Monday, May 20, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(09-05-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(09-05-2024)

ನಿತ್ಯ ನೀತಿ : ಬರುವಾಗ ಒಂದು ಮಡಿಲು ಅದು ಆ ದೇವರ ಮಹಿಮೆ. ಹೋಗುವಾಗ ನಾಲ್ಕು ಹೆಗಲು ಅದು ನಮ್ಮ ಜೀವನದ ದುಡಿಮೆ.

ಪಂಚಾಂಗ : ಗುರುವಾರ, 09-05-2024
ಕ್ರೋಧಿನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ / ಶುಕ್ಲ ಪಕ್ಷ / ತಿಥಿ: ಪ್ರತಿಪದಾ / ನಕ್ಷತ್ರ: ಕೃತ್ತಿಕಾ / ಯೋಗ: ಶೋಭನ / ಕರಣ: ಬಾಲವ
ಸೂರ್ಯೋದಯ : ಬೆ.05.56
ಸೂರ್ಯಾಸ್ತ : 06.36
ರಾಹುಕಾಲ : 1.30- 3.00
ಯಮಗಂಡ ಕಾಲ : 6.00- 7.30
ಗುಳಿಕ ಕಾಲ : 9.00-10.30

ರಾಶಿಭವಿಷ್ಯ :
ಮೇಷ
: ಆರೋಗ್ಯ ಸಮಸ್ಯೆಗಳನ್ನು ಎದುರಿಸಲು ಹೆಚ್ಚು ವ್ಯಾಯಾಮ ಮಾಡಬೇಕು.
ವೃಷಭ: ಮಕ್ಕಳಿಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಸುವಲ್ಲಿ ಹೆಚ್ಚು ಸಮಯ ಕಳೆಯುವಿರಿ.

ಮಿಥುನ: ಅಂದುಕೊಂಡ ಕೆಲಸ-ಕಾರ್ಯಗಳಲ್ಲಿ ಒಂದಷ್ಟು ಶ್ರಮವಿದ್ದರೂ ತಕ್ಕ ಪ್ರತಿಫಲ ಸಿಗಲಿದೆ.
ಕಟಕ: ಹಲವು ವಿಷಯಗಳ ಬಗ್ಗೆ ಜನರು ನಿಮ್ಮಿಂದ ಸಲಹೆ-ಸೂಚನೆಗಳನ್ನು ಪಡೆಯುವರು.
ಸಿಂಹ: ಹಣಕಾಸು ವಿಚಾರ ದಲ್ಲಿ ದೃಢ ನಿರ್ಧಾರ ಕೈಗೊಳ್ಳುವುದು ಒಳಿತು.

ಕನ್ಯಾ: ಹಿರಿಯರ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸುವುದು ಸೂಕ್ತ.
ತುಲಾ: ಹಿರಿಯ ಅಧಿ ಕಾರಿಗಳ ಆಕಸ್ಮಿಕ ಭೇಟಿಯಿಂದಾಗಿ ಉದ್ಯೋಗ ಪ್ರಾಪ್ತಿಯಾಗಲಿದೆ.
ವೃಶ್ಚಿಕ: ಹಣ ಉಳಿತಾಯ ಮಾಡಲು ಸಾಧ್ಯವಾದಷ್ಟು ಪ್ರಯತ್ನಿಸಿ.

ಧನುಸ್ಸು: ಬಂಧುಗಳಲ್ಲಿ ವಿಶ್ವಾಸ, ಸಂಬಂಧ ಬೆಳೆಸಿಕೊಳ್ಳುವತ್ತ ಪ್ರಯತ್ನಿಸಿ.
ಮಕರ: ಸುಲಭವಾಗಿ ಜೀರ್ಣವಾಗುವಂತಹ ಆಹಾರ ಪದಾರ್ಥಗಳನ್ನು ಸೇವಿಸಿ.
ಕುಂಭ: ಸೇವೆಯ ಆಧಾರದ ಮೇಲೆ ಕೆಲಸದಲ್ಲಿ ಬಡ್ತಿ ದೊರೆಯಲಿದೆ. ಹೆಚ್ಚು ಲಾಭ ಗಳಿಸುವಿರಿ.
ಮೀನ: ತಂದೆಯ ಆರೋಗ್ಯದಲ್ಲಿ ಕೊಂಚ ಏರುಪೇರಾಗಬಹುದು. ಜಾಗ್ರತೆ ವಹಿಸಬೇಕು.

RELATED ARTICLES

Latest News