Friday, November 22, 2024
Homeರಾಜ್ಯಅಪಹರಣ ಪ್ರಕರಣ ; ಸಂತ್ರಸ್ತೆ ಹೇಳಿಕೆಗೆ ಪ್ರತಿಕ್ರಿಯಿಸಲು ಗೃಹಸಚಿವ ಪರಮೇಶ್ವರ್‌ ನಕಾರ

ಅಪಹರಣ ಪ್ರಕರಣ ; ಸಂತ್ರಸ್ತೆ ಹೇಳಿಕೆಗೆ ಪ್ರತಿಕ್ರಿಯಿಸಲು ಗೃಹಸಚಿವ ಪರಮೇಶ್ವರ್‌ ನಕಾರ

ಬೆಂಗಳೂರು,ಮೇ 13- ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರ ಬಂಧನಕ್ಕೆ ಕಾರಣವಾಗಿರುವ ಕಿಡ್ನ್ಯಾಪ್‌ ಪ್ರಕರಣದಲ್ಲಿ ಸಂತ್ರಸ್ತೆ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಲು ಗೃಹಸಚಿವ ಡಾ.ಜಿ.ಪರಮೇಶ್ವರ್‌ ನಿರಾಕರಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮದವರು ಎಂದಿನಂತೆ ಗೃಹಸಚಿವರ ಹೇಳಿಕೆ ಪಡೆಯಲು ಪ್ರಯತ್ನಿಸಿದರು. ಎಸ್‌‍ಐಟಿ ಎನ್ನುತ್ತಿದ್ದಂತೆ ಪರಮೇಶ್ವರ್‌ ಮುಖ ತಿರುಗಿಸಿ ಪ್ರತಿಕ್ರಿಯಿಸಲು ನಿರಾಕರಿಸುವ ಮೂಲಕ ಕಾರು ಹತ್ತಿದರು. ಕಿಡ್ನ್ಯಾಪ್‌ ಪ್ರಕರಣದ ಸಂತ್ರಸ್ತೆ ನೀಡಿರುವ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ ಎಸ್‌‍ಐಟಿಯವರನ್ನು ಕೇಳಬೇಕು ಎಂದಷ್ಟೇ ಹೇಳಿದರು. ಎಸ್‌‍ಐಟಿ ತನಿಖೆ ಬಗ್ಗೆ ಪ್ರತಿದಿನ ವಿವರಣೆ ನೀಡಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಸ್ಥಳದಿಂದ ತೆರಳಿದರು.

ಉಲ್ಟಾ ಹೊಡೆದ ಹೇಳಿಕೆ :
ಹಾಸನದಲ್ಲಿ ಪತ್ತೆಯಾದ ಪೆನ್‌ಡ್ರೈವ್‌ಗಳಲ್ಲಿದ್ದ ಅಶ್ಲೀಲ ವಿಡಿಯೋಗಳು ಬಹಿರಂಗಗೊಂಡ ನಂತರ ಸಾಕಷ್ಟು ಬೆಳವಣಿಗೆಗಳಾಗಿದ್ದು, ವಿಡಿಯೋದಲ್ಲಿ ಇದ್ದಾರೆ ಎಂದು ಹೇಳಲಾದ ಸಂತ್ರಸ್ತೆಯೊಬ್ಬರು ಅಪಹರಣವಾಗಿದ್ದಾರೆ ಎನ್ನಲಾಗಿತ್ತು. ಆಕೆಯ ಪುತ್ರ ಮೈಸೂರಿನ ಕೆ.ಆರ್‌.ನಗರ ಪೊಲೀಸ್‌‍ ಠಾಣೆಗೆ ದೂರು ನೀಡಿ, ಮಾಜಿ ಸಚಿವ ಎಚ್‌.ಡಿ.ರೇವಣ್ಣ ಮತ್ತು ಸಂತೋಷ್‌ ಬಾಬು ವಿರುದ್ಧ ದೂರಿದ್ದರು.

ಈ ಪ್ರಕರಣದಲ್ಲಿ ಎಚ್‌.ಡಿ.ರೇವಣ್ಣ ಹಾಗೂ ಆವರ ಆಪ್ತ ಸಂತೋಷ್‌ ಬಾಬು ಅವರನ್ನು ಬಂಧಿಸಲಾಗಿತ್ತು. ಇದೀಗ ಸಂತ್ರಸ್ತ ಮಹಿಳೆ ಅನಾಮಿಕ ಜಾಗದಿಂದ ವಿಡಿಯೋ ಸಂದೇಶದ ಮೂಲಕ ತಮ ಹೇಳಿಕೆ ನೀಡಿದ್ದಾರೆ. ಅದರಲ್ಲಿ ತಮನ್ನು ಯಾರೂ ಕಿಡ್ನ್ಯಾಪ್‌ ಮಾಡಿಲ್ಲ ಎಂದು ಮಹಿಳೆ ಸ್ಪಷ್ಟಪಡಿಸಿದ್ದಾರೆ.

ನಾನು ಸಂಬಂಧಿಕರ ಮನೆಗೆ ಬಂದಿದ್ದೇನೆ. ಸುರಕ್ಷಿತವಾಗಿ ಹಾಗೂ ಕ್ಷೇಮವಾಗಿದ್ದೇನೆ. ತಮ ಪುತ್ರ ನಾನು ಕಾಣದೇ ಇರುವುದಕ್ಕೆ ಗಾಬರಿಗೊಂಡು ದೂರು ನೀಡಿದ್ದಾನೆ. ನನಗೆ ಯಾರಿಂದಲೂ ತೊಂದರೆಯಾಗಿಲ್ಲ. ಇಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಸಂಬಂಧಿಕರ ಮನೆಯಲ್ಲಿ ಟಿವಿ ನೋಡಿದಾಗ ರೇವಣ್ಣ ಅವರಿಗೆ ತೊಂದರೆಯಾಗಿರುವುದು ತಿಳಿದು ಬಂತು.

ನನಗೆ ರೇವಣ್ಣ, ಭವಾನಿ ಅಕ್ಕ ಅಥವಾ ಸಂತೋಷ್‌ ಬಾಬು ಅವರಿಂದಾಗಲಿ ಯಾವುದೇ ತೊಂದರೆಯಾಗಿಲ್ಲ, ಯಾರೂ ನನ್ನನ್ನು ಅಪಹರಣ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸ್ವಲ್ಪ ದಿನದ ಬಳಿಕ ಬರುತ್ತೇನೆ, ಎಲ್ಲಿ ಬೇಕಾದರೂ ಹೇಳಿಕೆ ನೀಡುತ್ತೇನೆ, ನನಗೂ ಹಾಗೂ ವಿವಾದಿತ ವಿಡಿಯೋಗೂ ಸಂಬಂಧವಿಲ್ಲ. ಈ ರೀತಿ ಏಕೆಲ್ಲಾ ಪ್ರಚಾರ ನಡೆಯುತ್ತಿದೆ ಎಂದು ನನಗೆ ಗೊತ್ತಿಲ್ಲ ಎಂದು ಮಹಿಳೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾವು ಕೂಲಿ ಮಾಡಿಕೊಂಡು ಬದುಕುವ ಜನ. ಪೊಲೀಸರು ಅನಗತ್ಯವಾಗಿ ನಮ ಮನೆಯ ಬಳಿ ಹೋಗಿ ಕಿರುಕುಳ ನೀಡಬಾರದು. ಮನೆಯಲ್ಲಿ ಚಿಕ್ಕ ಮಕ್ಕಳಿದ್ದಾರೆ, ಗಾಬರಿಗೊಳ್ಳುತ್ತಿದ್ದಾರೆ, ಅಕ್ಕಪಕ್ಕದವರು ಅನುಮಾನದಿಂದ ನೋಡುವಂತಾಗುತ್ತಿದೆ ಎಂದು ಮಹಿಳೆ ಅಸಹನೆ ವ್ಯಕ್ತಪಡಿಸಿದ್ದಾರೆ.

RELATED ARTICLES

Latest News