Sunday, December 1, 2024
Homeರಾಷ್ಟ್ರೀಯ | Nationalಪಾಕಿಸ್ತಾನದಿಂದ ಬಂದ ಡ್ರೋನ್‌ ಮೇಲೆ ಬಿಎಸ್‌‍ಎಫ್‌ ಯೋಧರಿಂದ ಗುಂಡಿನ ದಾಳಿ

ಪಾಕಿಸ್ತಾನದಿಂದ ಬಂದ ಡ್ರೋನ್‌ ಮೇಲೆ ಬಿಎಸ್‌‍ಎಫ್‌ ಯೋಧರಿಂದ ಗುಂಡಿನ ದಾಳಿ

ಜಮು, ಮೇ 11- ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯ ಬಳಿ ಪಾಕಿಸ್ತಾನದ ಕಡೆಯಿಂದ ಬಂದ ಡ್ರೋನ್‌ಮೇಲೆ ಬಿಎಸ್‌‍ಎಫ್‌ ಯೋಧರು ಗುಂಡಿನ ದಾಳಿ ನಡೆಸಿದ್ದಾರೆ.

ಗಡಿ ಭದ್ರತಾ ಪಡೆ ಪಡೆಗಳು ತಡರಾತ್ರಿ ಪಾಕಿಸ್ತಾನದ ಕಡೆಯಿಂದ ಬರುತ್ತಿದ್ದ ಡ್ರೋನ್‌ನ ಪತ್ತೆ ಹಚ್ಚಿ ನಮ್ಮ ಪ್ರದೇಶ ಬರುವುದಕ್ಕೆ ಮುಂಚೆಯೇ ಗುಂಡು ಹಾರಿಸಿದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಂತರ ಡ್ರೋನ್‌ ಮತ್ತೆ ಪಾಕಿಸ್ತಾನದ ಕಡೆಗೆ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡ್ರೋನ್‌ ಯಾವುದೇ ಶಸಾ್ತ್ರಸ್ತ್ರಗಳು ಅಥವಾ ಮಾದಕ ದ್ರವ್ಯ ಬೀಳಿಸಿದ್ದೆ ಎಂದು ಖಚಿತಪಡಿಸಿಕೊಳ್ಳಲು ಗಡಿ ಔಟ್‌ಪೋಸ್ಟ್‌ ಪ್ರದೇಶವನ್ನು ತಪಾಸನೆ ಮಾಡಲಾಗಿದೆ ಇಂದು ಬೆಳಿಗ್ಗೆ ಕೂಡ ರಾಮಗಢ ವಲಯದ ನಾರಾಯಣಪುರದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಎಂದು ಅವರು ಹೇಳಿದರು.

RELATED ARTICLES

Latest News