ಬೆಂಗಳೂರು,ಮೇ 16- ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಎದುರಿಸುತ್ತಿರುವ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರು ತಮ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿನ ಬ್ಲೂ ಟಿಕ್ ಮಾರ್ಕ್ ಕಳೆದುಕೊಂಡಿದ್ದಾರೆ.
ವೆರಿಫೈಡ್ ಅಕೌಂಟ್ ಎಂದು ಬಳಕೆದಾರರಿಗೆ ಕಂಪೆನಿಯು ಬ್ಲೂ ಟಿಕ್ ನೀಡುತ್ತದೆ. ಕೆಲವು ದಿನಗಳ ಹಿಂದಷ್ಟೇ ಇದ್ದ ಬ್ಲೂ ಟಿಕ್ ಮಾರ್ಕ್ ಇದೀಗ ಪ್ರಜ್ವಲ್ ಖಾತೆಯಲ್ಲಿ ಕಾಣಿಸುತ್ತಿಲ್ಲ.ವೆರಿೈಡ್ ಅಕೌಂಟ್ ಸ್ಟೇಟಸ್‌ನಿಂದ ಪ್ರಜ್ವಲ್ ಖಾತೆ ಹೊರಬಿದ್ದಿದ್ದು, ಎಕ್ಸ್ ಕಂಪೆನಿಯು ಅಧಿಕೃತ ಖಾತೆಯನ್ನು ಅಮಾನ್ಯ ಮಾಡಲು ಯಾವುದೇ ಕಾರಣ ನೀಡಿಲ್ಲ.
ಎಕ್ಸ್ ಗಿಂತ ಮುಂಚೆ ಟ್ವಿಟರ್ ಖಾತೆ ಬಳಸುವಾಗ ಅಧಿಕೃತ ಹಾಗೂ ಗಣ್ಯ ವ್ಯಕ್ತಿಗಳಿಗೆ ಬ್ಲೂ ಟಿಕ್ ಮಾರ್ಕ್ ನೀಡಲಾಗುತ್ತಿತ್ತು. ಇದೇ ಮಾದರಿಯಲ್ಲಿ ಪ್ರಜ್ವಲ್ ರೇವಣ್ಣಗೂ ನೀಡಿತ್ತು. ಇದೀಗ ಕಾರಣ ನೀಡದೆ ರದ್ದು ಮಾಡಲಾಗಿದೆ.
ಉದ್ಯಮಿ ಎಲಾನ್ ಮಸ್ಕ್ ಟ್ವಿಟರ್ ಕಂಪೆನಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಬಳಿಕ ಹಲವು ಬದಲಾವಣೆ ತಂದಿದ್ದಾರೆ. ಟ್ವಿಟರ್‌ಬದಲಿಗೆ ಎಕ್‌್ಸ ಎಂದು ನಾಮಕರಣ ಮಾಡಿ, ಬಳಕೆದಾರರು ಬ್ಲೂ ಟಿಕ್ ಪಡೆಯಬೇಕಾದರೆ ಚಂದಾದಾರರಾಗುವ ಪದ್ಧತಿ ಜಾರಿಗೊಳಿಸಿದ್ದರು. ಗ್ರಾಹಕರು ಹಣ ನೀಡಿ ಬ್ಲೂ ಟಿಕ್ ಮಾರ್ಕ್ ಪಡೆಯಬಹುದು. ತಿಂಗಳಿಗೆ ನಿಗದಿತ ಪ್ರಮಾಣದಲ್ಲಿ ಹಣ ನೀಡಬೇಕಿದೆ.
ಪ್ರಜ್ವಲ್ ಪ್ರಕರಣದಲ್ಲಿ ಬ್ಲೂ ಟಿಕ್ ಮಾರ್ಕ್ ಪಡೆಯಲು ಹಣ ಪಾವತಿಸಿಲ್ಲವೋ ಅಥವಾ ಅವರ ಮೇಲೆ ಇತ್ತೀಚೆಗೆ ಕೇಳಿಬಂದ ಆರೋಪಗಳ ಬಳಿಕ ಸ್ವಯಂಪ್ರೀರಿತವಾಗಿ ಬ್ಲೂ ಟಿಕ್ ಕಳೆದುಕೊಂಡಿದ್ದಾರೋ ಎಂಬುದರ ಬಗ್ಗೆ ತಿಳಿದುಬಂದಿಲ್ಲ.