ದಾತಿಯಾ ,ಮೇ.29- ಹೈಟೆನ್ಶನ್ ವಿದ್ಯುತ್ ತಂತಿ ಕೆಳಗೆ ಬಿದ್ದು ಕಸದ ರಾಶಿಗೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡು ಪಕ್ಕದ ಮನೆ ತಗುಲಿ ದಂಪತಿ ಮತ್ತು ಮಗಳು ಸುಟ್ಟು ಕರಕಲಾದ ಘಟನೆ ಮಧ್ಯಪ್ರದೇಶದ ದಾತಿಯಾ ಜಿಲ್ಲೆಯಲ್ಲಿ ನಡೆದಿದೆ.
ಲಾಂಚ್ ಪೊಲೀಸ್ ಠಾಣೆ ವ್ಯಾಪ್ತಿಯ ತಿಗ್ರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ದಂಪತಿಯ ಅಪ್ರಾಪ್ತ ಮಗ ಬೆಂಕಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮನೆಯ ಹಿಂಬದಿಯ ಹೈಟೆನ್ಶನ್ ವಿದ್ಯುತ್ ತಂತಿಯ ಕೆಳಗೆ ಬಿದ್ದಿದ್ದ ಕಸದ ರಾಶಿಗೆ ಬೆಂಕಿ ಹೊತ್ತಿಕೊಂಡಿದೆ.ನಂತರ ಬೆಂಕಿ ಮನೆಗೆ ವ್ಯಾಪಿಸಿದೆ ಎಂದು ಲಾಂಚ್ ಪೊಲೀಸ್ ಠಾಣೆ ಪ್ರಭಾರಿ ಶ್ವೇತಾ ಸಿಕರ್ವಾರ್ ತಿಳಿಸಿದ್ದಾರೆ.
ಗ್ರಾಮಸ್ಥರು ಬೆಂಕಿಯನ್ನು ನೋಡಿ ಮನೆಯಲ್ಲಿದ್ದವರನ್ನುರಕ್ಷಿಸಲು ಪ್ರಯತ್ನಿಸುವಷ್ಟರಲ್ಲಿ ಮನೆ ಮಾಲೀಕ ವೀರು ಕರಣ್ (37) ಸುಟ್ಟು ಕರಕಲಾಗಿದ್ದಾರೆ ಅವರ ಪತ್ನಿ ಸರಸ್ವತಿ ಕರಣ್ (34) ಮತ್ತು ಅವರ ಪುತ್ರಿ ನಿಧಿ (9) ರಾತ್ರಿ ಚಿಕಿತ್ಸೆ ವೇಳೆ ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿದರು.
ದಂಪತಿಯ ಏಳು ವರ್ಷದ ಮಗನಿಗೆ ಗಂಭೀರ ಸುಟ್ಟ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಅವರು ತಿಳಿಸಿದ್ದಾರೆ .ತನ್ನದಲ್ಲದ ತಪ್ಪಿಗೆ ಅಪ್ಪ-ಅಮ,ತಂಗಿಯನ್ನು ಕಳೆದುಕೊಂಡು ಬಾಲಕ ಅನಾಥನಾಗಿದ್ದಾನೆ.ಘಟನೆಗೆ ಸ್ಥಳೀಯರು ಕಂಬನಿ ಮಡಿದಿದ್ದಾರೆ.