ಚಿಕ್ಕಬಳ್ಳಾಪುರದಲ್ಲಿ ಆದಿಯೋಗಿ ಅನಾವರಣ

ಚಿಕ್ಕಬಳ್ಳಾಪುರ, ಜ.16- ಆದಿಯೋಗಿ ಅವರನ್ನು ಪ್ರತ್ಯಕ್ಷ ದರ್ಶನ ಮಾಡುವಂಥದ್ದು ಒಂದು ಸಾಧನೆ. ಅದು ನಮ್ಮ ಪುಣ್ಯ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅಭಿಪ್ರಾಯ ಪಟ್ಟರು. ತಾಲೂಕಿನ ಕೌರನಹಳ್ಳಿ ಬಳಿ ನಿರ್ಮಾಣವಾಗಿರುವ 112 ಅಡಿ ಎತ್ತರದ ಆದಿಯೋಗಿ ಮೂರ್ತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನಾವರಣಗೊಳಿಸಿ ಮಾತನಾಡಿ, ಆದಿ ಯೋಗಿ ದರ್ಶನ ಮನುಷ್ಯನಿಗೆ ದಾರಿದೀಪ ಶಿವ ವಿಸ್ಮಯ ಮೂರ್ತಿ, ಶಿವನನ್ನು ಅರ್ಥ ಮಾಡಿಕೊಂಡವರು ಸೃಷ್ಟಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ. ನಮಗಿಂತ ಮುಂಚೆ, ನಂತರ ಸೃಷ್ಟಿಯಿದೆ. ತೃಣದಲ್ಲಿ ತೃಣ ನಮ್ಮ ಬದುಕು. ಹುಟ್ಟು […]

ಹೊಸ ವರ್ಷಾಚರಣೆ: ನಂದಿಬೆಟ್ಟಕ್ಕೆ ಹರಿದುಬಂದ ಜನಸಾಗರ

ಚಿಕ್ಕಬಳ್ಳಾಪುರ, ಜ.1- ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಪ್ರವಾಸಿ ತಾಣ ನಂದಿಬೆಟ್ಟಕ್ಕೆ ಜನಸಾಗರವೇ ಹರಿದು ಬಂದಿತ್ತು. ವರ್ಷದ ಆರಂಭದ ದಿನ ಹಾಗೂ ಭಾನುವಾರವಾಗಿದ್ದರಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ನಂದಿಬೆಟ್ಟಕ್ಕೆ ಜನ ಮರಳೋ ಜಾತ್ರೆ ಮರಳೋ ಎಂಬಂತೆ ತಂಡೋಪತಂಡವಾಗಿ ಆಗಮಿಸಿದ್ದರು. ನಂದಿ ಬೆಟ್ಟದಲ್ಲಿ ರಾತ್ರಿಯ ಸಂಭ್ರಮಾಚರಣೆಗೆ ಪ್ರವಾಸಿಗರು ಮತ್ತು ಸಾರ್ವಜನಿಕರ ಪ್ರವೇಶಕ್ಕೆ ಜಿಲ್ಲಾ ಆಡಳಿತ ನಿಷೇಧ ಹೇರಿದ್ದು, ಇಂದು ಬೆಳಿಗ್ಗೆ 6 ಗಂಟೆಗೆ ಪ್ರವಾಸಿಗರು ಮತ್ತು ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಿದ ಹಿನ್ನೆಲೆಯಲ್ಲಿ ತಡರಾತ್ರಿಯಿಂದಲೇ ನಂದಿಬೆಟ್ಟಕ್ಕೆ ಆಗಮಿಸಲು ಕಾದು ಕುಳಿತಿದ್ದವರು […]

ಹೊಸ ವರ್ಷದ ಪಾರ್ಟಿ ವೇಳೆ ಯುವಕನ ಕೊಲೆ

ಚಿಕ್ಕಬಳ್ಳಾಪುರ,ಜ.1- ಹೊಸ ವರ್ಷ ಸಂಭ್ರಮದ ಪಾರ್ಟಿ ವೇಳೆ ಸ್ನೇಹಿತರ ನಡುವೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದು ಬಿಯರ್ ಬಾಟಲಿಯಿಂದ ಯುವಕನ ತಲೆಗೆ ಹೊಡೆದು ಕೊಲೆ ಮಾಡಿರುವ ಘಟನೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ. ಚಿಂತಾಮಣಿಯ ಐಮರೆಡ್ಡಿಹಳ್ಳಿ ನಿವಾಸಿ ನವೀನ್ ರೆಡ್ಡಿ (28) ಕೊಲೆಯಾದ ಯುವಕ. 2023ನೇ ನೂತನ ವರ್ಷದ ಸಂಭ್ರಮಾಚರಣೆಗಾಗಿ ಸ್ನೇಹಿತರಾದ ದೊಡ್ಡ ಗಂಜೂರು ಗ್ರಾಮದ ನವೀನ್ ರೆಡ್ಡಿ, ಬೈರೆಡ್ಡಿ, ಪುನೀತ್, ಕಿರಣ್ ಜೊತೆಗೂಡಿ ಪಾರ್ಟಿ ಮಾಡಲು ಐಮಾರೆಡ್ಡಿ ಹಳ್ಳಿ ಸಮೀಪದ ಡಾಬಾಕ್ಕೆ […]

ಖಾಸಗಿ ಬಸ್ ಪಲ್ಟಿ : 40 ಮಂದಿಗೆ ಗಾಯ, 6 ಮಂದಿ ಸ್ಥಿತಿ ಗಂಭೀರ

ಚಿಕ್ಕಬಳ್ಳಾಪುರ,ನ.20- ಚಾಲಕನ ನಿರ್ಲಕ್ಷ್ಯದಿಂದ ಖಾಸಗಿ ಬಸ್ ಕಾಲುವೆಗೆ ಉರುಳಿಬಿದ್ದ ಪರಿಣಾಮ 40ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಚಿಂತಾಮಣಿ ತಾಲ್ಲೂಕಿನ ಅಮಿಟಾಗಾನಹಳ್ಳಿ ಗೇಟ್ ಬಳಿ ನಡೆದಿದೆ. ಗಾಯಗೊಂಡವರಲ್ಲಿ ಆರು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. 40ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಖಾಸಗಿ ಬಸ್ ಹಿಂದೂಪುರ ತಿರುಪತಿ ಮಾರ್ಗವಾಗಿ ಬರುತ್ತಿತ್ತು. 3ನೇ ದಿನಕ್ಕೆ ಕಾಲಿಟ್ಟ ಜೆಡಿಎಸ್ ಪಂಚರತ್ನ ರಥಯಾತ್ರೆ ಅಮಿಟಾಗಾನಹಳ್ಳಿ ಗೇಟ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿಬಿದ್ದಿದೆ. ಆರು ಮಂದಿ ಪ್ರಯಾಣಿಕರು ಗಂಭೀರವಾಗಿ […]

ರಾಜ್ಯದಲ್ಲಿ ನಾನಾ ಅವಾಂತರಗಳನ್ನು ಸೃಷ್ಟಿಸಿದ ರಾತ್ರಿ ಸುರಿದ ಮಳೆ

ಬೆಂಗಳೂರು, ಆ.27- ರಾಜಧಾನಿ ಸೇರಿದಂತೆ ರಾಜ್ಯದ ವಿವಿಧೆಡೆ ವರುಣನ ಆರ್ಭಟ ಮುಂದುವರೆದಿದ್ದು, ಭಾರೀ ಅನಾಹುತ ಸೃಷ್ಟಿಸಿದೆ. ಕಳೆದ ರಾತ್ರಿ ಬೆಂಗಳೂರು, ತುಮಕೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಕಲಬುರಗಿ, ಗದಗ ಸೇರಿದಂತೆ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ರಾತ್ರಿಯಿಡಿ ಜಾಗರಣೆ ಮಾಡುವಂತಾಗಿತ್ತು. ಕೋಲಾರ: ರಾತ್ರಿ ಸುರಿದ ಮಳೆಗೆ ಕೋಳಿಫಾರಂಗೆ ನೀರು ನುಗ್ಗಿದ ಪರಿಣಾಮ ಸುಮಾರು ಸಾವಿರ ಕೋಳಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಚಲುವನಹಳ್ಳಿಯಲ್ಲಿ ನಡೆದಿದೆ. ಚೌಡಪ್ಪ ಎಂಬುವವರಿಗೆ […]