿಗಳು ಶಾಕ್..!

ರಾಜ್ಯವನ್ನು ಕತ್ತಲೆಗೆ ತಳ್ಳಿದ್ದು ಬಿಜೆಪಿಯವರು, ನಾಲ್ಕು ತಿಂಗಳಿನಿಂದ ಬೆಳಕು ಬಂದಿದೆ. ರಾಜ್ಯವನ್ನು ಕತ್ತಲಿನಲ್ಲಿ ಇಟ್ಟ ಕಾರಣಕ್ಕಾಗಿ ಜನ ಬಿಜೆಪಿಯವರಿಗೆ ತಕ್ಕ ಪಾಠ ಕಲಿಸಿದ್ದಾರೆ, ಅಧಿಕಾರ ಕಳೆದುಕೊಂಡು ಹತಾಶರಾಗಿರುವ ಬಿಜೆಪಿಯವರು ಏನಾದರೂ ಒಂದು ಮಾಡಲೇಬೇಕು ಎಂದು ಹೊರಟ್ಟಿದ್ದಾರೆ. ಅವರ ಅಪಪ್ರಚಾರದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದರು.

ವಿದ್ಯುತ್ ಉತ್ಪಾದನೆಗೆ ನಮ್ಮ ಸರ್ಕಾರ ಸಾಕಷ್ಟು ಕ್ರಮ ಕೈಗೊಂಡಿದೆ. ಉಪಸ್ಥಾವರಗಳ ಪಕ್ಕದಲ್ಲಿ ಸೌರ ವಿದ್ಯುತ್ ಉತ್ಪಾದನೆಗೆ ಕ್ರಮ ಕೈಗೊಂಡಿದ್ದೇವೆ. ಪ್ರಧಾನ ಮಂತ್ರಿ ರೈತರ ಇಂಧನ ಭದ್ರತೆ ಮತ್ತು ಉನ್ನತಿ ಅಭಿಯಾನ (ಕುಸುಮ-ಎ) ಅಡಿಯಲ್ಲಿ ಮೂರುವರೆ ಲಕ್ಷ ಪಂಪ್‍ಸೆಟ್‍ಗಳಿಗೆ ಸೌರ ವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆ ಮಂಜೂರಾಗಿತ್ತು, ಹಿಂದಿನ ಸರ್ಕಾರ ಅದರಲ್ಲಿ ಒಂದನ್ನು ಬಳಸಿಕೊಳ್ಳಲಿಲ್ಲ. ಕುಸುಮ ಬಿ ಮತ್ತು ಸಿ ನಲ್ಲಿ 35 ಸಾವಿರ ಮಾಡಬೇಕಿತ್ತು. ಅದನ್ನು ಬಿಜೆಪಿಯವರು ಅಧಿಕಾರಲ್ಲಿದ್ದಾಗ ಮಾಡಲಿಲ್ಲ. ಈಗ ರೈತರಿಗೆ ತೊಂದರೆಯಾಗಿದೆ ಎಂದರು.

ಕೋಟಿ ಕೋಟಿ ಬೆಲೆ ಬಾಳುವ ಚಿನ್ನ, ನಗದು ವಶ

ರಾಜ್ಯದಲ್ಲಿ ಎಂಟು ಸಾವಿರ ಮೇಗಾವ್ಯಾಟ್ ಇದ್ದಂತಹ ಬೇಡಿಕೆ, ಈಗ ಏಕಾಏಕಿ 16 ಸಾವಿರ ಮೇಗಾವ್ಯಾಟ್‍ಗೆ ಹೆಚ್ಚಾಗಿದೆ. ಅದನ್ನು ನಿಭಾಯಿಸುವುದು ಯಾರಿಗಾದರೂ ಕಷ್ಟ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರಚಾರಕ್ಕಾಗಿ ಆರೋಪ ಮಾಡುತ್ತಿದ್ದಾರೆ. ಅವರಿಗೆ ಮಾಹಿತಿ ಇಲ್ಲದಿದ್ದರೆ ಅವರ ಅಣ್ಣ ಹೆಚ್.ಡಿ.ರೇವಣ್ಣನನ್ನು ಕೇಳಿ ತಿಳಿದುಕೊಳ್ಳಲಿ. ಇಲ್ಲವಾದರೆ ನಾನೇ ಸರಿಯಾದ ಮಾಹಿತಿ ಕೊಡುತ್ತೇನೆ ಎಂದರು.

ರಾಜ್ಯದಲ್ಲಿನ ಸಮಸ್ಯೆಯನ್ನು ಬಗೆಹರಿಸಲು ಸೆಕ್ಟನ್ 11 ಜಾರಿಗೆ ತರಲಾಗುತ್ತಿದೆ. ಬೇಡಿಕೆ ಈಡೇರಿಸಲು ಉತ್ತರ ಪ್ರದೇಶ, ಪಂಜಾಬ್‍ನಿಂದ ಹೆಚ್ಚು ವಿದ್ಯುತ್ ಖರೀದಿಸುತ್ತಿದ್ದೇವೆ ಎಂದು ವಿವರಿಸಿದರು.

RELATED ARTICLES

Latest News