Monday, November 25, 2024
Homeಜಿಲ್ಲಾ ಸುದ್ದಿಗಳು | District Newsಸೌತೆ ಬೆಳೆದು ಉತ್ತಮ ಲಾಭ ಪಡೆದು ಮಾದರಿಯಾದ ರೈತ

ಸೌತೆ ಬೆಳೆದು ಉತ್ತಮ ಲಾಭ ಪಡೆದು ಮಾದರಿಯಾದ ರೈತ

ಚಿಕ್ಕಬಳ್ಳಾಪುರ, ಮೇ 17- ಕೃಷಿಯನ್ನು ಖುಷಿಯೊಂದಿಗೆ ಸೌತೆಕಾಯಿ ಬೆಳೆಯನ್ನೂ ಫಲವತ್ತಾಗಿ ಬೆಳೆದ ರೈತ ಹಾಗೂ ವಕೀಲ ಮಂಚನಬೆಲೆ ಗ್ರಾಮದ ಗಂಗರಾಜು ಬಯಲು ಸೀಮೆ ಪ್ರದೇಶದ ಈ ಭಾಗದ ರೈತರಿಗೆ ಮಾದರಿಯಾಗಿ ಉತ್ತಮ ಇಳುವರಿಯೊಂದಿಗೆ ಲಕ್ಷಾಂತರ ಲಾಭದಾಯಕ ಬೆಳೆಯನ್ನ ಬೆಳೆಯುವ ಮೂಲಕ ನಿಬ್ಬೆರಿಸಿದ್ದಾನೆ.

ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರಕ್ಕೆ ಕೂಗಳತೆ ದೂರದ ಮಂಚನಬೆಲೆ ಗ್ರಾಮದ ರೈತ ಹಾಗೂ ವಕೀಲರಾದ ಗಂಗರಾಜು ಎಂಬುವರು ಈ ಹಿಂದೆ ಸೌತೆಕಾಯಿ ಬೆಳೆ ಬೆಳೆದಿದ್ದರು ಅಷ್ಟಾಗಿ ಫಲ ಬಂದಿರಲಿಲ್ಲ, ಇದೀಗ ರಸ್ಪಿ ಸೀಡ್‌್ಸ ತಳಿ ಬಳಸಿ ಇದೇ ಮೊದಲ ಬಾರಿಗೆ ಸೌತೆಕಾಯಿ ಬೆಳೆದಿದ್ದು ತನ್ನ ನಿರೀಕ್ಷೆಗಿಂತಲೂ 3-4 ಪಟ್ಟು ಉತ್ತಮ ಲಾಭ ಗಳಿಸುತ್ತಿದ್ದಾರೆ.

ಗಂಗರಾಜು ಒಂದು ಎಕರೆಯಲ್ಲಿ ಬೆಳೆದಿರುವ ಸೌತೆಕಾಯಿ ಬೆಳೆ ಅವರ ಜೀವನ ಶೈಲಿಯನ್ನು ಇನ್ನಷ್ಟು ಮತ್ತಷ್ಟು ಬದಲಾಯಿಸಿದೆ. ಪ್ರತಿ ಕೊಯ್ಲಿನಲ್ಲಿ ಸರಾಸರಿ 2 ಟನ್‌ ಗಿಂತ ಹೆಚ್ಚುವರಿಯಾಗಿ ಸೌತೆಕಾಯಿ ಇಳುವರಿ ತೆಗೆಯುತ್ತಿದ್ದಾರೆ. ಪ್ರತಿಕೂಲ ವಾತಾವರಣದಲ್ಲೂ ಉತ್ತಮ ಇಳುವರಿ ಬಂದಿದೆ.

ಜತೆಗೆ ಮಾರುಕಟ್ಟೆಯಲ್ಲೂ ಇದೀಗ ಉತ್ತಮ ಬೆಲೆ ದೊರೆತಿರುವುದರಿಂದ ಇಂದು ರೈತಾಪಿ ವರ್ಗದ ಜೀವನವೂ ನೆಮದಿಯ ಬದುಕು ಕಟ್ಟಿಕೊಡುತ್ತದೆ ಎಂಬುದನ್ನು ಇನ್ನಿತರ ರೈತರಿಗೆ ಗಂಗರಾಜು ತೋರಿಸಿಕೊಟ್ಟಿದ್ದಾರೆ.

ಹರುಷ ತಂದ ಸೌತೆ ಕೃಷಿ:
ಗಂಗರಾಜು ಈ ಮೊದಲು ವ್ಯಾಸಂಗ ಮಾಡುತ್ತಾ ವಕೀಲಿ ವೃತ್ತಿಯನ್ನು ಪ್ರಾರಂಭಿಸಿದ ಇದಕ್ಕೂ ಮುನ್ನ ಚಿಕ್ಕಂದಿನಿಂದಲೆ ತನ್ನ ತಂದೆಯ ಜೊತೆ ಜೊತೆ ಕೃಷಿಯಲ್ಲಿ ಆಸಕ್ತಿ ಹುಟ್ಟಿಸಿಕೊಂಡಿದ್ದ ವಕೀಲಿವೃತ್ತಿ ಅಷ್ಟಾಗಿ ಲಾಭದಾಯಕ ಅಲ್ಲವಾದರೂ ತನ್ನ ಓದಿಗೆ ಅನುಗುಣವಾಗಿ ವೃತ್ತಿಯನ್ನು ಮಾಡಬೇಕು ಅಂತ ವಕೀಲಿ ವೃತ್ತಿಯಲ್ಲೂ ಸಹ ಪ್ರಾಮಾಣಿಕ ಮತ್ತು ನಿಷ್ಠೆ ಹೊಂದಿ ತನ್ನ ಕಾಯಕ ಮಾಡುತ್ತಾ ಇರುವ ಗಂಗರಾಜು ಕೃಷಿ ಕಾಯಕ.

ಲಾಭದಾಯಕ ಸೌತೆ:
ಸದ್ಯ ಮಾರುಕಟ್ಟೆಯಲ್ಲಿ ಕೆಜಿ ಸೌತೆಕಾಯಿಗೆ 38-40 ರೂ. ಬೆಲೆ ಇದೆ. 10 ರೂ. ಸಿಕ್ಕರೆ ಸಾಕು ಸೌತೆಕಾಯಿ ಬೆಳೆ ಲಾಭದಾಯಕವಾಗಿದೆ. ಈಗಿರುವ ಬೆಲೆಯಿಂದ 10-12 ಲಕ್ಷ ಲಾಭಗಳಿಸುವ ನಿರೀಕ್ಷೆಯೊಂದಿಗೆಗಂಗರಾಜು ಈ ಮೂಲಕ ಹೆಚ್ಚಿನ ಆದಾಯದ ಪಡೆಯಲಿದ್ದಾರೆ.

ಲಕ್ಷ-ಲಕ್ಷ ಆದಾಯ: ಮೊದಲ ಬಾರಿ ಸೌತೆಕಾಯಿ ಬೆಳೆದ ಸಂದರ್ಭದಲ್ಲಿ ಎಕರೆಗೆ 54 ಸಾವಿರ ಖರ್ಚಾಗಿತ್ತು. ಇದರಲ್ಲಿ 3 ಲಕ್ಷದವರೆಗೂ ಆದಾಯ ಗಳಿಸಿದ್ದರು. ಇದೀಗ ಮತ್ತೆ 1.20 ಲಕ್ಷ ಬಂಡವಾಳ ಹೂಡಿದ್ದು, ಈಗಾಗಲೇ 3ರಿಂದ 4 ಲಕ್ಷದವರೆಗೂ ಲಾಭ ಗಳಿಸಿದ್ದಾರೆ. ಮುಂದಿನ ದಿನಗಳಲ್ಲಿ 8 ಲಕ್ಷಕ್ಕೂ ಹೆಚ್ಚು ಲಾಭಗಳಿಸುವ ಸಾಧ್ಯತೆ ಇದೆ. ಖಾಸಗಿ ಸಂಸ್ಥೆಯ ಮೂಲಕ ತರಕಾರಿ ಮಾರಾಟ ಮಾಡಲಾಗುತ್ತಿದೆ. ಯಾವುದೇ ರೋಗಗಳು ಕೂಡಾ ಸೌತೆಯಲ್ಲಿ ಬಾರದಿರುವುದು ಹೆಚ್ಚಿನ ಲಾಭ ಗಳಿಕೆಗೆ ಸಹಾಯಕವಾಗಿದೆ.

RELATED ARTICLES

Latest News