Sunday, December 1, 2024
Homeಕ್ರೀಡಾ ಸುದ್ದಿ | Sportsಮಲೇಷ್ಯಾ ಮಾಸ್ಟರ್ಸ್‌ನಲ್ಲಿ ಸೆಮಿಫೈನಲ್‌ಗೆ ಸಿಂಧು ಲಗ್ಗೆ

ಮಲೇಷ್ಯಾ ಮಾಸ್ಟರ್ಸ್‌ನಲ್ಲಿ ಸೆಮಿಫೈನಲ್‌ಗೆ ಸಿಂಧು ಲಗ್ಗೆ

ಕೌಲಾಲಂಪುರ್‌, ಮೇ 24 (ಪಿಟಿಐ) : ಇಲ್ಲಿ ನಡೆದ ಮಲೇಷ್ಯಾ ಮಾಸ್ಟರ್ಸ್‌ನಲ್ಲಿ ಡಬಲ್‌ ಒಲಂಪಿಕ್‌ ಪದಕ ವಿಜೇತೆ ಪಿವಿ ಸಿಂಧು ಅವರು ಚೀನಾದ ಅಗ್ರ ಶ್ರೇಯಾಂಕದ ಹ್ಯಾನ್‌ ಯುಯೆ ವಿರುದ್ಧ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

55 ನಿಮಿಷಗಳ ಕಾಲ ನಡೆದ ಕ್ವಾರ್ಟರ್‌ಫೈನಲ್‌ ಕದನದಲ್ಲಿ ಆರನೇ ಶ್ರೇಯಾಂಕದ ಹ್ಯಾನ್‌ರನ್ನು 21-13 14-21 21-12 ಸೆಟ್‌ಗಳಿಂದ ಸೋಲಿಸಿ ಸೆಮೀಸ್‌‍ಗೆ ಎಂಟ್ರಿ ಪಡೆದಿದ್ಧಾರೆ.

ಮಾಜಿ ವಿಶ್ವ ಚಾಂಪಿಯನ್‌ ಆಗಿರುವ ಸಿಂಧು ಈಗ ಕೊನೆಯ ನಾಲ್ಕು ಹಂತಗಳಲ್ಲಿ ಇಂಡೋನೇಷ್ಯಾದ ಕುಸುಮಾ ವರ್ದಾನಿ ಅಥವಾ ಥಾಯ್ಲೆಂಡ್‌ನ ಬುಸಾನನ್‌ ಒಂಗ್‌ಬಮ್ರುಂಗ್‌ಫಾನ್‌ ವಿರುದ್ಧ ಸೆಣಸಲಿದ್ದಾರೆ. ಇತರ ಫಲಿತಾಂಶಗಳಲ್ಲಿ ಅಶಿತಾ ಚಲಿಹಾ ಅವರು ಕ್ವಾರ್ಟರ್‌ಫೈನಲ್‌ನಲ್ಲಿ ಆರನೇ ಶ್ರೇಯಾಂಕದ ಚೀನಾದ ಜಾಂಗ್‌ ಯಿ ಮಾನ್‌ ವಿರುದ್ಧ 10-21 15-21 ಸೋಲು ಕಂಡರು.

RELATED ARTICLES

Latest News