Saturday, July 27, 2024
Homeಕ್ರೀಡಾ ಸುದ್ದಿಪಿಚ್‌ಕ್ಯುರೇಟರ್‌ ಹಾಗೂ ಕ್ರೀಡಾ ಸಿಬ್ಬಂದಿಗೆ ಬಿಸಿಸಿಐನಿಂದ ತಲಾ 25 ಲಕ್ಷ ರೂ. ಬಹುಮಾನ ಘೋಷಣೆ

ಪಿಚ್‌ಕ್ಯುರೇಟರ್‌ ಹಾಗೂ ಕ್ರೀಡಾ ಸಿಬ್ಬಂದಿಗೆ ಬಿಸಿಸಿಐನಿಂದ ತಲಾ 25 ಲಕ್ಷ ರೂ. ಬಹುಮಾನ ಘೋಷಣೆ

ನವದೆಹಲಿ, ಮೇ 27- ಮುಂಬೈ-2024ರ ಐಪಿಎಲ್‌ ಟೂರ್ನಿಯ ಯಶಸ್ಸಿಗೆ ಕಾರಣರಾದ ಪ್ರಮುಖ 10 ಐಪಿಎಲ್‌ ಕ್ರೀಡಾಂಗಣಗಳ ಪಿಚ್‌ಕ್ಯುರೇಟರ್‌ ಹಾಗೂ ಕ್ರೀಡಾ ಸಿಬ್ಬಂದಿಗೆ ಬಿಸಿಸಿಐ ತಲಾ 25 ಲಕ್ಷ ರೂ. ಬಹುಮಾನ ಘೋಷಿಸಿದೆ. ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಅವರು, ಮಾನವೀಯತೆಯಿಂದ ಕ್ರೀಡಾಂಗಣಗಳ ಪಿಚ್ಕ್ಯುರೇಟರ್‌ ಹಾಗೂ ಕ್ರೆಡಾ ಸಿಬ್ಬಂದಿಗೆ ಬಿಸಿಸಿಐ ತಲಾ 25 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ.

ಈ ಕುರಿತು ಎಕ್‌್ಸ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಜಯ್‌ ಶಾ, ಅನಿರೀಕ್ಷಿತ ಮಳೆ, ಕಠಿಣ ಹವಾಮಾನ ಪರಿಸ್ಥಿತಿಗಳಲ್ಲಿಯೂ ಮೈದಾನ ಮತ್ತು ಪಿಚ್‌ ಅನ್ನು ನೆನೆಯದಂತೆ ನೋಡಿಕೊಂಡು, ಮೈದಾನಕ್ಕೆ ನೀರು ಬಂದರೂ ಅದನ್ನು ಹರಸಾಹಸದಿಂದ ಒಣಗಿಸಿ, ಆಟಕ್ಕೆ ಅಣಿಗೊಳಿಸಿದ ಅವರು, ಟೂರ್ನಿ ಯಶಸ್ವಿಯಾಗಲು ಪ್ರಮುಖ ಕಾರಣರಾಗಿದ್ದಾರೆ.

ಹಾಗಾಗಿ ನಮ್ಮ ಶ್ಲಾಘನೆಯ ಸಂಕೇತವಾಗಿ ಐಪಿಎಲ್‌ ಟೂರ್ನಿ ನಡೆದ ಪ್ರಮುಖ ಸ್ಥಳಗಳ ಕ್ರೀಡಾಂಗಣ ಸಿಬ್ಬಂದಿ ಹಾಗೂ ಪಿಚ್‌ ಕ್ಯುರೇಟರ್‌ಗಳಿಗೆ ತಲಾ 25 ಲಕ್ಷ ರೂ. ನೀಡಲು ಮುಂದಾಗಿದ್ದೇವೆ. ಕೇವಲ ಒಂದೆರಡು ಪಂದ್ಯಗಳನ್ನು ಆಯೋಜಿಸಿದ್ದ ಸ್ಥಳಗಳಿಗೆ 10 ಲಕ್ಷ ರೂ. ಬಹುಮಾನ ಸ್ವೀಕರಿಸಲಿದ್ದಾರೆ. ನಿಮ್ಮ ಸಮರ್ಪಣಾ ಮನೋಭಾವ ಹಾಗೂ ಕಠಿಣ ಪರಿಶ್ರಮಕ್ಕೆ ಧನ್ಯವಾದಗಳು ಎಂದು ತಮ್ಮ ಎಕ್‌್ಸ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇದಕ್ಕೆ ಎಕ್‌್ಸ ಮೂಲಕವೇ ಧನ್ಯವಾದ ಅರ್ಪಿಸಿರುವ ಆರ್‌ಸಿಬಿ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ , ಐಪಿಎಲ್‌ನ ಅಸಾಧಾರಣ ಹೀರೋಗಳ ಪ್ರಯತ್ನಗಳನ್ನು ಗುರುತಿಸಲು ಬಿಸಿಸಿಐನಿಂದ ಉತ್ತಮ ಕ್ರಮವಾಗಿದೆ ಎಂದು ಶ್ಲಾಸಿದ್ದಾರೆ. ಕಳೆದ ವರ್ಷ ಶ್ರೀಲಂಕಾ ಮತ್ತು ಪಾಕ್‌ ಜಂಟಿ ಆತಿಥ್ಯದಲ್ಲಿ ನಡೆದ ಏಕದಿನ ಏಷ್ಯಾಕಪ್‌ ಟೂರ್ನಿ ವೇಳೆ ಜಯ್‌ ಶಾ ಅವರು, ಕೊಲಂಬೊ ಕ್ರೀಡಾ ಸಿಬ್ಬಂದಿಗೆ 42 ಲಕ್ಷ ರೂ. ಬಹುಮಾನ ಘೋಷಿಸಿದ್ದರು.

RELATED ARTICLES

Latest News