ಬಿಎಸ್‍ಎಫ್ ಯೋಧರ ಗುಂಡಿಗೆ ಪಾಕ್ ನುಸುಳುಕೋರ ಬಲಿ

ಚಂಡಿಘಡ,ಜ.3- ದೇಶದ ಗಡಿ ನುಸುಳಲು ಯತ್ನಿಸಿದ ಪಾಕ್ ನುಸುಳುಕೋರನನ್ನು ಗಡಿ ಭದ್ರತಾ ಪಡೆಗಳು ಹತ್ಯೆ ಮಾಡಿವೆ. ಪಂಜಾಬ್ ಪ್ರಾಂತ್ಯದ ಗಡಿಭಾಗದಲ್ಲಿರುವ ಇಂಡೋ-ಪಾಕ್ ಅಂತಾರಾಷ್ಟ್ರೀಯ ಗಡಿ ಸಮೀಪದ ಗುರುದಾಸ್‍ಪುರ್ ಸೆಕ್ಟರ್ ಸಮೀಪ ನುಸುಳುಕೋರನನ್ನು ಹೊಡೆದುರುಳಿಸಲಾಗಿದೆ. ಇಂದು ಬೆಳಿಗ್ಗೆ ಎಂಟು ಗಂಟೆ ಸುಮಾರಿಗೆ ನುಸುಳುಕೋರ ಶಸ್ತ್ರಸಜ್ಜಿತನಾಗಿ ದೇಶದ ಗಡಿ ನುಸುಳಲು ಯತ್ನಿಸುತ್ತಿದ್ದಾಗ ಭಾರತೀಯ ಯೋಧರು ಆತನನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಶತಮಾನದ ಸಂತ, ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯ ಆತನ ಜತೆಗೆ ಇನ್ನಿತರ ಹಲವರು ಗಡಿ ನುಸುಳುವ ಸಾಧ್ಯತೆ […]

ಗಡಿಯಲ್ಲಿ ಹೆಚ್ಚಾಯ್ತು ಡ್ರಗ್ಸ್, ಶಸ್ತ್ರಾಸ್ತ್ರ ಸಾಗಿಸುವ ಪಾಕ್ ಡ್ರೋನ್ ಹಾವಳಿ

ಚಂಡೀಗಢ, ಡಿ .22-ಗಡಿ ಪ್ರದೇಶದಲ್ಲಿ ದಟ್ಟವಾದ ಮಂಜಿನ ಲಾಭ ಪಡೆದು ಡ್ರೋನ್‍ಗಳ ಮೂಲಕ ಪಾಕಿಸ್ತಾನ ಕಡೆಯಿಂದ ಮಾದಕ ದ್ರವ್ಯ ಮತ್ತು ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಹೆಚ್ಚಾಗುತ್ತಿದ್ದು ಗಡಿ ಭದ್ರತಾ ಪಡೆ ಕಟ್ಟೆಚ್ಚರ ವಹಿಸಿದೆ. ಕಳೆದ ಕೆಲವು ದಿನಗಳಲ್ಲಿ ದಟ್ಟವಾದ ಮಂಜಿನ ಹಿನ್ನೆಲೆಯಲ್ಲಿ ಗಡಿಯಾಚೆಯಿಂದ ಶಸ್ತ್ರಾಸ್ತ್ರಗಳು ಮತ್ತು ಹೆರಾಯಿನ್ ಮಾದಕವನ್ನು ಭಾರತದ ಭೂಪ್ರದೇಶಕ್ಕೆ ಡ್ರೋನ್ ಮೂಲಕ ಕಳುಹಿಸುತ್ತಿರುವುದು ಗಣನೀಯವಾಗಿ ಹೆಚ್ಚಿವೆ ಎಂದು ಬಿಎಸ್‍ಎಫ್ ಅಧಿಕಾರಿಗಳು ತಿಳಿಸಿದ್ದಾರೆ. ಸುಮರು 25 ಕೆಜಿ ಹೆರಾಯಿನ್ ಮದಕವಸ್ತುವನ್ನು ಫಾಜಿಲ್ಕಾದಲ್ಲಿನ ಕೃಷಿ ಭೂಮಿಯಲ್ಲಿ ಪತ್ತೆಹಚ್ಚಿ ವಶಪಡಿಸಿಕೊಳ್ಳಲಾಗಿದೆ. […]

ಗಡಿ ದಾಟಿದ ಬಿಎಸ್‍ಎಫ್ ಯೋಧನನ್ನ ವಶಕ್ಕೆ ಪಡೆದ ಪಾಕ್

ನವದೆಹಲಿ,ಡಿ.8- ಪಂಜಾಬ್ ಗಡಿಯಲ್ಲಿ ಅಜಾಗರೂಕತೆಯಿಂದ ಪಾಕಿಸ್ತಾನದ ಭೂಮಿ ಪ್ರವೇಶಿಸಿದ ಭಾರತೀಯ ಗಡಿ ಭದ್ರತಾ ಪಡೆ ಯೋಧನನ್ನು ಪಾಕ್ ರೇಂಜರ್‍ಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಯೋಧನ ಹಸ್ತಾಂತರಕ್ಕಾಗಿ ಕಾಯಲಾಗುತ್ತಿದೆ ಎಂದು ಬಿಎಸ್‍ಎಫ್‍ ಅಧಿಕಾರಿಗಳು ತಿಳಿಸಿದ್ದಾರೆ. ಪಂಜಾಬ್‍ನ ಅಬೋಹರ್ ಸೆಕ್ಟರ್‍ನಲ್ಲಿ ಕಳೆದ ವಾರ ಡಿಸೆಂಬರ್ 1 ರಂದು ಭಾರತ-ಪಾಕಿಸ್ತಾನ ಅಂತರಾಷ್ಟ್ರೀಯ ಗಡಿ ಉದ್ದಕ್ಕೂ ಗಡಿ ರೇಖೆಯ ತಪಾಸಣೆಯನ್ನು ಕೈಗೊಳ್ಳುವಾಗ ಯೋಧರಿಬ್ಬರು ಪಾಕ್‍ಬದಿಗೆ ದಾಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗಂಗೂಲಿ, ರಿಕ್ಕಿ ದಾಖಲೆ ಸರಿಗಟ್ಟಲು ಕೊಹ್ಲಿ ತವಕ ಸಶಸ್ತ್ರ ಪಡೆ ಧ್ವಜ ದಿನಾಚರಣೆ […]

ಪಾಕ್ ಗಡಿಯಲ್ಲಿ ಮತ್ತಷ್ಟು ಹೆಚ್ಚುತ್ತಿದೆ ಕಳ್ಳಸಾಗಣೆಕೆ

ಜಮ್ಮು, ನ.15 -ನೆರೆಯ ಪಾಕಿಸ್ತಾನದಿಂದ ಅಂತಾರಾಷ್ಟ್ರೀಯ ಗಡಿಯಲ್ಲಿ ಡ್ರೋನ್ ಮೂಲಕ ಕಳ್ಳಸಾಗಣೆಕೆ ಹೆಚ್ಚುತ್ತಿರುವ ಬಗ್ಗೆ ಸೇರಿದಂತೆ ಭದ್ರತಾ ಪರಿಸ್ಥಿತಿಯನ್ನು ಪಶ್ಚಿಮ ಕಮಾಂಡ್‍ನ ಬಿಎಸ್‍ಎಫ್ ಹೆಚ್ಚುವರಿ ಮಹಾನಿರ್ದೇಶಕ ಪಿ ವಿ ರಾಮ ಶಾಸ್ತ್ರಿ ಪರಿಶೀಲಿಸಿರು. ಮೂರು ದಿನಗಳ ಭೇಟಿಗಾಗಿ ಚಂಡೀಗಢದಿಂದ ಜಮ್ಮುವಿಗೆ ಆಗಮಿಸಿದ ಶಾಸ್ತ್ರಿ ಅವರನ್ನು ಗಡಿ ಭದ್ರತಾ ಪಡೆಯ ಇನ್‍ಸ್ಪೆಕ್ಟರ್ ಜನರಲ್ ಜಮ್ಮು ಫ್ರಾಂಟಿಯರ್ ಡಿ ಕೆ ಬೂರಾ ನೇತೃತ್ವದ ಉನ್ನತ ಅಧಿಕಾರಿಗಳು ಸ್ವಾಗತಿಸಿದರು.ಬೂರಾ ಅವರು ಗುಪ್ತಚರ ಭದ್ರತೆ ಸೇರಿದಂತೆ ನಿರ್ಣಾಯಕ ಅಂಶಗಳ ಕುರಿತು ಹೆಚ್ಚುವರಿ ಮಹಾನಿರ್ದೇಶಕರಿಗೆ […]

ಪಾಕ್ ಗಡಿಯಲ್ಲಿ ಡ್ರೋನ್ ಹಾರಾಟ ದ್ವಿಗುಣ

ನವದೆಹಲಿ, ನ.13- ಪಾಕಿಸ್ತಾನದ ಗಡಿಯುದ್ದಕ್ಕೂ ಡ್ರೋನ್ ಮೂಲಕ ಡ್ರಗ್ಸ್, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಭಾರತದೊಳಗೆ ನುಗಿಸುವ ಪಯತ್ನಗಳು ದ್ವಿಗುಣಗೊಂಡಿದ್ದು ಬಿಎಸ್‍ಎಫ್ ಪಡೆಗಳು ಸಾಕಷ್ಟು ಹೊಡೆದುರುಳಿಸಿದೆ ಬೆದರಿಕೆಯ ಅಗಾಧತೆ ಹವ್ವಗಿದೆ ಎಂದು ಡೈರೆಕ್ಟರ್ ಜನರಲ್ ಪಂಕಜ್ ಕುಮಾರ್ ಸಿಂಗ್ ಹೇಳಿದ್ದಾರೆ. ಕಳೆದ 2020 ರಲ್ಲಿ ಭಾರತ-ಪಾಕಿಸ್ತಾನ ಅಂತರಾಷ್ಟ್ರೀಯ ಗಡಿಯಲ್ಲಿ ಸುಮಾರು 79 ಡ್ರೋನ್ ಹಾರಾಟ ಬಿಎಸ್‍ಎಫ್ ಪತ್ತೆ ಮಾಡಿತ್ತ ಆದರೆ ಕಳೆದ ವರ್ಷ 109 ಕ್ಕೆ ಏರಿದ್ದು ಮತ್ತು ಈ ವರ್ಷ ಈವರೆಗೆ 266 ಕಂಡುಬಂದಿದ್ದು ಸಂಖ್ಯೆ ದ್ವಿಗುಣಗೊಂಡಿದೆ […]

ಎಸ್‍ಐ ನೇಮಕಾತಿ ಹಗರಣ: ಬಿಎಸ್‍ಎಫ್ ವೈದ್ಯಕೀಯ ಅಧಿಕಾರಿ ಬಂಧನ

ನವದೆಹಲಿ, ಅ.19 – ಜಮ್ಮು ಮತ್ತು ಕಾಶ್ಮೀರ ಸೇವೆಗಳ ಆಯ್ಕೆ ಮಂಡಳಿ (ಜೆಕೆಎಸ್‍ಎಸ್‍ಬಿ) ವತಿಯಿಂದ ಸಬ್ ಇನ್ಸ್‍ಪೆಕ್ಟರ್ ನೇಮಕಾತಿಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಗಡಿ ಭದ್ರತಾ ಪಡೆಯ ವೈದ್ಯಾಧಿಕಾರಿ ಕರ್ನಿಲ್ ಸಿಂಗ್ ಎಂಬುವವರನ್ನು ಇಂದು ಸಿಬಿಐ ಬಂಧಿಸಿದೆ. ಸಿಂಗ್ ಅವರನ್ನು ವಿಚಾರಣೆ ನಡೆಸಿದ ನಂತರ ವಿಶೇಷ ಕೇಂದ್ರೀಯ ತನಿಖಾ ದಳ (ಸಿಬಿಐ) ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅವರು ಅಧಿಕಾರಿಗಳು ತಿಳಿಸಿದ್ದಾರೆ. ಜಮ್ಮು-ಕಾಶ್ಮೀರದ ಅಖ್ನೂರ್ನಲ್ಲಿರುವ ಕೋಚಿಂಗ್ ಸೆಂಟರ್‍ನ ಮಾಲೀಕ ಅವಿನಾಶ್ ಗುಪ್ತಾ ಮತ್ತು ಬೆಂಗಳೂರು ಮೂಲದ ಕಂಪೆನಿಯನ್ನು ಸಿಬಿಐ […]

ಗಡಿಯಲ್ಲಿ ಪಾಕ್ ಒಳನುಸುಳುಕೋರನ ಬಂಧನ

ಜಮ್ಮು, ಆ.27- ಇಂದು ಮುಂಜಾನೆ ಗಡಿ ಭದ್ರತಾ ಪಡೆ (ಬಿಎಸ್ಎಫ್) ಇಲ್ಲಿನ ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನಿ ನುಸುಳುಕೊರನನ್ನು ಬಂಧಿಸಿದೆ. ಪಾಕ್‍ನ ಸಿಯಾಲ್ಕೋಟನ್ ನಿವಾಸಿ ಮೊಹಮ್ಮದ್ ಶಬಾದ್ (45) ಗಡಿಯಾಚೆಯಿಂದ ಅರ್ನಿಯಾ ಸೆಕ್ಟರ್‍ನಲ್ಲಿ ಭಾರತ ಪ್ರದೇಶದೊಳಗೆ ನುಸುಳಲು ಪ್ರಯತ್ನಿಸುತ್ತಿದ್ದಾಗ ಬಿಎಸ್ಎಫ್ ಸಿಬ್ಬಂದಿ ಗಮನಿಸಿ ಎಚ್ಚರಿಕೆಯ ಗುಂಡುಗಳನ್ನು ಹಾರಿಸಿದರು ನಂತರ ಆತನನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಅತನ ಬಳಿ ಯಾವುದೇ ದೋಷಾರೋಪಣೆಯ ವಸ್ತು ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಗಸ್ಟ್ 25 ರಂದುಸಾಂಬಾ ಜಿಲ್ಲಾಯ ಪಾಕಿಸ್ತಾನ ಕಡೆಯಿಂದ ಒಳನುಸುಳಿದ ವ್ಯಕ್ತಿ ಬಳಿ […]

ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ನುಸುಳುಕೋರನ ಮೇಲೆ BSF ಫೈರಿಂಗ್

ಜಮ್ಮು, ಆ.25 – ಪಾಕಿಸ್ತಾನದಿಂದ ಮಾದಕ ವಸ್ತುಗಳನ್ನು ಭಾರತದೊಳಗೆ ಕಳ್ಳಸಾಗಣೆ ಮಾಡುವ ಪ್ರಯತ್ನವನ್ನು ಬಿಎಸ್ಎಫ್ ಪಡೆಗಳು ವಿಫಲಗೊಳಿಸಿದೆ. ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲಾಯಲ್ಲಿ ಇಂದು ಮುಂಜಾನೆ ಭಾರತದೊಳಗೆ ನುಗ್ಗುತ್ತಿದ್ದ ಪಾಕಿಸ್ತಾನಿ ಒಳನುಸುಳುಕೋರನ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಮುಂಜಾನೆ ಅಂತಾರಾಷ್ಟ್ರೀಯ ಗಡಿಯ ಚಿಲ್ಲಿಯಾರಿ ಗಡಿ ಹೊರ ಠಾಣೆ ಬಳಿ ಚೀಲವನ್ನು ಹೊತ್ತುಕೊಂಡಿದ್ದ ವ್ಯಕ್ತಿಯೊಬ್ಬನ ಅನುಮಾನಾಸ್ಪದ ಚಲನವಲನಗಳನ್ನು ಗಮನಿಸಿ ಗಡಿ ರಕ್ಷಣಾ ಪಡೆ ಎಚ್ಚೆತ್ತು ಗುಂಡು ಹಾರಿಸಿದೆ. ಗುಂಡೇಟಿನಿಂದ ನುಸುಳುತ್ತಿದ್ದ ವ್ಯಕ್ತಿಗೆ ಗಾಯಗಳಾಗಿವೆ […]

ಭಾರತ-ಪಾಕ್ ಗಡಿಭಾಗದಲ್ಲಿ ಯೋಧರ ಸಿಹಿ-ಶುಭಾಷಯ ವಿನಿಮಯ

ನವದೆಹಲಿ,ಆ.14-75ನೇ ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ಭಾರತ ಮತ್ತು ಪಾಕಿಸ್ತಾನದ ಗಡಿಭಾಗದಲ್ಲಿ ಎರಡು ದೇಶಗಳ ಯೋಧರು ಪರಸ್ಪರ ಸಿಹಿ ಹಂಚುವ ಮೂಲಕ ಶುಭಾಷಯ ವಿನಿಮಯ ಮಾಡಿಕೊಂಡಿದ್ದಾರೆ.ಪ್ರತಿ ವರ್ಷದಂತೆ ಈ ಬಾರಿಯೂ ಭಾರತದ ಗಡಿಭದ್ರತಾ ಪಡೆ(ಬಿಎಸ್‍ಎಫ್ ) , ಪಾಕಿಸ್ತಾನದ ರೇಂಜರ್ಸ್ ಪಡೆಗಳ ಶಿಸ್ತುಬದ್ದ ಸಮವಸ್ತ್ರದಲ್ಲಿ ಗಡಿಯ ಬಾಗಿಲನ್ನು ತೆರೆದು ಪರಸ್ಪರ ಭೇಟಿಯಾಗಿ ಸಿಹಿ ಹಂಚಿಕೊಂಡಿದ್ದಾರೆ. ನಾಳೆ ಸ್ವಾತಂತ್ರ್ಯ ಸಂಭ್ರಮದ ವೇಳೆ ಎರಡೂ ದೇಶಗಳ ರಕ್ಷಣಾ ಪಡೆಗಳು ಕವಾಯತಿನ ಮೂಲಕ ಗಮನಸೆಳೆಯಲಿವೆ. ಸಾಂಪ್ರದಾಯಿಕವಾದ ಸಂಘರ್ಷದ ನಡುವೆಯೂ ಕೂಡ ಗಡಿಯಲ್ಲಿ ಸೌಹಾರ್ದತೆ […]

ಭಾರತ-ಪಾಕಿಸ್ತಾನ ಗಡಿಯಲ್ಲಿ BSF ಯೋಧ ಆತ್ಮಹತ್ಯೆ

ಜಮ್ಮು, ಜು 25 – ಭಾರತ-ಪಾಕಿಸ್ತಾನ ಅಂತರಾಷ್ಟ್ರೀಯ ಗಡಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸïಎಫï) ಸಬ್ ಇನ್ಸ್‍ಪೆಕ್ಟರ್ ಇಂದು ಮುಂಜಾನೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೇನೆಯ ಕಿರಿಯ ಶ್ರೇಣಿಯ ಸೈನಿಕ ರಾಮ್ದೇವ್ ಸಿಂಗ್ ಮೂಲ ರಾಜಸ್ಥಾನದ ಸಿಕರ್ ಜಿಲ್ಲೆಯವರು ರಾತ್ರಿ ಗಸ್ತು ಮುಗಿಸಿ ಬಮದು ಅವರು ಬೆಳಿಗ್ಗೆ 6.35 ರ ಸುಮಾರಿಗೆ ಅವರ ಕೋಣೆಗೆ ಹೋಗಿ ತಮ್ಮ ಬಂದೂಕಿನಿಂದಲ್ಲೇ ಗುಂಡುಹಾರಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಸಹದೋಗಿಗಳು ಶಬ್ಥ ಕೇಳಿ ಒಳ ಹೋಗಿ ನೋಡಿದ್ದಾಗ ರಕ್ತದ ಮಡುವಿನಲ್ಲಿ ಬಿದ್ದಿರುವುದು […]