ನವದೆಹಲಿ,ಮೇ 13– ಸಿಬಿಎಸ್‌ಇ 12ನೇ ತರಗತಿಯ ಬೋರ್ಡ್ ಪರೀಕ್ಷೆ ಪಲಿತಾಂಶ ಪ್ರಕಟಿಸಲಾಗಿದೆ. ಮತ್ತೆ ಬಾಲಕಿಯರೇ ಮುಂದಿದ್ದು, ಒಟ್ಟಾರೆ ಶೇಕಡಾ 87.98 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಆದರೆ ಪಲಿತಾಂಶದಲ್ಲಿ ಕಳೆದ ಸಾಲಿಗೆ ಹೊಲಿಸಿದರೆ ಸ್ವಲ್ಪ ಕುಸಿದಿದೆ.
ಒಟ್ಟು 24,068 ವಿದ್ಯಾರ್ಥಿಗಳು ಶೇಕಡಾ 95 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ ಮತ್ತು 1,16,145 ವಿದ್ಯಾರ್ಥಿಗಳು ಶೇಕಡಾ 90 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಬಾರಿ 7,126 ಕೇಂದ್ರಗಳಲ್ಲಿ ನಡೆದ ಪರೀಕ್ಷೆಗೆ ದೇಶಾದಾದ್ಯಂತ 16,21000ಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದರು. ಇದರಲ್ಲಿ 91.52 ರಷ್ಟು ಹುಡುಗಿಯರು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ,
ಈ ನಡುವೆ 1.22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಪಲಿತಾಂಶ ತಡೆಹಿಡಿಯಲಾಗಿದೆ. ಕಳೆದ ವರ್ಷ ಒಟ್ಟು ತೇರ್ಗಡೆ ಪ್ರಮಾಣ ಶೇ.87.33 ಆಗಿತ್ತು.