ಶ್ರೀನಗರ, ಮೇ 25 (ಪಿಟಿಐ) ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರು ತಮ್ಮ ಮೊಬೈಲ್ ಸಂಖ್ಯೆಗೆ ಹೊರಹೋಗುವ ಕರೆಗಳನ್ನು ಯಾವುದೇ ವಿವರಣೆಯಿಲ್ಲದೆ ಅಮಾನತುಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ. ಬೆಳಿಗ್ಗೆಯಿಂದ ನನಗೆ ಯಾವುದೇ ಕರೆ ಮಾಡಲು ಸಾಧ್ಯವಾಗುತ್ತಿಲ್ಲ. ಅನಂತನಾಗ್ ಲೋಕಸಭಾ ಕ್ಷೇತ್ರದಲ್ಲಿ ಮತದಾನದ ದಿನದಂದು ಈ ಹಠಾತ್ ಸೇವೆಗಳನ್ನು ಸ್ಥಗಿತಗೊಳಿಸಿದ್ದಕ್ಕೆ ಯಾವುದೇ ವಿವರಣೆಯಿಲ್ಲ ಎಂದು ಮೆಹಬೂಬಾ ಪಿಟಿಐಗೆ ತಿಳಿಸಿದರು.
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಅನಂತನಾಗ್-ರಜೌರಿ ಲೋಕಸಭಾ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಪ್ರಸ್ತುತ ಮತದಾನ ನಡೆಯುತ್ತಿದೆ.ತಮ್ಮ ಮೊಬೈಲ್‌ನಿಂದ ಹೊರ ಹೋಗುವ ಕರೆಗಳನ್ನು ಸ್ಥಗಿತಗೊಳಿಸಿರುವ ಬಗ್ಗೆ ಮುಫ್ತಿ ಅವರು ಎಕ್‌್ಸ ನಲ್ಲಿ ಬರೆದುಕೊಂಡಿದ್ದಾರೆ.
ಚುನಾವಣೆಗೆ ಸ್ವಲ್ಪ ಮುಂಚಿತವಾಗಿ ನನ್ನ ಸೆಲ್ಯುಲಾರ್ ಫೋನ್ ಸೇವೆಯನ್ನು ಹಠಾತ್ತನೆ ಸ್ಥಗಿತಗೊಳಿಸಲಾಗಿದೆ. ನಿನ್ನೆ ಸಂಜೆ ಮತ್ತು ಇಂದು ಮುಂಜಾನೆ, ಪಿಡಿಪಿ ಕಾರ್ಯಕರ್ತರು ಮತ್ತು ಪೋಲಿಂಗ್ ಏಜೆಂಟ್‌ಗಳನ್ನು ಮತಗಟ್ಟೆಯಾದ್ಯಂತ ಬಂಧಿಸಲಾಗಿದೆ ಎಂದು ಅವರು ದೂರಿದ್ದಾರೆ.
ಮೆಹಬೂಬಾ ಅವರು ಪಿಡಿಪಿ ಕಾರ್ಯಕರ್ತರು ಮತ್ತು ಪೋಲಿಂಗ್ ಏಜೆಂಟ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು. ನಮ್ಮ ಅನೇಕ ಮತಗಟ್ಟೆ ಏಜೆಂಟರು ಮತ್ತು ಕೆಲಸಗಾರರನ್ನು ಮತದಾನ ಮಾಡುವ ಮುನ್ನವೇ ಬಂಧಿಸಲಾಗುತ್ತಿದೆ.
ಕುಟುಂಬಗಳು ಪೊಲೀಸ್ ಠಾಣೆಗಳಿಗೆ ಹೋದಾಗ, ಎಸ್‌ಎಸ್‌ಪಿ ಅನಂತನಾಗ್ ಮತ್ತು ದಕ್ಷಿಣ ಕಾಶೀರ ಡಿಐಜಿ ಅವರ ಸೂಚನೆಯ ಮೇರೆಗೆ ಇದನ್ನು ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ನಾವು ಆಯೋಗಕ್ಕೆ ಪತ್ರ ಬರೆದಿದ್ದೇವೆ. ಅವರ ಸಮಯೋಚಿತ ಮಧ್ಯಪ್ರವೇಶಕ್ಕಾಗಿ ಆಶಿಸುತ್ತೇನೆ ಎಂದು ಪಿಡಿಪಿ ಮುಖ್ಯಸ್ಥರು ಎಕ್‌್ಸನಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.