Friday, November 22, 2024
Homeಜಿಲ್ಲಾ ಸುದ್ದಿಗಳು | District Newsಕೃಷಿಯಲ್ಲಿ ಖುಷಿ ಕಂಡುಕೊಂಡು ನಿರುದ್ಯೋಗಿಗಳಿಗೆ ಮಾದರಿಯಾದ ವಿದ್ಯಾವಂತ ಸಹೋದರರು

ಕೃಷಿಯಲ್ಲಿ ಖುಷಿ ಕಂಡುಕೊಂಡು ನಿರುದ್ಯೋಗಿಗಳಿಗೆ ಮಾದರಿಯಾದ ವಿದ್ಯಾವಂತ ಸಹೋದರರು

ಚಿಕ್ಕಬಳ್ಳಾಪುರ, ಮೇ 21- ಕೃಷಿ ಎಂದರೆ ಮೂಗು ಮುರಿಯುವ ಯುವಕರು, ವಿದ್ಯಾವಂತರಿಗೆ ತಾಲ್ಲೂಕಿನ ತಿಪ್ಪೇನಹಳ್ಳಿಯ ಸಹೋದರರು ಕೃಷಿಯಲ್ಲಿ ಖುಷಿ ಕಂಡು ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಮಾದರಿಯಾಗಿದ್ದಾರೆ.

ಯುವ ರೈತ ಗಿರೀಶ್‌ ಮತ್ತು ದಿನೇಶ್‌ ವ್ಯಾಸಂಗ ಮುಂದುವರೆಸಿ ಇಂಜಿನಿಯರಿಂಗ್‌ ಆಗಬೇಕಾಗಿದ್ದ ಸಹೋದರರು ಕೃಷಿಯಲ್ಲಿ ತೊಡಗಿದ್ದು, ಬರದ ಬಯಲು ಸೀಮೆಯಾದ ಈ ಭಾಗದಲ್ಲಿ ಮೂರು ವರ್ಷಗಳಿಂದ ಸಮರ್ಪಕವಾಗಿ ಮಳೆ ಬಾರದೆ ಬಿತ್ತನೆ ಮಾಡಿದ ಬೆಳೆಗಳು ಹಾನಿಗೀಡಾಗಿವೆ.

ಸಾಲಬಾಧೆಗಳಿಂದ ಅನೇಕ ರೈತರು ಇಟ್ಟ ಬೆಳೆಗಳು ನಷ್ಟ ಉಂಟಾಗಿ ಮುಂದೇನಪ್ಪಾ ಎಂಬ ಚಿಂತಾಕ್ರಾಂತದಲ್ಲಿದ್ದಾರೆ. ಆದರೆ ನಗರಕ್ಕೆ ಕೂಗಳತೆ ದೂರದ ತಿಪ್ಪೇನಹಳ್ಳಿಯ ವಿದ್ಯಾವಂತ ಸಹೋದರರು ವ್ಯಾಸಂಗಕ್ಕೆ ಗುಡ್‌ ಬೈ ಹೇಳಿ ಮನೆಯಲ್ಲಿ ಸುಮನೆ ಕೂರದೆ ಕೃಷಿಯಿಂದ ಖುಷಿಯಾಗಿ ಆರ್ಥಿಕ ಪ್ರಗತಿ ಸಾಧಿಸಲೊರಟಿದ್ದಾರೆ.

ಕೃಷಿಯಲ್ಲಿ ಇಟ್ಟ ಬೆಳೆಗೆ ಒಂದೊಳ್ಳೆ ಬೆಲೆ ಸಿಕ್ಕರೆ ಅದೃಷ್ಟ ಕುಲಾಯಿಸಿದಂತೆ, ಬೆಳೆ, ಬೆಲೆ ಕೈ ಕೊಟ್ಟರೆ ಕೈ ಸುಟ್ಟುಕೊಳ್ಳುವುದು ಗ್ಯಾರೆಂಟಿ. ಆದರೆ ಇಲ್ಲೊಬ್ಬ ಯುವ ರೈತರಿಬ್ಬರು ಬರಗಾಲದಲ್ಲಿ ಆರ್ಕಟ್‌ ತಳಿಯ ಬೀನ್‌್ಸ ಬೆಳೆದು ಲಕ್ಷಾಧಿಪತಿಯಾಗಿದ್ದಾರೆ.

ಸಹೋದರರಲ್ಲಿ ಓರ್ವ ಪದವಿ, ಮತ್ತೋರ್ವ ಐಟಿಐ ಮುಗಿಸಿರುವ ಇವರು ಇನ್ನೊಬ್ಬರ ಕೈಕೆಳಗೆ ಕೆಲಸ ಮಾಡುವ ಬದಲು ಇದೇ ಗ್ರಾಮದ ಇನ್ನಿತರ ಐದಾರು ಕುಟುಂಬಗಳ ಕಾರ್ಮಿಕರನ್ನು ತೋಟದ ಕೆಲಸಕ್ಕೆ ತಮ್ಮ ಜೊತೆ ಇರಿಸಿಕೊಂಡು ತನ್ನ ಅಪ್ಪ ಮಾಡುತ್ತಿದ್ದ ಕೃಷಿಗೆ ಹೆಗಲಾಗಿ ತಾವೂ ಕಷ್ಟಪಟ್ಟು ಈ ಭೂಮಿಗೆ ಕೈತುಂಬ ಹಣವು ನಮಗೆ ನೀಡುತ್ತಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.

ತಮ ಎರಡು ಎಕರೆ ಜಮೀನಿನಲ್ಲಿ ಬೀನ್ಸ್ ಬೆಳೆದಿದ್ದು, ಈಗ ಮಾರುಕಟ್ಟೆಯಲ್ಲಿ ಬೀನ್‌್ಸಗೆ ಉತ್ತಮ ಬೆಲೆ ಇದ್ದು, ಕೆಜಿಗೆ 170 ರಿಂದ 200 ರೂ.ವರೆಗೆ ಮಾರಾಟ ಮಾಡಿ 20 ಲಕ್ಷಕ್ಕೂ ಹೆಚ್ಚು ಆದಾಯ ಗಳಿಸಿದ್ದಾರೆ.

ತಮ್ಮ ಒಟ್ಟು 8 ಎಕರೆ ಜಮೀನಿನಲ್ಲಿ ಬೀನ್ಸ್, ರೋಜಾ ಹೂವು, ಟೊಮೋಟೊ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದಿದ್ದಾರೆ. ಆದರೆ ವಿದ್ಯುತ್‌ ಕಣ್ಣಾಮುಚ್ಚಾಲೆಯಿಂದಾಗಿ ಬೀನ್ಸ್ ಬೆಳೆ ಉಳಿಸಿಕೊಳ್ಳಲು ಸವಾಲಾಗಿದ್ದು, ಜನರೇಟರ್‌ ಮೂಲಕ ನೀರು ಹಾಯಿಸಿ ಬೆಳೆಯನ್ನು ಬೆಳೆದು ಲಾಭ ಗಳಿಸಿದ್ದಾರೆ. ಕೇವಲ ಎರಡು ತಿಂಗಳಲ್ಲಿ ಸುಮಾರು 20 ಲಕ್ಷ ರೂ. ಆದಾಯ ಗಳಿಸಿ ಜಿಲ್ಲೆಯಲ್ಲಿ ಮನೆಮಾತಾಗಿದ್ದಾರೆ.

RELATED ARTICLES

Latest News