Sunday, October 6, 2024
Homeಅಂತಾರಾಷ್ಟ್ರೀಯ | Internationalಪಪುವಾ ನ್ಯೂಗಿನಿಯಾದಲ್ಲಿ ಸಂಭವಿಸಿದ ಭೂಕುಸಿತದಲ್ಲಿ 100ಕ್ಕೂ ಹೆಚ್ಚು ಜನರು ಸಾವು

ಪಪುವಾ ನ್ಯೂಗಿನಿಯಾದಲ್ಲಿ ಸಂಭವಿಸಿದ ಭೂಕುಸಿತದಲ್ಲಿ 100ಕ್ಕೂ ಹೆಚ್ಚು ಜನರು ಸಾವು

ಮೆಲ್ಬೋರ್ನ್‌, ಮೇ 24 (ಎಪಿ)- ದೂರದ ಪಪುವಾ ನ್ಯೂಗಿನಿಯಾದಲ್ಲಿ ಇಂದು ಸಂಭವಿಸಿದ ಭೂಕುಸಿತದಲ್ಲಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಆಸ್ಟ್ರೇಲಿಯನ್‌ ಪೊಲೀಸರು ತಿಳಿಸಿದ್ದಾರೆ.

ಆಸ್ಟ್ರೇಲಿಯಾದ ದಕ್ಷಿಣ ಪೆಸಿಫಿಕ್‌ ದ್ವೀಪ ರಾಷ್ಟ್ರದ ರಾಜಧಾನಿ ಪೋರ್ಟ್‌ ಮೊರೆಸ್ಬಿಯ ವಾಯುವ್ಯಕ್ಕೆ ಸುಮಾರು 600 ಕಿಲೋಮೀಟರ್‌ ದೂರದ ನ್ಯೂಗಿನಿಯಾದ ಎಂಗಾ ಪ್ರಾಂತ್ಯದ ಕಾಕಲಂ ಗ್ರಾಮ ಸ್ಥಳೀಯ ಕಾಲಮಾನ ಮುಂಜಾನೆ 3 ಗಂಟೆಯ ಸುಮಾರಿಗೆ ಈ ದುರಂತ ಸಂಭವಿಸಿದೆ ಎಂದು ಎಬಿಸಿ ವರದಿ ತಿಳಿಸಿದೆ.

ಪೊಲೀಸ್‌‍ ಅಧಿಕಾರಿಗಳು ಮೃತರ ಅಂಕಿ-ಅಂಶವನ್ನು ದೃಢಪಡಿಸದಿದ್ದರೂ, ಪ್ರಸ್ತುತ ಅಂದಾಜು ಸಾವಿನ ಸಂಖ್ಯೆ 100 ಕ್ಕಿಂತ ಹೆಚ್ಚಿದೆ ಎಂದು ಸ್ಥಳೀಯರು ಹೇಳುತ್ತಾರೆ.ಸತ್ತವರ ಸಂಖ್ಯೆ ಇನ್ನೂ ಹೆಚ್ಚಿರಬಹುದು ಎಂದು ಗ್ರಾಮಸ್ಥರು ಹೇಳುತ್ತಿದ್ದು, ನೂರಕ್ಕೂ ಹೆಚ್ಚು ಜನರು ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದಾರೆ.

ಪರಿಹಾರ ಕಾರ್ಯಾಚರಣೆಗಳು ಶುರುವಾಗಿದ್ದು, ಮಣ್ಣಿನ ರಾಶಿಯನ್ನು ಅಗೆದು ದೇಹಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಗುಡ್ಡಗಾಡು ಪ್ರದೇಶವಾದ ಇಲ್ಲಿ ಈ ಗ್ರಾಮಕ್ಕೆ ಭೇಟಿ ನೀಡಲು ಕೆಲವೇ ಕೆಲವು ರಸ್ತೆಗಳಿವೆ. ಆದರೆ, ಇಲ್ಲಿ 10 ಲಕ್ಷಕ್ಕೂ ಹೆಚ್ಚು ಮಂದಿ ಈ ದ್ವೀಪ ರಾಜ್ಯದಲ್ಲಿ ವಾಸವಿದ್ದು, ಪ್ರಗತಿಪರ ರೈತರಿದ್ದಾರೆ. ಸುಮಾರು 800 ಭಾಷೆಗಳನ್ನು ಮಾತನಾಡುತ್ತಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

RELATED ARTICLES

Latest News