Friday, November 22, 2024
Homeರಾಷ್ಟ್ರೀಯ | Nationalಥಾಣೆ : ಕೆಮಿಕಲ್ಸ್ ಘಟಕದಲ್ಲಿ ಸ್ಫೋಟ, 9 ಮಂದಿ ಕಾರ್ಮಿಕರು ಬಲಿ

ಥಾಣೆ : ಕೆಮಿಕಲ್ಸ್ ಘಟಕದಲ್ಲಿ ಸ್ಫೋಟ, 9 ಮಂದಿ ಕಾರ್ಮಿಕರು ಬಲಿ

ಥಾಣೆ, ಮೇ 24 (ಪಿಟಿಐ) – ಮಹಾರಾಷ್ಟ್ರದ ಥಾಣೆ ಜಿಲ್ಲೆ ಡೊಂಬಿವಿಲಿಯ ಎಂಐಡಿಸಿಯ 2ನೇ ಹಂತದಲ್ಲಿರುವ ಅಮುದನ್‌ ಕೆಮಿಕಲ್ಸ್ ಘಟಕದಲ್ಲಿ ನಡೆದ ಸ್ಫೋಟದಲ್ಲಿ ಮೃತರ ಸಂಖ್ಯೆ ಒಂಬತ್ತಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಹಸೀಲ್ದಾರ್‌ ಸಚಿನ್‌ ಶೆಜಲ್‌ ಅವರು ಮಾಹಿತಿ ನೀಡಿ ಧ್ವಂಸಗೊಂಡ ಕಾರ್ಖಾನೆಯ ಆವರಣದಲ್ಲಿ ಹೆಚ್ಚಿನ ಶವಗಳು ಬಿದ್ದಿವೆ ಎಂದು ಅವರು ಶಂಕಿಸಿರುವುದರಿಂದ ಇದು ಹೆಚ್ಚಾಗಬಹುದು. ಅವಶೇಷಗಳನ್ನು ತೆರವುಗೊಳಿಸಲಾಗುತ್ತಿದೆ ಪ್ರಸ್ತುತ ಸಾವಿನ ಸಂಖ್ಯೆ ಒಂಬತ್ತಕ್ಕೆ ಏರಿದೆ ಹೇಳಿದರು.

ಸುತ್ತಮುತ್ತಲಿನ ಕಾರ್ಖಾನೆಗಳ ಅನೇಕ ಮಹಿಳೆಯರು ಸೇರಿದಂತೆ 64 ಜನರು ಗಾಯಗೊಂಡಿದ್ದು ಆರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಡೊಂಬಿವಿಲಿಯ ಏಮ್ಸೌ ಆಸ್ಪತ್ರೆಯಲ್ಲಿ 24 ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು. ನಿನ್ನೆ ಮಧ್ಯಾಹ್ನ ಕಾರ್ಖಾನೆಯಲ್ಲಿ ಬಾಯ್ಲರ್‌ ಸ್ಫೋಟಗೊಂಡಿತು ಇದರ ಪರಿಣಾಮ ಬೆಂಕಿಯುಹೊತ್ತಿಕೊಂಡು ಅಕ್ಕ ಪಕ್ಕದ ಕಾರ್ಖಾನೆಗಳು ಮತ್ತು ಮನೆಗಳ ಕೂಡ ಹಾನಿಯಾಗಿದೆ.

ಬೆಂಕಿ ನಂದಿಸಲು ಹತ್ತು ಅಗ್ನಿಶಾಮಕ ವಾಹನಗಳನ್ನು ಬಳಸಲಾಗಿ ಮಧ್ಯರಾತ್ರಿವರೆಗೂ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಕಲ್ಯಾಣ್‌-ಡೊಂಬಿವಿಲಿ ಮುನ್ಸಿಪಲ್‌ ಕಾರ್ಪೊರೇಷನ್‌ (ಕೆಡಿಎಂಸಿ) ಯ ವಿಪತ್ತು ನಿರ್ವಹಣಾ ಕೋಶದ ಕೈಲಾಸ್‌‍ ನಿಕಮ್‌ ಹೇಳಿದರು. ಇಡೀ ಪ್ರದೇಶವು ಸುಟ್ಟ ರಾಸಾಯನಿಕದ ಕೆಟ್ಟ ವಾಸನೆಯಿಂದ ತುಂಬಿದೆ ಪರಿಹಾರ ಕಾರ್ಯಾಚರಣೆ ನಡೆದಿದೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ಡೊಂಬಿವಿಲಿಯ ಮಾನ್ಪಾಡಾ ಪೊಲೀಸರು ಕಾರ್ಖಾನೆ ಮಾಲೀಕರ ವಿರುದ್ಧ ಭಾರತೀಯ ದಂಡ ಸಂಹಿತೆ 304 ಎ (ಅಪರಾಧೀಯ ನರಹತ್ಯೆ) ಮತ್ತು ಸ್ಫೋಟಕ ವಸ್ತುಗಳು ಮತ್ತು ಅಪಾಯಕಾರಿ ರಾಸಾಯನಿಕಗಳ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗಳಿಗೆ ರವಾನಿಸಲಾಗಿದೆ ದೇಹಗಳು ಗುರುತಿಸಲಾಗದಷ್ಟು ಸುಟ್ಟುಹೋಗಿವೆ. ಪ್ರಕರಣದ ತನಿಖೆಗಾಗಿ ಪೊಲೀಸ್‌‍ ತಂಡಗಳನ್ನು ರಚಿಸಲಾಗಿದೆ ಎಂದು ಥಾಣೆ ಪೊಲೀಸ್‌‍ ಕಮಿಷನರೇಟ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅನುಮತಿ ನೀಡುವ ಮತ್ತು ತಪಾಸಣೆ ನಡೆಸುವ ಜವಾಬ್ದಾರಿ ಹೊಂದಿರುವ ಸರ್ಕಾರಿ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲಾಗುವುದು ಎಂದರು. ದುರಂತ ನಡೆದ ರಾಸಾಯನಿಕ ಕಾರ್ಖಾನೆಯು ಆಹಾರ ಬಣ್ಣಗಳನ್ನು ಉತ್ಪಾದಿಸುತ್ತದೆ ಮತ್ತು ಕೆಲವು ಪರಿಸ್ಥಿತಿಗಳಲ್ಲಿ ಸೂಕ್ಷ್ಮಸ್ಫೋಟಗಳನ್ನು ಬಳಸಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್‌) ತಿಳಿಸಿದೆ.

ಸ್ಫೋಟದ ಶಬ್ದವು ಒಂದು ಕಿಲೋಮೀಟರ್‌ ದೂರದಲ್ಲಿ ಕೇಳಿಸಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.ಅಕ್ಕಪಕ್ಕದ ಕಟ್ಟಡಗಳ ಗಾಜಿನ ಕಿಟಕಿಗಳು ಬಿರುಕು ಬಿಟ್ಟಿದ್ದು, ಸುತ್ತಮುತ್ತಲಿನ ಹಲವು ಮನೆಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES

Latest News