Saturday, November 1, 2025
Homeರಾಜ್ಯಮಹಿಳೆ ಅಪಹರಣ ಪ್ರಕರಣ : ಮೂವರನ್ನು ವಶಕ್ಕೆ ಪಡೆದು ಎಸ್‌‍ಐಟಿ ವಿಚಾರಣೆ

ಮಹಿಳೆ ಅಪಹರಣ ಪ್ರಕರಣ : ಮೂವರನ್ನು ವಶಕ್ಕೆ ಪಡೆದು ಎಸ್‌‍ಐಟಿ ವಿಚಾರಣೆ

ಬೆಂಗಳೂರು,ಮೇ9- ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌‍ಐಟಿ ಮೂವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.ಮೊಬೈಲ್‌ ಕರೆಗಳನ್ನು ಆಧರಿಸಿ ಕೆ.ಆರ್‌.ನಗರ ತಾಲ್ಲೂಕಿನ ಮೂವರು ಯುವಕರನ್ನು ಎಸ್‌‍ಐಟಿ ಕರೆತಂದು ವಿಚಾರಣೆಗೊಳಪಡಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಹಾಗೂ ಭವಾನಿ ರೇವಣ್ಣ ಅವರ ಸಂಬಂಧಿ ಸತೀಶ್‌ ಬಾಬು ಅವರನ್ನು ಎಸ್‌‍ಐಟಿ ಬಂಧಿಸಿದೆ.ಕೆ.ಆರ್‌.ನಗರ ತಾಲ್ಲೂಕಿನ ಮಹಿಳೆಯೊಬ್ಬರನ್ನು ಅಪಹರಣ ಮಾಡಲಾಗಿದೆ ಎಂದು ಕೆ.ಆರ್‌.ನಗರ ಪೊಲೀಸ್‌‍ ಠಾಣೆಗೆ ಅವರ ಮಗ ದೂರು ನೀಡಿದ್ದರು.

ಪ್ರಚಾರಕ್ಕಾಗಿ ಕೋವಿಶೀಲ್ಡ್ ಲಸಿಕೆ ನೀಡಿ ಜೀವಗಳ ಜೊತೆ ಚೆಲ್ಲಾಟವಾಡಲಾಗಿದೆ : ಕಾಂಗ್ರೆಸ್
- Advertisement -

ಈ ಸಂಬಂಧ ಎಸ್‌‍ಐಟಿ ತನಿಖೆ ನಡೆಸಿ ಅಪಹರಣಕ್ಕೊಳಗಾಗಿದ್ದಾರೆ ಎಂಬ ಮಹಿಳೆಯನ್ನು ಪತ್ತೆಹಚ್ಚಿ ಕರೆತಂದು ವಿಚಾರಣೆಗೊಳಪಡಿಸಿತ್ತು. ಈ ಹಿನ್ನಲೆಯಲ್ಲಿ ಇದೀಗ ಮೂವರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ಹಲವು ಮಾಹಿತಿಗಳನ್ನು ಕಲೆ ಹಾಕಿದೆ.

- Advertisement -
RELATED ARTICLES

Latest News