Sunday, May 5, 2024
Homeಬೆಂಗಳೂರುಬೆಂಗಳೂರಿಗೆ ಸುರಂಗ ಮಾರ್ಗ ಅಗತ್ಯವೇ.. ? ಯೋಜನೆ ಹಿಂದೆ ಹಲವು ಅನುಮಾನ

ಬೆಂಗಳೂರಿಗೆ ಸುರಂಗ ಮಾರ್ಗ ಅಗತ್ಯವೇ.. ? ಯೋಜನೆ ಹಿಂದೆ ಹಲವು ಅನುಮಾನ

ಬೆಂಗಳೂರು,ಅ.13- ಬೆಂಗಳೂರಿನ ಸಂಚಾರ ದಟ್ಟಣೆಯನ್ನು ತಗ್ಗಿಸಲು ಪ್ರಸ್ತಾವಿತ ಸುರಂಗ ಮಾರ್ಗಗಳು ಆರ್ಥಿಕವಾಗಿ ಹಾಗೂ ಭೌತಿಕವಾಗಿ ಉತ್ತಮವಲ್ಲ. ಈ ಹಿಂದಿನ ಪೂರ್ವ-ಪಶ್ಚಿಮ, ಉತ್ತರ-ದಕ್ಷಿಣ ಕಾರಿಡಾರ್‌ನ್ನು ಜೋಡಿಸುವ ಯೋಜನೆಯಂತೆಯೇ ಇದು ಕೂಡ ವೈಫಲ್ಯ ಕಾಣಲಿದೆ ಎಂಬ ಅಭಿಪ್ರಾಯಗಳು ಕೇಳಿಬಂದಿದೆ.

ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಬೆಂಗಳೂರು ನಗರಾಭಿವೃದ್ಧಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಬ್ರಾಂಡ್ ಬೆಂಗಳೂರು ನಿರ್ಮಾಣಕ್ಕೆ ಮುಂದಾಗಿದ್ದಾರೆ. ಅದರಲ್ಲಿ ಬೆಂಗಳೂರಿನ ವಾಯುಮಾಲಿನ್ಯ ಶಬ್ದ ಮಾಲಿನ್ಯ ತಡೆ ಮತ್ತು ಸಂಚಾರ ದಟ್ಟಣೆಯನ್ನು ನಿರ್ಮೂಲನೆ ಮಾಡುವ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಹೊಂದಿವೆ.

ಸುಮಾರು 195 ಕಿ.ಮೀ ಉದ್ದ ಸುರಂಗ ಮಾರ್ಗ ನಿರ್ಮಿಸುವ ಕುರಿತು ಪ್ರಸ್ತಾಪಿಸಲಾಗಿದೆ. ಅದರಲ್ಲಿ ಬಳ್ಳಾರಿ ರಸ್ತೆಯಿಂದ ಹಳೆ ಮದ್ರಾಸ್ ರಸ್ತೆ, ಎಸ್ಟೀಮ್ ಮಾಲ್, ಮೇಕ್ರಿವೃತ್ತ, ಮಿಲ್ಲರ್ ರಸ್ತೆ, ಚಾಲುಕ್ಯವೃತ್ತ, ಟ್ರಿನಿಟಿ ಸರ್ಕಲ್, ಸರ್ಜಾಜಪುರ ರಸ್ತೆ, ಹೊಸೂರು ರಸ್ತೆ, ಕನಕಪುರ ರಸ್ತೆ, ಕೃಷ್ಣರಾವ್ ಪಾರ್ಕ್, ಮೈಸೂರು ರಸ್ತೆ, ಸಿರ್ಸಿ ರಸ್ತೆ, ಮಾಗಡಿ ರಸ್ತೆ, ತುಮಕೂರು ರಸ್ತೆಯಿಂದ ಯಶವಂತಪುರ ಜಂಕ್ಷನ್, ಗೊರಗುಂಟೆಪಾಳ್ಯ, ಕೆ.ಆರ್.ಪುರಂ, ಸಿಲ್ಕ್ ಬೋರ್ಡ್ ಒಳಗೊಂಡಂತೆ ಹೊರವರ್ತುಲ ರಸ್ತೆಯಲ್ಲಿ ಹೆಚ್ಚಿರುವ ಸಂಚಾರ ದಟ್ಟಣೆಯನ್ನು ತಗ್ಗಿಸಲು ಸುರಂಗ ಮಾರ್ಗ ಮತ್ತು ಮೇಲ್ಸೇತುವೆಗಳನ್ನು ನಿರ್ಮಿಸುವ ಪ್ರಸ್ತಾವನೆ ಇದೆ.

ಈ ಯೋಜನೆಗಳ ಕಾರ್ಯಾನುಷ್ಠಾನದ ಕುರಿತು ವಿಸ್ತೃತ ಯೋಜನಾ ವರದಿ ತಯಾರಿಸಲು 45 ದಿನಗಳಲ್ಲಿ ಟೆಂಡರ್ ಕರೆಯಲಾಗುವುದು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಯೋಜನೆ ಅನುಷ್ಠಾನಕ್ಕೆ ಸಾಕಷ್ಟು ತಾಂತ್ರಿಕ ಸಮಸ್ಯೆಗಳಿದ್ದು, ಮೇಲ್ನೋಟಕ್ಕೆ ಸುರಂಗ ಮಾರ್ಗ ಬೆಂಗಳೂರಿನಂತಹ ನಗರಕ್ಕೆ ಔಚಿತ್ಯವೇ ಎಂಬ ಪ್ರಶ್ನೆ ಕಾಡುತ್ತಿದೆ.

ಮಹಾನಗರಿಯಲ್ಲಿ ಪ್ರತಿ ಅಡಿ ಜಾಗಕ್ಕೂ ಚಿನ್ನದ ಬೆಲೆಯಿದ್ದು, ಸುರಂಗ ಮಾರ್ಗ ಇಳಿಯುವ ಮತ್ತು ಅದು ಮೇಲ್ಭಾಗದಲ್ಲಿ ಹೊರಬರುವ ಜಾಗಗಳನ್ನು ಗುರುತಿಸಲು ಕಷ್ಟಸಾಧ್ಯವಾಗಿದೆ. ಬೆಂಗಳೂರಿನ ಕೇಂದ್ರ ಭಾಗದಲ್ಲಂತೂ ಇದು ದುಸ್ತರ ಎಂದು ಖುದ್ದು ಡಿ.ಕೆ.ಶಿವಕುಮಾರ್ ಅವರೇ ಹೇಳಿದ್ದಾರೆ. ಅದರ ಹೊರತಾಗಿಯೂ ಯೋಜನೆ ಜಾರಿಗೆ ಮುಂದಾಗಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಪೋಕ್ಸೋ ಪ್ರಕರಣ : ಪರಮಶಿವಯ್ಯಗೆ ಹೈಕೋರ್ಟ್ ಜಾಮೀನು

ಸುರಂಗ ಮಾರ್ಗದ ಯೋಜನೆಗಳ ಕುರಿತು ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯ ಸುಸ್ಥಿರ ಸಾರಿಗೆ ಪ್ರಯೋಗಾಲಯದ ಸಾರಿಗೆ ವ್ಯವಸ್ಥೆಗಳ ಇಂಜಿನಿಯರಿಂಗ್ ಕೋಶ ಅಧ್ಯಯನ ನಡೆಸಿದೆ. 2020ರಿಂದ 2030ರ ಅವಯ ವಾಹನಗಳ ದಟ್ಟಣೆಯನ್ನು ಅಂದಾಜಿಸಿ, ಹೊಸದಾಗಿ ಪ್ರಸ್ತಾಪಿಸಲಾಗಿರುವ ಸುರಂಗ ರಸ್ತೆ ನಿರ್ಮಾಣ, ಸುರಂಗ ಹೊರತಾದ ರಸ್ತೆ ಹಾಗೂ ಮೆಟ್ರೋ ಸೇರಿ ಮೂರು ಮಾದರಿಗಳನ್ನು ಭಾರತೀಯ ವಿಜ್ಞಾನ ಸಂಸ್ಥೆ ಅಧ್ಯಯನ ನಡೆಸಿದೆ.

3.5 ಮೀಟರ್ ಅಗಲದ ಸುರಂಗ ರಸ್ತೆಯ ಒಂದು ದಿಕ್ಕಿನಲ್ಲಿ 1200 ಪ್ರಯಾಣಿಕರು ಸಂಚರಿಸಬಹುದು. ಅಷ್ಟೇ ವಿಸ್ತೀರ್ಣದ ಮೆಟ್ರೋ ಮಾರ್ಗದಲ್ಲಿ 9 ಕಾರ್ ಕೋಚ್‍ಗಳ ಮೂಲಕ 69 ಸಾವಿರ ಮಂದಿ ಪ್ರಯಾಣಿಸಬಹುದಾಗಿದೆ. ಹೀಗಾಗಿ ಸುರಂಗ ಮಾರ್ಗಕ್ಕಿಂತಲೂ ಮೆಟ್ರೊ 40 ಪಟ್ಟು ಲಾಭದಾಯಕವಾಗಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ ವಿಶ್ಲೇಷಿಸಿದೆ.

ಮೆಟ್ರೊ ಸುರಂಗ ಮಾರ್ಗ ಕೊರೆಯಲು ಬಳಸಿದ ಬೋರಿಂಗ್ ಮಿಷನ್‍ನನ್ನೇ ಸುರಂಗ ಮಾರ್ಗ ರಸ್ತೆ ಯೋಜನೆಗೂ ಬಳಸಲಾಗುತ್ತದೆ. ಹೀಗಾಗಿ ಎರಡು ಮಾರ್ಗಗಳ ನಿರ್ಮಾಣ ವೆಚ್ಚ ಸರಿಸುಮಾರು ಒಂದೇ ಆಗಿದೆ. ಆದರೆ ಮೆಟ್ರೋದಲ್ಲಿ ಹೆಚ್ಚು ಜನ ಸುರಕ್ಷಿತ ಹಾಗೂ ಸುಲಭವಾಗಿ ಪ್ರಯಾಣಿಸಲು ಅವಕಾಶವಿದೆ ಇದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಸಾರಿಗೆ ಕೋಶದ ಸಂಚಾಲಕರಾದ ಪ್ರೊ.ಆಶೀಶ್ ವರ್ಮಾ ತಿಳಿಸಿದ್ದಾರೆ.

ಅಧ್ಯಯನ ವರದಿಯ ಪ್ರಕಾರ ಬಸ್ಸು, ದ್ವಿಚಕ್ರ ವಾಹನ ಕಾರುಗಳ ಸ್ಥಳ ಸ್ವಾೀಧಿನ ಪ್ರಮಾಣ ಹೆಚ್ಚಾಗಿದೆ. ಲಘು ರೈಲು ಸಂಚಾರ ವ್ಯವಸ್ಥೆಯ ಏಕಮುಖ ಮಾರ್ಗ ಒಂದು ಗಂಟೆಗೆ 30ರಿಂದ 40 ಸಾವಿರ ಜನರ ಸಂಚಾರಕ್ಕೆ ಅವಕಾಶ ಕಲ್ಪಿಸಲಿದೆ. ಇದು ಸುರಂಗ ಮಾರ್ಗಕ್ಕಿಂತಲೂ 22 ಪಟ್ಟು ಹೆಚ್ಚಾಗಲಿದೆ.

ಕಿಲೋಮೀಟರ್ ಅಂದಾಜಿನಲ್ಲಿ ವಾಹನಗಳ ಸಂಚಾರದ ಅವಲೋಕನವು ಸುರಂಗ ರಸ್ತೆಗಿಂತಲೂ ಮೆಟ್ರೋದಲ್ಲಿ ಹೆಚ್ಚು ಸುಗಮ. ಮೆಟ್ರೋದಿಂದ 5.3ರಷ್ಟು ವಾಹನ ದಟ್ಟಣೆ ತಗ್ಗಿದರೆ, ಸುರಂಗ ಮಾರ್ಗದಿಂದ ಕೇವಲ 2.7ರಷ್ಟು ಮಾತ್ರ ಕಡಿಮೆಯಾಗಲಿದೆ. ಮೆಟ್ರೋವನ್ನೇ ಬಳಸಿದರೆ 2031ರ ವೇಳೆಗೆ ಕಾರ್ಬನ್ ಡೈ ಆಕ್ಸೈಡ್ ಮಾಲಿನ್ಯದ ಪ್ರಮಾಣ ಶೇ.18.6 ಮತ್ತು ಶೇ.14.8ರಷ್ಟು ತಗ್ಗುವ ಸಾಧ್ಯತೆ ಇದೆ. ಕಾರ್ಬೋ ಮೊನಾಕ್ಸೈಡ್ ಶೇ.27.2 ಮತ್ತು ನೈಟ್ರೋ ಆಕ್ಸೈಡ್ ಪ್ರಮಾಣ ಶೇ.11.3ರಷ್ಟು ತಗ್ಗಲಿದೆ.

ರಾಜ್ಯದ 216 ತಾಲ್ಲೂಕುಗಳು ಬರಪೀಡಿತ ; ಸರ್ಕಾರ ಘೋಷಣೆ

ಇದಕ್ಕಿಂತಲೂ ಆತಂಕಕಾರಿ ಎಂದರೆ ಸುರಂಗ ರಸ್ತೆಯಿಂದ 2031ರ ವೇಳೆಗೆ ಸಾವಿನ ಪ್ರಮಾಣ ವರ್ಷಕ್ಕೆ 1069ರಷ್ಟು ಹೆಚ್ಚಾಗಲಿದೆ. ಮೆಟ್ರೊದಿಂದ ಈ ಪ್ರಮಾಣ 830ಕ್ಕೆ ಇಳಿಕೆಯಾಗಲಿದೆ ಎಂದು ತಜ್ಞರ ವರದಿ ಅಂಕಿಅಂಶಗಳ ಸಮೇತ ವಿಶ್ಲೇಷಿಸಿದೆ. ಇತ್ತೀಚೆಗೆ ನಡೆದ ಬ್ರಾಂಡ್ ಬೆಂಗಳೂರು ಕಾರ್ಯಾಗಾರದಲ್ಲಿ ಈ ವರದಿ ಸಲ್ಲಿಕೆಯಾಗಿದ್ದು, ಅದರ ಹೊರತಾಗಿಯೂ ಸುರಂಗ ಮಾರ್ಗದ ಪ್ರಸ್ತಾವಿತ ಯೋಜನೆಗಳ ಬಗ್ಗೆ ಚರ್ಚೆಯಾಗುತ್ತಿರುವುದು ಅಚ್ಚರಿ ಮೂಡಿಸಿದೆ.

RELATED ARTICLES

Latest News