Saturday, July 27, 2024
Homeರಾಷ್ಟ್ರೀಯಬಿಹಾರ : ನೀಟ್‌‍-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ 13 ಮಂದಿ ಬಂಧನ

ಬಿಹಾರ : ನೀಟ್‌‍-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ 13 ಮಂದಿ ಬಂಧನ

ಪಾಟ್ನಾ, ಮೇ. 11-ಕಳೆದ ಮೇ 5 ರಂದು ಇಲ್ಲಿ ನಡೆದ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಪರೀಕ್ಷಾರ್ಥಿಗಳು ಮತ್ತು ಅವರ ಕುಟುಂಬ ಸದಸ್ಯರು ಸೇರಿದಂತೆ 13 ಜನರನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ.

ಪ್ರಶ್ನೆ ಪತ್ರಿಕೆ ಸೋರಿಕೆ ಕಾಗದ ಸೋರಿಕೆ ಬೆಳಕಿಗೆ ಬರುತ್ತಿದ್ದಂತೆ ತನಿಖೆಯನ್ನು ಸರ್ಕಾರ ಬಿಹಾರ ಪೊಲೀಸ್‌‍ನ ಆರ್ಥಿಕ ಅಪರಾಧಗಳ ಘಟಕಕ್ಕೆ (ಇಒಯು) ಹಸ್ತಾಂತರಿಸಲಾಗಿದೆ. ತನಿಖೆ ರಮಬಿಸುತ್ತಿದಂತೆ ಇದುವರೆಗೆ ನಾಲ್ವರು ಪರೀಕ್ಷಾರ್ಥಿಗಳು ಮತ್ತು ಅವರ ಕುಟುಂಬ ಸದಸ್ಯರು ಸೇರಿದಂತೆ ಒಟ್ಟು 13 ಜನರನ್ನು ಬಂಧಿಸಲಾಗಿದೆ. ಅಲ್ಲದೆ, ಬಂಧಿತ ಆರೋಪಿಗಳಲ್ಲಿ ಒಬ್ಬರು ಬಿಹಾರದಲ್ಲಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆ.

ಎಲ್ಲಾ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ ಮತ್ತು ಪ್ರಮುಖ ಆರೋಪಿ ವಿಚಾರಣೆ ನಡೆದಿದ್ದು ಈಗಾಗಲೇ ಆರೋಪಿಗಳಿಂದ ದೋಷಾರೋಪಣೆ ದಾಖಲೆಗಳು ಎಲೆಕ್ಟ್ರಾನಿಕ್‌ ಸಾಧನಗಳನ್ನು ವಶಪಡಿಸಿಕೊಳ್ಲಲಾಗಿದೆ.

ಇದುವರೆಗಿನ ತನಿಖೆಯಲ್ಲಿ ತಿಳಿದಿರುವುದೇನೆಂದರೆ ಮೇ 5 ರ ಪರೀಕ್ಷೆಯ ಮೊದಲು ಸುಮಾರು 35 ಆಕಾಂಕ್ಷಿಗಳಿಗೆ ಉತ್ತರ ಒದಗಿಸಲಾಗಿದೆ ಮತ್ತು ಇಂತದ್ದೇ ಪ್ರಶ್ನೆಗೆ ಇದೇ ಉತ್ತರ ಎಂದು ಪಾಠ ಮಾಡಲಾಗಿದೆ. ಘಟನೆ ಕುರಿತಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ

RELATED ARTICLES

Latest News