Friday, November 22, 2024
Homeರಾಜ್ಯಬಾಕಿ ಬಿಲ್ ಪಾವತಿಗೆ ಒಂದು ತಿಂಗಳು ಡೆಡ್‍ಲೈನ್ ನೀಡಿದ ಕೆಂಪಣ್ಣ

ಬಾಕಿ ಬಿಲ್ ಪಾವತಿಗೆ ಒಂದು ತಿಂಗಳು ಡೆಡ್‍ಲೈನ್ ನೀಡಿದ ಕೆಂಪಣ್ಣ


ಬೆಂಗಳೂರು,ಅ.13- ಒಂದು ತಿಂಗಳೊಳಗೆ ಬಾಕಿ ಬಿಲ್ ಬಿಡುಗಡೆ ಮಾಡದಿದ್ದರೆ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನೆ ನಡೆಸಲಾಗುವುದೆಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಎಚ್ಚರಿಕೆ ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಗುತ್ತಿಗೆದಾರರ ಸಮಸ್ಯೆಗಳು ಬಗೆಹರಿಯುವುದಕ್ಕಿಂತ ಮತ್ತಷ್ಟು ಸಮಸ್ಯೆಗಳು ಸೇರ್ಪಡೆಯಾಗಿವೆ.

ಈಗಾಗಲೇ ಹಲವು ವರ್ಷಗಳಿಂದ ಗುತ್ತಿಗೆದಾರರು ಬಾಕಿ ಬಿಲ್ ಬಿಡುಗಡೆ ಜಿಎಸ್‍ಟಿ ಗೊಂದಲ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾ ಬಂದಿದ್ದೇವೆ. ಕಾಂಗ್ರೆಸ್ ಸರ್ಕಾರ ರಚನೆಯಾದಾಗ ಗುತ್ತಿಗೆದಾರರಿಗೂ ಬಾಕಿಗಳನ್ನು ಕರುಣಿಸಲಾಗುತ್ತದೆ ಎಂದು ನಿರೀಕ್ಷೆ ಮಾಡಿದ್ದೇವು, ಆದರೆ ಹಳೆ ಸಮಸ್ಯೆಗಳ ಜೊತೆಗೆ ಹೊಸ ಸಮಸ್ಯೆಗಳು ಸೇರ್ಪಡೆಯಾಗಿವೆ. ತಮಗೆ ಬೇಕಾದ ಕೆಲ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಲಾಗುತ್ತಿದೆ. ಈ ಬಗ್ಗೆ ಕೇಳಿದರೆ ನಮಗೆ ಗೊತ್ತಿಲ್ಲ ಎಂದು ಎಂಜಿನಿಯರ್‍ಗಳು ಹೇಳುತ್ತಿದ್ದಾರೆ. ಕೆಲ ಗುತ್ತಿಗೆದಾರರು ಶಿಫಾರಸು ತಂದರೆ ಕಮಿಷನ್ ಪಡೆದು ರಾತ್ರೋರಾತ್ರಿ ಚೆಕ್ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಇಸ್ರೇಲ್‍ನಿಂದ ತಾಯ್ನಾಡಿಗೆ ಬಂದಿಳಿದ ಭಾರತೀಯರು

ಗುತ್ತಿಗೆದಾರರು ಸಾಲಸೋಲ ಮಾಡಿ ಕಾಮಗಾರಿ ಮಾಡಿದ್ದು, ಮಾಡಿರುವ ಸಾಲ ಕಟ್ಟಲಾಗದೆ ಕೆಲವರು ಊರು ಬಿಡುತ್ತಿದ್ದಾರೆ. ಈಗಾಗಲೇ ಹುಬ್ಬಳ್ಳಿಯಲ್ಲಿ ಒಬ್ಬರು ವಿಷ ಸೇವಿಸಿದ್ದಾರೆ. ಪ್ರತಿ ಬಾರಿ ಸರ್ಕಾರಗಳು ಹಿಂದಿನ ಸರ್ಕಾರಗಳ ಮೇಲೆ ಬೆರಳು ಮಾಡುತ್ತಿವೆ. ನಾವು ಕಷ್ಟದಲ್ಲಿದ್ದೇವೆ, ನಮ್ಮ ಪರಿಸ್ಥಿತಿಯಂತೂ ಅಯೋಮಯವಾಗಿದೆ. ಜೀವನವೇ ಕಷ್ಟವಾಗಿದೆ. ಇನ್ನು ಜಿಎಸ್‍ಟಿ ಎಲ್ಲಿಂದ ಕಟ್ಟೋಣ. ಪಾಲಿಕೆಯ ಪರಿಸ್ಥಿತಿಯಂತೂ ಹೇಳುವುದಕ್ಕೇ ಆಗಲ್ಲ. ನಮ್ಮ ಅಕೌಂಟ್‍ಗಳು ಈಗಾಗಲೇ ಫ್ರೀಜ್ ಆಗಿವೆ.

ರಾಜ್ಯದ ಬಹುತೇಕ ಕೆಲಸಗಳನ್ನು ಆಂಧ್ರದವರು ಮಾಡುತ್ತಿದ್ದಾರೆ. ನಾವು ಅರ್ಹರಾಗಿದ್ದರೂ ಕೂಡ ಇಲ್ಲದಂತಾಗಿದ್ದೇವೆ ಎಂದರು.
ಬಾಕಿ ಬಿಲ್ ಬಿಡುಗಡೆಗೆ ಆಗ್ರಹಿಸಿ ಹಲವು ಬಾರಿ ಮುಖ್ಯಮಂತ್ರಿಗಳ ಗಮನಕ್ಕೆ ಕೂಡ ತರಲಾಗಿತ್ತು. ವಿವಿಧ ಇಲಾಖೆಗಳಿಂದ ಸುಮಾರು 20 ಸಾವಿರ ಕೋಟಿ ರೂ.ಗಳಿಗಿಂತಲೂ ಅಕ ಮೊತ್ತವನ್ನು ಬಾಕಿ ಉಳಿಸಿಕೊಳ್ಳಲಾಗಿದೆ. ಈ ಮೊತ್ತವನ್ನು ಒಂದೇ ಬಾರಿ ಅಲ್ಲದಿದ್ದರೂ, ಹಂತ-ಹಂತವಾಗಿ ಬಿಡುಗಡೆ ಮಾಡಿ ಸರ್ಕಾರ ಪ್ರಾಮಾಣಿಕತೆಯನ್ನು ತೋರಬೇಕಾಗಿತ್ತು, ಆದರೆ ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಾ ಬಂದಿದೆ.


ಪ್ರಮುಖವಾಗಿ ಗುತ್ತಿಗೆದಾರರು ಕೆಲಸ ನಿರ್ವಹಿಸುವ ಜಲಸಂಪನ್ಮೂಲ, ಸಣ್ಣ ನೀರಾವರಿ ಲೋಕೋಪಯೋಗಿ ಮತ್ತು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಗಳಲ್ಲೂ ಸಹ ಹೊಸ ಸಮಸ್ಯೆಗಳು ಸೃಷ್ಠಿಯಾಗಿದೆ ಎಂದರು.ವಿವಿಧ ಕಾಮಗಾರಿಗಳನ್ನು ವರ್ಗಿಕರಿಸಿ ಅನುದಾನವನ್ನು ಬಿಡುಗಡೆ ಮಾಡುವ ಬಿಬಿಎಂಪಿ ಹೊಸ ಸಂಪ್ರದಾಯವನ್ನು ಹುಟ್ಟು ಹಾಕಿದೆ. ಈ ಸಂಬಂಧ ಉಪಮುಖ್ಯಮಂತ್ರಿಗಳು, ಬಿಬಿಎಂಪಿ ಆಯುಕ್ತರು ಮತ್ತು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರೂ ಪ್ರಯೋಜನವಾಗಲಿಲ್ಲ.

ಕೆಲವು ವರ್ಗಗಳಿಗೆ ಕಾಮಗಾರಿ ಮುಗಿದ ಕೂಡಲೇ ಅನುದಾನ ಲಭ್ಯವಾದರೆ ಇನ್ನೂ ಕೆಲವು ವರ್ಗಗಳಲ್ಲಿ ವರ್ಷಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದು ತಾರತಮ್ಯಕ್ಕೆ ಕಾರಣವಾಗಿದೆ.ಪ್ರಭಾವಿ ಮತ್ತು ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ಈ ನಿಯಮಗಳನ್ನು ರೂಪಿಸಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ.

ಬಾಕಿ ಮೊತ್ತವನ್ನು ಹಿರಿತನದ ಆಧಾರದಲ್ಲಿಯೇ ಬಿಡುಗಡೆ ಮಾಡಬೇಕೆಂದು ಹೈಕೋರ್ಟ್ ತೀರ್ಪು ನೀಡುತ್ತದೆ. ಯಾವುದೇ ವರ್ಗವಾದರೂ, ಎಲ್ಲವೂ ಕಾಮಗಾರಿಗಳ ಪಟ್ಟಿಯ ಅಡಿಯಲ್ಲೇ ಬರುತ್ತದೆ. ಆದರೂ ತಾರತಮ್ಯ ಮತ್ತು ಆರ್ಥಿಕ ಅಸಮಾನತೆಯನ್ನು ಏಕೆ ಜಾರಿಗೊಳಿಸುತ್ತೀರಿ ಎಂದು ಪ್ರಶ್ನಿಸಿದರು.

ಇನ್ನೊಂದು ತಿಂಗಳೊಳಗೆ ಎಲ್ಲಾ ಇಲಾಖೆಗಳಲ್ಲೂ ಬಾಕಿ ಉಳಿಸಿಕೊಂಡಿರುವ ಶೇ. 50ರಷ್ಟು ಬಾಕಿ ಮೊತ್ತವನ್ನು ಬಿಡುಗಡೆ ಮಾಡಲೇಬೇಕು. ಯಾವುದೇ ಸಬೂಬು ಹೇಳದೆ ತನಿಖೆ ಆಯೋಗದ ಹೆಸರಿನಲ್ಲಿ ಮುಂದೂಡಬಾರದು, ಇಲ್ಲವಾದಲ್ಲಿ ಬೆಂಗಳೂರು ಸೇರಿದಂತೆ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದೆಂದು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಕಲೆಕ್ಷನ್ ಜಾತ್ರೆ ನಡೆಸುತ್ತಿದೆ : ಯತ್ನಾಳ್

ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ನಿವಾಸದ ಮೇಲೆ ಐಟಿ ದಾಳಿ ವಿಚಾರ ಕುರಿತಂತೆ ಮಾತನಾಡಿದ ಅವರು, ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಕೃಷಿ, ಜಲ್ಲಿ ಕ್ರಷರ್ ಸೇರಿದಂತೆ ಹಲವು ವ್ಯಾಪಾರಗಳಿವೆ. ಈಗಾಗಲೇ ಕಂಟ್ರಾಕ್ಟರ್ ಕೆಲಸವನ್ನು ಸಹ ಬಿಟ್ಟಿದ್ದಾರೆ. ಐಟಿ ದಾಳಿ ವಿಚಾರದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಅವರು ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳುತ್ತೇವೆ. ಸರ್ಕಾರ ಇದೆ, ಐಟಿ ಅಕಾರಿಗಳಿದ್ದಾರೆ, ಅವರು ತನಿಖೆ ಮಾಡಲಿದ್ದಾರೆ ಎಂದರು.

RELATED ARTICLES

Latest News