Thursday, December 5, 2024
Homeರಾಜ್ಯಚಿಕ್ಕಬಳ್ಳಾಪುರ : ಕಂಟೈನರ್‌ನಲ್ಲಿ ಸಾಗಿಸುತ್ತಿದ್ದ 3 ಕೋಟಿ ಮೌಲ್ಯದ ಮೊಬೈಲ್‌ ಕಳ್ಳತನ

ಚಿಕ್ಕಬಳ್ಳಾಪುರ : ಕಂಟೈನರ್‌ನಲ್ಲಿ ಸಾಗಿಸುತ್ತಿದ್ದ 3 ಕೋಟಿ ಮೌಲ್ಯದ ಮೊಬೈಲ್‌ ಕಳ್ಳತನ

Chikkaballapur: Mobile phones worth Rs 3 crore stolen from container

ಚಿಕ್ಕಬಳ್ಳಾಪುರ, ನ.29– ದೆಹಲಿಯಿಂದ ಟ್ರಕ್‌ ಕಂಟೈನರ್‌ನಲ್ಲಿ ಬರುತ್ತಿದ್ದ ಸುಮಾರು 3 ಕೋಟಿ ಮೌಲ್ಯದ ಮೊಬೈಲ್‌ ಕಳತನವಾಗಿರುವಂತಹ ಘಟನೆ ಇಲ್ಲಿ ನಡೆದಿದೆ. ಶಿಯೋಮಿ ಕಂಪನಿಗೆ ಸೇರಿದ ಮೊಬೈಲ್‌ಗಳು ದೆಹಲಿಯಿಂದ ಬೆಂಗಳೂರಿಗೆ ಬರುವಷ್ಟರಲ್ಲಿ ಕಳುವಾಗಿದೆ.

ಕಳೆದ ನ.22ರಂದು ಎನ್‌ಎಲ್‌‍ 01, ಎಎಫ್‌ 2743 ಟ್ರಕ್‌ ಕಂಟೈನಲ್ಲಿ 3 ಕೋಟಿ ರೂ. ಮೌಲ್ಯದ ಶಿಯೋಮಿ ಕಂಪನಿಗೆ ಸೇರಿದ ಮೊಬೈಲ್‌ ಗಳನ್ನು ತುಂಬಿಕೊಂಡು ದೆಹಲಿಯಿಂದ ಬೆಂಗಳೂರಿನತ್ತ ಹೊರಟಿದ್ದ ಕಂಟೈನರ್‌ ಸಕಾಲಕ್ಕೆ ಬೆಂಗಳೂರಿಗೆ ತಲುಪಲಿಲ್ಲ.ಹಾಗಾಗಿ ಅನುಮಾನಗೊಂಡ ಕಂಪನಿಯ ಅಧಿಕಾರಿಗಳು ಕಂಟೈನರ್‌ ಜಿ.ಪಿ.ಎಸ್‌‍ ಪರಿಶೀಲನೆ ನಡೆಸಿದಾಗ ಚಿಕ್ಕಬಳ್ಳಾಪುರ ತಾಲೂಕಿನ ರೆಡ್ಡಿಗೊಲ್ಲರಹಳ್ಳಿ ಬಳಿ ಕಂಟೈನರ್‌ ನಿಂತಿದ್ದು ಗೊತ್ತಾಗಿದೆ.

ನಂತರ ಕಂಟೈನರ್‌ ಪರಿಶೀಲಿಸಿದಾಗ ವಸ್ತುಗಳು ಕಳುವಾಗಿದ್ದು ಚಾಲಕನೂ ನಾಪತ್ತೆಯಾಗಿದ್ದಾನೆ. ಸದ್ಯ ಪೆರೇಸಂದ್ರೆ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಂಟೇನರ್‌ ವಶಕ್ಕೆ ಪಡೆದು ರಾಹುಲ್‌ ಎಂಬ ಚಾಲಕನ ಪತ್ತೆಗೆ ಶೋಧ ಕಾರ್ಯ ನಡೆಸಲಾಗಿದೆ.
ಸೇಪ್‌ ಸ್ಪೀಡ್‌ ಕ್ಯಾರಿಯರ್ಸ್‌ ಸಾಗಾಟ ಹೊಣೆ ಹೊತ್ತಿತ್ತು.ಸದ್ಯ ಪೊಲೀಸರು ಚಾಲಕನ ಜಾಡು ಹಿಡಿದು ತನಿಖೆ ಆರಂಭಿಸಿದ್ದಾರೆ.

RELATED ARTICLES

Latest News