Friday, November 22, 2024
Homeರಾಜ್ಯBREAKING: ಒಂದು ತಿಂಗಳ ನಂತರ ವಿಡಿಯೋ ಮೂಲಕ ಪ್ರಜ್ವಲ್ ರೇವಣ್ಣ ಪ್ರತ್ಯಕ್ಷ

BREAKING: ಒಂದು ತಿಂಗಳ ನಂತರ ವಿಡಿಯೋ ಮೂಲಕ ಪ್ರಜ್ವಲ್ ರೇವಣ್ಣ ಪ್ರತ್ಯಕ್ಷ

ಬೆಂಗಳೂರು, ಮೇ 27- ಕರ್ನಾಟಕ ಮಾತ್ರವಲ್ಲದೆ, ದೇಶಾದ್ಯಂತ ವಿವಾದದ ಬಿರುಗಾಳಿಯನ್ನೇ ಎಬ್ಬಿಸಿದ್ದ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಹಾಸನ ಸಂಸದ ಸಂಸದ ಪ್ರಜ್ವಲ್ ರೇವಣ್ಣ ಕೊನೆಗೂ ಒಂದು ತಿಂಗಳ ನಂತರ ಪ್ರತ್ಯಕ್ಷವಾಗಿದ್ದು, ಶುಕ್ರವಾರ ಎಸ್‍ಐಟಿ ಮುಂದೆ ವಿಚಾರಣೆಗೆ ಹಾಜರಾಗುವುದ್ದಾಗೆ ತಿಳಿಸಿದ್ದಾರೆ.

ಈ ಸಂಬಂಧದ ಪ್ರಕರಣ ಹೊರಬಿದ್ದ ನಂತರ ಬಂಧನದ ಬೀತಿಯಿಂದ ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ ಇಂದು ಇದ್ದಕ್ಕಿದ್ದಂತೆ ವಿಡಿಯೋ ಒಂದನ್ನು ಹೊರಬಿಟ್ಟಿದ್ದು, ತಾವು ಮೇ 31ರಂದು ಸ್ವದೇಶಕ್ಕೆ ಆಗಮಿಸಿ ಎಸ್‍ಐಟಿ ಮುಂದೆ ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ್ದಾರೆ.

ಅಜ್ಞಾತ ಸ್ಥಳದಿಂದ 2 ನಿಮಿಷ 57 ಸೆಕೆಂಡ್‍ಗಳ ವಿಡಿಯೋ ಮಾಡಿದ್ದು, ಎಲ್ಲಿಂದ ಈ ವಿಡಿಯೋ ಮಾಡಿ ಬಿಡುಗಡೆ ಮಾಡಿದ್ದಾರೆ ಎಂಬುದು ರಹಸ್ಯವಾಗಿಯೇ ಉಳಿದಿದೆ. ಇನ್ನೂ ತಮ್ಮ ವಿಡಿಯೋದಲ್ಲಿ ತಮ್ಮ ಕುಟುಂಬದ ವಿರುದ್ಧ ರಾಜಕೀಯ ಷಡ್ಯಂತರ ನಡೆಯುತ್ತಿದೆ. ಕಾನೂನು ಮೂಲಕ ಹೋರಾಟ ನಡೆಸುತ್ತೇನೆ. ನಾನು ಯಾವುದೇ ತಪ್ಪು ಮಾಡಿಲ್ಲವೆಂದು ಸಮರ್ಥಿಸಿಕೊಂಡಿದ್ದಾರೆ.

ಮುಂದುವರೆದು ತಂದೆ, ತಾಯಿ, ತಾತ ಮತ್ತು ಕುಮಾರಣ್ಣನ ಕ್ಷಮೆ ಕೇಳಿದ್ದಾರೆ. ಅಲ್ಲದೆ, ಪಕ್ಷದ ಕಾರ್ಯಕರ್ತರ ಹಾಗೂ ನಾಡಿನ ಜನರ ಕ್ಷಮೆ ಯಾಚಿಸಿದ್ದಾರೆ.ವಿದೇಶಕ್ಕೆ ಹೋಗುವುದು ಪೂರ್ವ ನಿರ್ಧಾರವಾಗಿತ್ತು. ನಾನು ಪ್ರಯಾಣ ಕೈಗೊಂಡಾಗ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ ಎಂದಿದ್ದಾರೆ.

ವಿದೇಶದಲ್ಲಿ ಯೂ ಟ್ಯೂಬ್ ನ್ಯೂಸ್ ನೋಡಿದಾಗ ನನ್ನ ಮೇಲೆ ಗಂಭೀರ ಆರೋಪ ಕೇಳಿಬಂದಿರುವುದು ಗೊತ್ತಾಯಿತು. ಎಸ್‍ಐಟಿ ರಚನೆ ಮಾಡಿ ನೋಟಿಸ್ ನೀಡಿರುವುದು ತಿಳಿಯಿತು. ನಾನು ರಾಜಕೀಯವಾಗಿ ಬೆಳೆಯಬಾರದು ಎಂಬ ಕಾರಣಕ್ಕೆ ನನ್ನ ವಿರುದ್ಧ ಪಿತೂರಿ ಮಾಡಿದ್ದಾರೆ ಎಂಬ ವಿಡಿಯೋ ಸಂದೇಶ ರವಾನಿಸಿದ್ದಾರೆ.

RELATED ARTICLES

Latest News