ಬೆಂಗಳೂರು,ಅ.13- ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಮನೆಯಲ್ಲಿ ಸಿಕ್ಕ ನಗದನ್ನು ಲೆಕ್ಕ ಹಾಕಲು ಐಟಿ ಅಕಾರಿಗಳು ನೋಟು ಎಣಿಸುವ ಯಂತ್ರ(ಕೌಂಟಿಂಗ್ ಮಿಷನ್) ತರಿಸಿದ ಪ್ರಸಂಗವೂ ಜರುಗಿದೆ.
42 ಕೋಟಿ ನಗದು ಕಂಡು ಬೆಚ್ಚಿಬಿದ್ದ ಐಟಿ ಅಕಾರಿಗಳು ಅಷ್ಟು ದೊಡ್ಡ ಮೊತ್ತವನ್ನು ಲೆಕ್ಕ ಹಾಕಲು ಸಾಧ್ಯವಾಗಲಿಲ್ಲ. ಹೀಗಾಗಿ ಮಾನ್ಯತಾ ಟೆಕ್‍ಪಾರ್ಕ್‍ನಲ್ಲಿರುವ ಅವರ ಮನೆಗೆ ನಾಲ್ಕು ಕೌಂಟಿಂಗ್ ಮಿಷನ್‍ಗಳನ್ನು ತರಲಾಯಿತು.
ಪೋಕ್ಸೋ ಪ್ರಕರಣ : ಪರಮಶಿವಯ್ಯಗೆ ಹೈಕೋರ್ಟ್ ಜಾಮೀನು
ಬೆಂಗಳೂರಿನಲ್ಲಿರುವ ಐಟಿ ಕಚೇರಿಯ ಇನ್ನೊಂದು ತಂಡ ಎರಡು ಪ್ರತ್ಯೇಕ ಕಾರುಗಳಲ್ಲಿ ಕೌಂಟಿಂಗ್ ಮಿಷನ್ ತಂದು ಬೆಳಗ್ಗೆಯಿಂದಲೇ ನಗದಿನ ಮೊತ್ತವನ್ನು ಕಲೆ ಹಾಕಿದರು.
ಇದೇ ಸಂದರ್ಭದಲ್ಲಿ ಅಂಬಿಕಾಪತಿ ಮನೆಯಲ್ಲಿದ್ದ ಅಪಾರ ಪ್ರಮಾಣದ ಬಂಗಾರವನ್ನು ಸಹ ಲೆಕ್ಕ ಹಾಕಲು ಅಕ್ಕಸಾಲಿಗರನ್ನು ಕರೆಸಿದರು. ಭಾರೀ ಪ್ರಮಾಣದಲ್ಲಿ ಬೆಲೆಬಾಳುವ ಆಭರಣಗಳನ್ನು ಖರೀದಿಸಿದ್ದರು ಎನ್ನಲಾಗಿದೆ. ಹೀಗಾಗಿ ಐಟಿ ತಂಡ ಅಕ್ಕಸಾಲಿಗರನ್ನು ಕರೆಸಿ ವಜ್ರಾಭರಣಗಳ ಮೌಲ್ಯದ ಒಟ್ಟು ಮೊತ್ತವನ್ನು ಕಲೆ ಹಾಕಿತು.