Sunday, September 8, 2024
Homeರಾಷ್ಟ್ರೀಯ | Nationalಗಡಿ ನಿಯಂತ್ರಣ ರೇಖೆಯ ಬಳಿ ಪಾಕ್‌ ಮೂಲದ ಮೂಕ ಮಹಿಳೆ ಬಂಧನ

ಗಡಿ ನಿಯಂತ್ರಣ ರೇಖೆಯ ಬಳಿ ಪಾಕ್‌ ಮೂಲದ ಮೂಕ ಮಹಿಳೆ ಬಂಧನ

ಜಮ್ಮು, ಮೇ 20 (ಪಿಟಿಐ) ಪಾಕ್‌ ಆಕ್ರಮಿತ ಕಾಶ್ಮೀರದ 45 ವರ್ಷದ ಮೂಕ ಮಹಿಳೆಯನ್ನು ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ ಭಾರತೀಯ ಸೇನೆ ಬಂಧಿಸಿದೆ. ತಡರಾತ್ರಿ ಲಾಮ್‌ ಸೆಕ್ಟರ್‌ನ ಫಾರ್ವರ್ಡ್‌ ಪುಖೆನಿರ್‌ ಗ್ರಾಮದಲ್ಲಿ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಕೆಯ ಬಳಿ ಪತ್ತೆಯಾದ ಗುರುತಿನ ಚೀಟಿಯ ಪ್ರಕಾರ, ಮಹಿಳೆ ಪಾಕಿಸ್ತಾನದ ಕೋಟ್ಲಿ ಜಿಲ್ಲೆಯ ಸಖಿನಾಥ್‌ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ಆಕೆ ಅಚಾತುರ್ಯದಿಂದ ಭಾರತದ ಪ್ರದೇಶವನ್ನು ಪ್ರವೇಶಿಸಿದ್ದಾಳೆ ಎಂದು ನಂಬಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದರ ಬಗ್ಗೆ ತನಿಖೆ ನಡೆಯುತ್ತಿದೆ ವಾಪಸ್‌‍ ಆಕೆಯ ದೇಶಕ್ಕೆ ಕಳುಹಿಸಲು ಕ್ರಮ ಕೈಗೊಳ್ಳಲಾಗಿದೆ.

RELATED ARTICLES

Latest News