Sunday, December 1, 2024
Homeರಾಷ್ಟ್ರೀಯ | Nationalಪೂಂಚ್‌ನ ಗಡಿಯಲ್ಲಿ ಶಂಕಿತ ಪಾಕ್‌ ಡ್ರೋನ್‌ ಹೊಡೆದುರುಳಿಸಿದ ಬಿಎಸ್‌‍ಎಫ್‌

ಪೂಂಚ್‌ನ ಗಡಿಯಲ್ಲಿ ಶಂಕಿತ ಪಾಕ್‌ ಡ್ರೋನ್‌ ಹೊಡೆದುರುಳಿಸಿದ ಬಿಎಸ್‌‍ಎಫ್‌

ಜಮ್ಮು, ಮೇ 29 – ಕಾಶ್ಮೀರದ ಪೂಂಚ್‌ನ ಗಡಿ ನಿಯಂತ್ರಣ ರೇಖೆ ಬಳಿ ಕಳೆದ ರಾತ್ರಿ ಶಂಕಿತ ಪಾಕಿಸ್ತಾನಿ ಡ್ರೋನ್‌ ಅನ್ನು ಹೊಡೆದುರುಳಿಸಲು ಗಡಿ ಭದ್ರತಾ ಪಡೆ ಸಿಬ್ಬಂದಿ ಹಲವು ಸುತ್ತು ಗುಂಡು ಹಾರಿಸಿದ್ದಾರೆ

ರಾತ್ರಿ 11.30 ರ ಸುಮಾರಿಗೆ ಖಾನೇತಾರ್‌ ಗ್ಯಾರಿಸನ್‌ನಲ್ಲಿ ಗಡಿ ಕಾವಲಿಗಿದ್ದ ಯೋಧರು ಪಾಕ್‌ಕಡೆಯಿಂದ ಡ್ರೋನ್‌ ಭಾರತ ಪ್ರದೇಶ ಪ್ರವೇಶಿಸುತ್ತಿರುವುದನ್ನು ನೋಡಿ ಗುಂಡು ಹಾರಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಡೀ ಪ್ರದೇಶವನ್ನು ಕಟ್ಟೆಚ್ಚರದಲ್ಲಿ ಇರಿಸಲಾಗಿತ್ತುಇಂದು ಬೆಳಿಗ್ಗೆ ಬೃಹತ್‌ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶಸ್ತ್ರಸ್ತ್ರಗಳು ಮತ್ತು ಮಾದಕವಸ್ತುಗಳನ್ನು ಡ್ರೋನ್‌ನಿಂದ ಬೀಳಿಸುವ ಬಗ್ಗೆ ತಿಳಿಸುವವರಿಗೆ 3 ಲಕ್ಷ ರೂಪಾಯಿ ನಗದು ಬಹುಮಾನವನ್ನು ಘೋಷಿಸಿದ್ದಾರೆ.

RELATED ARTICLES

Latest News