ಮೋದಿ ರ‍್ಯಾಲಿ ಮೇಲೆ ಡ್ರೋನ್ ಹಾರಾಟ : ಮೂವರ ಬಂಧನ

ಅಹಮದಾಬಾದ್,ನ.25- ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರ‍್ಯಾಲಿ ನಡೆಸಿದ್ದ ಪ್ರದೇಶದಲ್ಲಿ ಕ್ಯಾಮೆರಾ ಅಳವಡಿಸಿದ ಡ್ರೋನ್ ಹಾರಾಟ ನಡೆಸಿದ ಆರೋಪದ ಮೇಲೆ ಮೂವರನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ. ಮೋದಿ ರ‍್ಯಾಲಿ ನಡೆಸಿದ್ದ ಅಹಮದಾಬಾದ್ ಜಿಲ್ಲೆಯ ಬಾವ್ಲಾ ಗ್ರಾಮದಲ್ಲಿ ಕ್ಯಾಮೆರಾ ಅಳವಡಿಸಿದ ಡ್ರೋನ್ ಹಾರಾಟ ನಡೆಸಿದ ಆರೋಪದ ಮೇಲೆ ಮೂವರನ್ನು ಬಂಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೋದಿ ಭೇಟಿ ಹಿನ್ನೆಲೆಯಲ್ಲಿ ಬಾವ್ಲಾ ಗ್ರಾಮದಲ್ಲಿ ಯಾರು ಡ್ರೋಣ್ ಹಾರಾಟ ನಡೆಸಬಾರದು ಎಂದು ಜಿಲ್ಲಾಧಿಕಾರಿಗಳು ನಿಷೇಧ ವಿದಿಸಿದ್ದರು ಕೆಲವರು ಡ್ರೋನ್ ಹಾರಾಟ […]

ಮತ್ತೆ ಪಾಕ್ ಗಡಿಯಿಂದ ಹಾರಿ ಬಂದ ಡ್ರೋಣ್

ಚಂಡೀಗಢ, ಅ.4- ಪಂಜಾಬ್‍ನ ಗುರುದಾಸ್‍ಪುರ ಸೆಕ್ಟರ್‍ನ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಕಡೆಯಿಂದ ಹಾರಿ ಬಂದ ಡ್ರೋಣ್ ಮೇಲೆ ಬಿಎಸ್‍ಎಫ್ ಯೋಧರು ಗುಂಡಿನ ದಾಳಿ ನಡೆಸಿದ್ದಾರೆ. ಗಡಿ ಭದ್ರತಾ ಪಡೆ (ಬಿಎಸ್‍ಎಫ್) ಪಡೆಗಳು ಗಡಿಭಾಗದಲ್ಲಿ ಝೇಂಕರಿಸುವ ಶಬ್ದವನ್ನು ಕೇಳಿ, ಗಮನಿಸಿದಾಗ ಹಾರುತ್ತಿರುವ ವಸ್ತು ಕಂಡು ಬಂದಿದೆ. ತಕ್ಷಣವೇ ಎಚ್ಚೆತ್ತುಕೊಂಡು ಗುಂಡು ಹಾರಿಸಿದ್ದಾರೆ. ದ್ರೋಣ್‍ನಿಂದ ಭಾರತೀಯ ಭೂಪ್ರದೇಶದಲ್ಲಿ ಯಾವುದಾದರೂ ವಸ್ತುಗಳನ್ನು ಚೆಲ್ಲಲಾಗಿದೆಯೇ ಎಂದು ಪರಿಶೀಲಿಸಲಾಗುತ್ತಿದೆ. ಅಧಿಕಾರಿಗಳು ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

ಡ್ರೋನ್ ಮೂಲಕ ಶಸ್ತ್ರಾಸ್ತ್ರ ಸಾಗಿಸುತ್ತಿದ್ದ ಭಯೋತ್ಪಾದಕ ಎನ್‌ಕೌಂಟರ್‌ನಲ್ಲಿ ಫಿನಿಷ್

ಜಮ್ಮು, ಆ. 18 -ಪಾಕಿಸ್ತಾನದಿಂದ ಡ್ರೋನ್ ಮೂಲಕ ಭಾರತದ ಗಡಿಯೊಳಗೆ ಭಯೋತ್ಪಾದಕರಿಗೆ ಮದ್ದುಗುಂಡುಗಳ ರವಾನೆ ಮಾಡುತ್ತಿದ್ದ ಘಟನೆ ಜಮ್ಮುನಲ್ಲಿ ನಡೆದಿದ್ದು ಭದ್ರತಾ ಪಡೆಗಳು ಸ್ಪೋಟಕ ವಶಪಡಿಸಿಕೊಂಡು ನಂತರ ನಡೆದ ಎನ್ಕೌಂಟರ್‍ನಲ್ಲಿ ಭಯೋತ್ಪಾದಕನೊಬ್ಬನನ್ನು ಸದೆಬಡಿದಿದ್ದಾರೆ. ಜೈಲಿನಲ್ಲಿರುವ ಎಲ್​ಇಟಿ ಭಯೋತ್ಪಾದಕ ಬಾಯಿ ಬಟ್ಟ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆಗೆ ಇಳಿದ ಭಧ್ರತಾ ಪಡೆಗಳು ಗಡಿ ತಲುಪಿ ಡ್ರೋನ್ ಹೊಡೆದುರುಳಿಸಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸರಕು ಪತ್ತೆಯಾದ ಸ್ಥಳದಲ್ಲಿ ಅದನ್ನು ತಗೆದುಕೊಂಡು ಹೊಗಲು ಬಂದಿದ್ದ ಭಯೋತ್ಪಾದಕ ಮೊಹಮ್ಮದ್ ಅಲಿ […]

ಡ್ರೋಣ್ ಮೂಲಕ ಆರೋಗ್ಯ ಸೇವೆ ಪೂರೈಕೆಗೆ ಅರುಣಾಚಲ ಪ್ರದೇಶದಲ್ಲಿ ಪ್ರಯೋಗ ಆರಂಭ

ನವದೆಹಲಿ, ಆ.15- ಗುಡ್ಡಗಾಡು ಮತ್ತು ಗ್ರಾಮೀಣ ಭಾಗಕ್ಕೆ ಡ್ರೋಣ್‍ಗಳ ಮೂಲಕ ಆರೋಗ್ಯ ಸೇವೆಗಳನ್ನು ತಲುಪಿಸುವ ಪ್ರಾಯೋಗಿಕ ಪರೀಕ್ಷಾ ಹಾರಾಟವನ್ನು ಅರುಣಾಚಲ ಪ್ರದೇಶದಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ದಿನದಂದು ಆರಂಭಿಸಲಾಗಿದೆ. 76ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಪಶ್ಚಿಮ ಕಮೆಂಗ್ ಜಿಲ್ಲೆಯ ಸೆಪ್ಪಾ ನಗರದಲ್ಲಿ ಈ ಸೇವೆಯನ್ನು ರೆಡ್‍ವಿಂಗ್ ಎಂಬ ನವೋದ್ಯಮ ಲೋಕಾರ್ಪಣೆ ಮಾಡಿದೆ. ಹೈಬ್ರೀಡ್ ಮಾದರಿಯಲ್ಲಿ ಡ್ರೋಣ್‍ಗಳು ಲಂಬಾಕಾರದಲ್ಲಿ ಮೇಲೇರುವುದು ಮತ್ತು ಇಳಿಯುವ ವ್ಯವಸ್ಥೆಯನ್ನು ಕಲ್ಲಿಸಲಾಗಿದೆ. ರಾಜ್ಯ ಸರ್ಕಾರದ ವಿಶ್ವ ಆರ್ಥಿಕ ವೇದಿಕೆಯ ಸಹಯೋಗದಲ್ಲಿ ಈ ಸೇವೆಯನ್ನು ಒದಗಿಸಲಾಗುತ್ತಿದೆ. […]

ಕೋಲ್ಕತ್ತಾದಲ್ಲಿ ಡ್ರೋನ್ ಬಳಸಿದ ಇಬ್ಬರು ಬಾಂಗ್ಲಾದೇಶೀಯರ ಬಂಧನ

ಕೋಲ್ಕತ್ತಾ, ಆಗಸ್ಟï 12 – ಡ್ರೋನ್ ಮೂಲಕ ಇಲ್ಲಿನ ವಿಕ್ಟೋರಿಯಾ ಸ್ಮಾರಕ ಭವನ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಛಾಯಾಚಿತ್ರಗಳನ್ನು ಸೆರೆಹಿಡಿದ ಆರೋಪದ ಮೇಲೆ ಇಬ್ಬರು ಬಾಂಗ್ಲಾದೇಶೀಯರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮ್ಯೂಸಿಯಂನ ಭದ್ರತೆಯಲ್ಲಿದ್ದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ ಹೇಸ್ಟಿಂಗ್ಸ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಕಾರ್ಯಾಚರಣೆ ಕೈಗೊಂಡು ಬಾಂಗ್ಲಾದೇಶದ ಇಬ್ಬರನ್ನು ವಿಕ್ಟೋರಿಯಾ ಮೆಮೋರಿಯಲ್ ಹಾಲ್ ಕಾಂಪೌಂಡ್‍ನಲ್ಲಿ ಬಂಧಿಲಾಗಿದೆ. ಆರಂಭಿಕ ತನಿಖೆಯಲ್ಲಿ ಇಬ್ಬರು ಬಾಂಗ್ಲಾದೇಶಿಗಳು ಮಾನವರಹಿತ ವೈಮಾನಿಕ ವಾಹನ ಡ್ರೋನ್ ಬಳಸಿ […]

ಧಾರವಾಡದಲ್ಲಿ ಡ್ರೋಣ್ ಪ್ರಯೋಗಾಲಯ ಸ್ಥಾಪನೆ

ಬೆಂಗಳೂರು,ಜು.26- ಐಐಟಿ ಧಾರವಾಡದ ಕ್ಯಾಂಪಸ್‍ನಲ್ಲಿ ಅತ್ಯಾಧುನಿಕ ಡ್ರೋಣ್ ಪ್ರಯೋಗಾಲಯ ಸ್ಥಾಪಿಸುವ ಯೋಜನೆ ರೂಪಿಸುತ್ತಿದೆ. ಮಾನವರಹಿತ ವೈಮಾನಿಕ ವಾಹನ ತಂತ್ರಜ್ಞಾನ ಅಭಿವೃದ್ಧಿ ಅಧ್ಯಯನಕ್ಕಾಗಿ ಈ ಪ್ರಯೋಗಾಲಯ ಕಾರ್ಯ ನಿರ್ವಹಿಸಲಿದೆ. ಕೆಪಿಟಿಸಿಎಲ್ ಸಂಸ್ಥೆಗೆ ಅನುದಾನ ನೀಡಿದ್ದು, ಐಐಟಿ ಕ್ಯಾಂಪಸ್ ನಲ್ಲಿ ಪ್ರಯೋಗಾಲಯ ಸ್ಥಾಪನೆಗೆ ಈ ಅನುದಾನ ಬಳಕೆಯಾಗುತ್ತಿದೆ. ಡ್ರೋಣ್ ತಂತ್ರಜ್ಞಾನ ಅಧ್ಯಯನಕ್ಕೆ ಹಾಗೂ ಅದನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವುದಕ್ಕೆ ಈ ಪ್ರಯೋಗಾಲಯ ಸಹಕಾರಿಯಾಗಲಿದೆ. ಡ್ರೋಣ್ ತಂತ್ರಜ್ಞಾನವನ್ನು ಕೃಷಿ ಚಟುವಟಿಕೆಗಳಿಗೆ, ಸರಕುಗಳನ್ನು ಮನೆ ಬಾಗಿಲಿಗೆ ತಲುಪಿಸುವುದಕ್ಕಾಗಿಯೂ ಬಳಕೆ ಮಾಡಬಹುದಾಗಿದ್ದು, ಡ್ರೋನ್ ನ್ನು […]