ಶ್ರೀನಗರ,ಮೇ9- ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ರಾತ್ರಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಮೋಸ್ಟ್ ವಾಂಟೆಡ್ ಭಯೋತ್ಪಾದಕ ಮತ್ತು ಎಲ್‌ಇಟಿ ಕಮಾಂಡರ್ ಸೇರಿ ಮೂವರ ಹತ್ಯೆಯಾಗಿದೆ.
ರೆಡ್ವಾನಿ ಪಯೀನ್‌ನ ನಿವಾಸಿ ಬಸಿತ್ ಅಹ್ಮದ್ ದಾರ್, ಲಷ್ಕರ್-ಎ-ತೈಬಾ (ಎಲ್‌ಇಟಿ) ಆಫ್‌ಶೂಟ್ ಗ್ರೂಪ್ ಮತ್ತು ದಿ ರೆಸಿಸ್ಟೆಂಟ್ ಫ್ರಂಟ್ (ಟಿಆರ್‌ಎಫ್)ನ ಕಮಾಂಡರ್ ಆಗಿದ್ದ. ನಾಗರಿಕರು ಮತ್ತು ಭದ್ರತಾ ಸಿಬ್ಬಂದಿಯ ಹತ್ಯೆಗಳಲ್ಲಿ ಭಾಗಿಯಾಗಿದ್ದರು. ದಾರ್ ಜೊತೆ ಹತ್ಯೆಗೊಳಗಾದ ಇಬ್ಬರು ಎಲ್‌ಇಟಿ ಭಯೋತ್ಪಾದಕರು ಮೋಮಿನ್ ಗುಲ್ಜಾರ್ ಮತ್ತು ಫಾಹಿಮ್ ಅಹ್ಮದ್ ಬಾಬಾ ಎಂದು ಗುರುತಿಸಲಾಗಿದೆ.
ಕುಲ್ಗಾಮ್‌ನ ರೆಡ್ವಾನಿ ಪ್ರದೇಶದಲ್ಲಿ ಎನ್‌ಕೌಂಟರ್ ಸೈಟ್‌ನ ಸಮೀಪವಿರುವ ಮನೆಗಳ ಹುಡುಕಾಟದ ಸಮಯದಲ್ಲಿ ಭದ್ರತಾ ಪಡೆಗಳು ಮತ್ತು ಅಲ್ಲಿ ಅಡಗಿದ್ದ ಭಯೋತ್ಪಾದಕನ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ಅಧಿ ಕಾರಿಗಳು ತಿಳಿಸಿದ್ದಾರೆ.
18 ಹತ್ಯೆಗಳಲ್ಲಿ ಭಾಗಿಯಾಗಿದ್ದವರನ್ನು ಎನ್‌ಕೌಂಟರ್ ಮಾಡಿರುವುದು ನಮಗೆ ದೊಡ್ಡ ಸಾಧನೆಯಾಗಿದೆ. ಈ ಕಾರ್ಯಾಚರಣೆಯಲ್ಲಿ ಭದ್ರತಾ ಸಿಬ್ಬಂದಿ, ನಾಗರಿಕರು ಮತ್ತು ಅಲ್ಪಸಂಖ್ಯಾತರು ಸೇರಿದ್ದಾರೆ ಎಂದು ಕಾಶ್ಮೀರದ ಪೊಲೀಸ್ ಮಹಾನಿರೀಕ್ಷಕ ವಿ ಕೆ ಬಿರ್ಡಿ ತಿಳಿಸಿದ್ದಾರೆ.
ಕೊಲ್ಲಲ್ಪಟ್ಟ ಭಯೋತ್ಪಾದಕರಲ್ಲಿ ಒಬ್ಬನನ್ನು ಎ ವರ್ಗದ ಭಯೋತ್ಪಾದಕ ಬಸಿತ್ ದಾರ್ ಎಂದು ಗುರುತಿಸಲಾಗಿದೆ. ಭಯೋತ್ಪಾದಕರಿಗೆ ಶರಣಾಗಲು ಅವಕಾಶ ನೀಡಲಾಗಿತ್ತು. ಆದರೆ ಅವರು ಭದ್ರತಾ ಸಿಬ್ಬಂದಿಯ ಮೇಲೆ ತಮ್ಮ ಗುಂಡಿನ ದಾಳಿಯನ್ನು ಮುಂದುವರೆಸಿದರು ಎಂದು ಬಿರ್ಧಿ ಹೇಳಿದ್ದಾರೆ.
ರೆಡ್ವಾನಿ ಗ್ರಾಮದಲ್ಲಿ ಭಯೋತ್ಪಾದಕರ ಚಲನವಲನದ ಬಗ್ಗೆ ಭದ್ರತಾ ಪಡೆಗಳು ಮಾಹಿತಿ ಪಡೆದ ನಂತರ ಅಲ್ಲಿ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಎಂದು ಅವರು ಹೇಳಿದ್ದಾರೆ.