Wednesday, September 18, 2024
Homeರಾಜ್ಯಕರ್ನಾಟಕದಲ್ಲಿ ಕಾಂಗ್ರೆಸ್ ಕಲೆಕ್ಷನ್ ಜಾತ್ರೆ ನಡೆಸುತ್ತಿದೆ : ಯತ್ನಾಳ್

ಕರ್ನಾಟಕದಲ್ಲಿ ಕಾಂಗ್ರೆಸ್ ಕಲೆಕ್ಷನ್ ಜಾತ್ರೆ ನಡೆಸುತ್ತಿದೆ : ಯತ್ನಾಳ್

ಬೆಂಗಳೂರು,ಅ.13- ಕರ್ನಾಟಕದಲ್ಲಿ ಕಾಂಗ್ರೆಸ್ ಕಲೆಕ್ಷನ್ ಜಾತ್ರೆ ನಡೆಸುತ್ತಿದೆ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಪೋಸ್ಟ್ ಮಾಡಿರುವ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಕಲೆಕ್ಷನ್ ಜಾತ್ರೆ ನಡೆಸುತ್ತಿದೆ. ಮಹದೇವಪ್ಪನ ದುಡ್ಡು , ಕಾಕ ಪಾಟೀಲನ ದುಡ್ಡು , ದಯಾನಂದನ ದುಡ್ಡು ಎಂದು ಯತ್ನಾಳ್ ಕುಹುಕವಾಡಿದ್ದಾರೆ.

ಸಿಕ್ಕಿಬಿದ್ದಿರುವ 42 ಕೋಟಿ ನಗದಿನಲ್ಲಿ 4ನೇ 1ರಷ್ಟು ರಾಜಸ್ಥಾನಕ್ಕೆ, 4ನೇ 1ರಷ್ಟು ಮಧ್ಯಪ್ರದೇಶಕ್ಕೆ, 4ನೇ 1ರಷ್ಟು ತೆಲಂಗಾಣಕ್ಕೆ ಹಾಗೂ 4ನೇ 1ರಷ್ಟು ಛತ್ತೀಸ್‍ಘಡಕ್ಕೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ನಾಯಕಿ ಮಾಜಿ ಕಾಪೆರ್ರೇಟರ್ ಅಶ್ವಥಮ್ಮ ಅವರ ಪತಿ ಅಂಬಿಕಾಪತಿಯ ಮಗಳ ಮನೆಯಲ್ಲಿ ಐಟಿ ಅಧಿಕಾರಿಗಳು ವಶಪಡಿಸಿಕೊಂಡಿರುವ 42 ಕೋಟಿ ಹಣ! ಈತ ಯಾರ ಚಿರಂಜೀವಿಯವರ ಪರವಾಗಿ ಹಣ ಸಂಗ್ರಹ ಮಾಡುತ್ತಿದ್ದ ಎಂದು ಗುತ್ತಿಗೆದಾರರು ಕೇಳಿದರೆ ನಿಜ ಹೊರಬರಬಹುದು ಎಂದು ಹೇಳಿದ್ದಾರೆ.

ಗುತ್ತಿಗೆದಾರರ ಸಂಘದ ಉಪಾಧ್ಯಕ್ಷನೇ ಸರ್ಕಾರದ ಪರವಾಗಿ ವಸೂಲಿಗಿಳಿದರೆ ಗುತ್ತಿಗೆದಾರರನ್ನು ಕಾಪಾಡುವವರು ಯಾರು? ಈ ಹಣ ಯಾರದ್ದು ಎಂಬುದರ ಬಗ್ಗೆ ತನಿಖೆಯಾಗಲಿ ಎಂದು ಯತ್ನಾಳ್ ಒತ್ತಾಯಿಸಿದ್ದಾರೆ.

RELATED ARTICLES

Latest News