Monday, May 20, 2024
Homeರಾಷ್ಟ್ರೀಯ1 ಮತ ಹಾಕಿದರೆ ವರ್ಷಕ್ಕೆ 1 ಲಕ್ಷ ರೂ. ಕೊಡ್ತೀವಿ : ಮಹಿಳೆಯರಿಗೆ ಸೋನಿಯಾ ಗ್ಯಾರಂಟಿ

1 ಮತ ಹಾಕಿದರೆ ವರ್ಷಕ್ಕೆ 1 ಲಕ್ಷ ರೂ. ಕೊಡ್ತೀವಿ : ಮಹಿಳೆಯರಿಗೆ ಸೋನಿಯಾ ಗ್ಯಾರಂಟಿ

ನವದೆಹಲಿ, ಮೇ 13- ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಪಕ್ಷವು ಪಟ್ಟಿ ಮಾಡಿರುವ ಖಾತರಿಗಳು ಈ ಕಷ್ಟದ ಸಮಯದಲ್ಲಿ ತಮ್ಮ ಪರಿಸ್ಥಿತಿಗಳನ್ನು ಬದಲಾಯಿಸುತ್ತವೆ ಎಂದು ಕಾಂಗ್ರೆಸ್‌ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇಂದು ಜನರಿಗೆ ಭರವಸೆ ನೀಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಕಾಂಗ್ರೆಸ್‌ ಹಂಚಿಕೊಂಡಿರುವ ವೀಡಿಯೋ ಸಂದೇಶದಲ್ಲಿ, ತೀವ್ರ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದೇಶದ ಮಹಿಳೆಯರು ಕಠಿಣ ಸಮಯವನ್ನು ಎದುರಿಸುತ್ತಿದ್ದಾರೆ. ಅವರಿಗಾಗಿ ಪಕ್ಷದ ಮಹಾಲಕ್ಷ್ಮಿ ಯೋಜನೆ ಅವರ ಜೀವನವನ್ನು ಬದಲಾಯಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

ನನ್ನ ಪ್ರೀತಿಯ ಸಹೋದರಿಯರೇ, ಸ್ವಾತಂತ್ರ್ಯ ಹೋರಾಟದಿಂದ ಆಧುನಿಕ ಭಾರತ ನಿರ್ಮಾಣದವರೆಗೆ ಮಹಿಳೆಯರು ಅಪಾರ ಕೊಡುಗೆ ನೀಡಿದ್ದಾರೆ. ಆದರೆ, ಇಂದು ನಮ್ಮ ಮಹಿಳೆಯರು ತೀವ್ರ ಹಣದುಬ್ಬರದ ನಡುವೆ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಅವರ ಶ್ರಮ ಮತ್ತು ತಪಸ್ಸಿಗೆ ನ್ಯಾಯ ಸಲ್ಲಿಸಲು ಕ್ರಾಂತಿಕಾರಿ ಭರವಸೆಯೊಂದಿಗೆ, ಕಾಂಗ್ರೆಸ್‌ ಬಂದಿದೆ ಎಂದಿದ್ದಾರೆ.

ಕಾಂಗ್ರೆಸ್‌ನ ಮಹಾಲಕ್ಷ್ಮಿ ಯೋಜನೆಯು ಬಡ ಕುಟುಂಬದ ಮಹಿಳೆಗೆ ನಾವು ಪ್ರತಿ ವರ್ಷ 1 ಲಕ್ಷ ರೂಪಾಯಿಗಳನ್ನು ನೀಡುತ್ತೇವೆ ಎಂದು ಖಾತರಿಪಡಿಸುತ್ತದೆ. ಏಳು ಹಂತದ ಸಾರ್ವತ್ರಿಕ ಚುನಾವಣೆಯಲ್ಲಿ ನಡೆಯುತ್ತಿರುವ ನಾಲ್ಕನೇ ಸುತ್ತಿನಲ್ಲಿ ಕಾಂಗ್ರೆಸ್‌ ಬೆಂಬಲಿಸಬೇಕು ಎಂದು ಜನರಿಗೆ ಮನವಿ ಮಾಡಿದ್ದಾರೆ.

ಕಾಂಗ್ರೆಸ್‌ನ ಖಾತರಿ ಈಗಾಗಲೇ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕೋಟ್ಯಂತರ ಕುಟುಂಬಗಳ ಜೀವನವನ್ನು ಬದಲಾಯಿಸಿದೆ. ಇದೇ ರೀತಿ ಮಾಹಿತಿ ಹಕ್ಕು, ಶಿಕ್ಷಣದ ಹಕ್ಕು ಅಥವಾ ಆಹಾರ ಭದ್ರತೆಯಂತಹ ಯೋಜನೆಗಳ ಮೂಲಕ ಕಾಂಗ್ರೆಸ್‌ ಪಕ್ಷವು ಲಕ್ಷಾಂತರ ಭಾರತೀಯರನ್ನು ಸಬಲೀಕರಣಗೊಳಿಸಿದೆ. ಮಹಾಲಕ್ಷ್ಮಿ ನಮ್ಮ ಕೆಲಸವನ್ನು ಮುಂದಕ್ಕೆ ಕೊಂಡೊಯ್ಯುವ ಇತ್ತೀಚಿನ ಭರವಸೆಯಾಗಿದೆ ಎಂದು ತಿಳಿಸಿದ್ದಾರೆ.

ಈ ಕಷ್ಟದ ಸಮಯದಲ್ಲಿ, ಕಾಂಗ್ರೆಸ್‌ನ ಕೈ ನಿಮ್ಮೊಂದಿಗಿದೆ ಮತ್ತು ಈ ಕೈ ನಿಮ್ಮ ಪರಿಸ್ಥಿತಿಯನ್ನು ಬದಲಾಯಿಸುತ್ತದೆ ಎಂದು ನಾನು ನಿಮಗೆ ಭರವಸೆ ನೀಡಲು ಬಯಸುತ್ತೇನೆ. ಧನ್ಯವಾದಗಳು. ಜೈ ಹಿಂದ್‌ ಎಂದು ಎಐಸಿಸಿ ಮಾಜಿ ಅಧ್ಯಕ್ಷರು ತಮ್ಮ ಪಕ್ಷದ ಚಿಹ್ನೆಯನ್ನು ಉಲ್ಲೇಖಿಸಿ ಹೇಳಿದರು.

ಸೋನಿಯಾಗಾಂಧಿ ಅವರ ಮನವಿಯನ್ನು ಕಾಂಗ್ರೆಸ್‌ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತಮ್ಮ ಎಕ್ಸ್ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.ರಾಹುಲ್‌ ಗಾಂಧಿ ಅವರು ಬಡ ಕುಟುಂಬದ ಮಹಿಳೆಯರು ನೆನಪಿಸಿಕೊಳ್ಳಿ – ನಿಮ್ಮ ಒಂದು ಮತವು ನಿಮ್ಮ ಖಾತೆಯಲ್ಲಿ ವಾರ್ಷಿಕ 1 ಲಕ್ಷ ರೂ. ತರಲಿದೆ.

ಕಾಂಗ್ರೆಸ್‌ನ ಮಹಾಲಕ್ಷ್ಮಿ ಯೋಜನೆಯು ಭೀಕರ ಹಣದುಬ್ಬರ ಮತ್ತು ನಿರುದ್ಯೋಗದ ನಡುವೆ ಹೋರಾಡುತ್ತಿರುವ ಮಹಿಳೆಯರಿಗೆ ಜೀವರಕ್ಷಕವಾಗಲಿದೆ. ಪ್ರತಿ ತಿಂಗಳು 8,500 ರೂ.ಗಳನ್ನು ನೇರವಾಗಿ ಬ್ಯಾಂಕ್‌ ಖಾತೆಗಳಿಗೆ ಜಮಾ ಮಾಡುವುದರಿಂದ, ಭಾರತದ ಮಹಿಳೆಯರು ಆರ್ಥಿಕ ಅವಲಂಬನೆಯಿಂದ ಮುಕ್ತರಾಗುತ್ತಾರೆ ಮತ್ತು ಅವರ ಸ್ವಂತ ಕುಟುಂಬದ ಹಣೆಬರಹ. ಬರೆಯಲು ಸಾಧ್ಯವಾಗುತ್ತದೆ. ಹಾಗಾಗಿ ಮತ ಚಲಾಯಿಸಿ ಮತ್ತು ನಿಮ್ಮ ಪರಿಸ್ಥಿತಿಗಳನ್ನು ಬದಲಾಯಿಸಿ ಎಂದು ಸೋನಿಯಾ ಗಾಂಧಿ ಅವರ ಸಂದೇಶವನ್ನು ಹಂಚಿಕೊಳ್ಳುವ ಸಂದರ್ಭದಲ್ಲಿ ಹೇಳಿದ್ದಾರೆ.

RELATED ARTICLES

Latest News