Monday, May 27, 2024
Homeರಾಷ್ಟ್ರೀಯದೆಹಲಿಯಲ್ಲಿ ಚಂಡಮಾರುತ, ಮಳೆಗೆ ಇಬ್ಬರು ಸಾವು, 23 ಮಂದಿಗೆ ಗಾಯ

ದೆಹಲಿಯಲ್ಲಿ ಚಂಡಮಾರುತ, ಮಳೆಗೆ ಇಬ್ಬರು ಸಾವು, 23 ಮಂದಿಗೆ ಗಾಯ

ನವದೆಹಲಿ, ಮೇ 11- ತಡರಾತ್ರಿ ರಾಷ್ಟ್ರ ರಾಜಧಾನಿಯಲ್ಲಿ ಧೂಳಿನ ಬಿರುಗಾಳಿ ಬೀಸಿದ್ದರಿಂದ ಹಲವು ಪ್ರದೇಶಗಳಲ್ಲಿ ಮರಗಳು, ವಿದ್ಯುತ್‌ ಕಂಬಗಳು ಉರುಳಿಬಿದ್ದು ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 23 ಜನರು ಗಾಯಗೊಂಡಿದ್ದಾರೆ,

ಬಲವಾದ ಗಾಳಿ ಮಳೆಗೆ ಹೋರ್ಡಿಂಗ್‌ಗಳು ಕೂಡು ಕಿತ್ತು ಬಂದಿದ್ದು,ಹಲವು ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಿದೆ. ದೆಹಲಿ ಅಗ್ನಿಶಾಮಕ ಠಾಣೆಗೆ 152 ಕರೆಗಳು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಲವಡೆ ಮನೆಗಳಿಗೂ ಹಾನಿಯಾಗಿದ್ದು ಸಂಚಾರ ವ್ಯತ್ಯಯ ಉಂಟಾಗಿತ್ತು ಪ್ರತಿಕೂಲ ಹವಾಮಾನದ ಕಾರಣ ದೆಹಲಿ ವಿಮಾನ ನಿಲ್ದಾಣದಲ್ಲೂ ಕೂಡ ವಿಮಾನಗಳ ಸೇವೆ ವ್ಯತ್ಯಯವಾಗಿದ್ದು ಹಲವಾರು ವಿಮಾನಗಳನ್ನು ಬೇರೆಡಗೆ ತಿರುಗಿಸಲಾಗಿದೆ ಎಂದು ಹೇಳಿದರು.

ಗೋಡೆ ಕುಸಿತದಲ್ಲಿ ಇಬ್ಬರು ಸಾವನ್ನಪ್ಪಿದರೆ,ಮರ ಬಿದ್ದು ಹಲವರು ಗಾಯಗೊಂಡಿದ್ದಾರೆ. ಶುಕ್ರವಾರ ತಡರಾತ್ರಿ ರಾಷ್ಟ್ರ ರಾಜಧಾನಿಯಲ್ಲಿ ಧೂಳಿನ ಬಿರುಗಾಳಿ ಭಾರಿ ಅವಾಂತರ ಸೃಷ್ಠಿಸಿದೆ.ಇಂದು ಬೆಳಿಗ್ಗೆ ಅಗ್ನಿಶಾಮಕ ಸಿಬ್ಬಂಧಿ ಹಾಗು ತುರ್ತು ಪರಿಹಾರ ತಂಡ ಕಾರ್ಯಾಚರಣೆ ಆರಂಭಿಸಿದೆ.

RELATED ARTICLES

Latest News