Sunday, December 1, 2024
Homeಅಂತಾರಾಷ್ಟ್ರೀಯ | Internationalಭಾರತಕ್ಕೆ ಬರಲಿವೆ ಅಮೆರಿಕದ ಎಂಕ್ಯು-9ಬಿ ಪ್ರಿಡೇಟರ್‌ ಡ್ರೋನ್‌ಗಳು

ಭಾರತಕ್ಕೆ ಬರಲಿವೆ ಅಮೆರಿಕದ ಎಂಕ್ಯು-9ಬಿ ಪ್ರಿಡೇಟರ್‌ ಡ್ರೋನ್‌ಗಳು

ನವದೆಹಲಿ, ಅ.16- ಅಮೆರಿಕದ ಶಕ್ತಿಶಾಲಿ ಎಂಕ್ಯು-9ಬಿ ಪ್ರಿಡೇಟರ್‌ ಡ್ರೋನ್‌ಗಳನ್ನು ಖರೀದಿಸಲು ಭಾರತ ನಿರ್ಧರಿಸಿದೆ. 31 ಪ್ರಿಡೇಟರ್‌ ಡ್ರೋನ್‌‍ಗಳಿಗೆ ಭಾರತ ಮನವಿ ಸಲ್ಲಿಸಿದೆ. ಭಾರತ ಮತ್ತು ಅಮೆರಿಕ ನಡುವೆ ಈ ಒಪ್ಪಂದ ಅಂತಿಮಗೊಂಡಿದ್ದು ಶೀಘ್ರದಲ್ಲೇ ಭಾರತೀಯ ಸೇನೆಗೆ ಡ್ರೋನ್‌ಗಳು ಸೇರ್ಪಡೆಯಾಗಲಿವೆ ಎಂದು ವರದಿಯಾಗಿದೆ.

ಅಮೆರಿಕದ ಜನರಲ್‌ ಅಟಾಮಿಕ್‌್ಸ ಸಂಸ್ಥೆ ಈ ಮಾರಕ ಡ್ರೋನ್‌ಗಳನ್ನು ತಯಾರಿಸಲಿದೆ. ಭಾರತದಲ್ಲಿ ಈ ಡ್ರೋನ್‌ಗಳಿಗಾಗಿ ಎಂಆರ್‌ಒ ಕೇಂದ್ರವನ್ನು ನಿರ್ಮಿಸಲಾಗತ್ತ್ತಿದೆ.ಇದಕ್ಕಾಗಿ 32,000 ಕೋಟಿ ರೂ ಮೊತ್ತದ ಒಪ್ಪಂದವಾಗಿದೆ ಎಂದು ತಿಳಿದುಬಂದಿದೆ. ಜನರಲ್‌ ಅಟಾಮಿಕ್‌್ಸ ಸಂಸ್ಥೆ ಈ ಡ್ರೋನ್‌ಗಳನ್ನು ತಯಾರಿಸುವುದಷ್ಟೇ ಅಲ್ಲದೇ, ಚೆನ್ನೈನಲ್ಲಿ ಎಂಆರ್‌ಒ ಕೇಂದ್ರದ ಸ್ಥಾಪನೆಗೂ ನೆರವಾಗಲಿದೆ. ಇದೇ ವೇಳೆ, ಈ ಡ್ರೋನ್‌ ತಂತ್ರಜ್ಞಾನದ ವರ್ಗಾವಣೆಯೂ ಆಗಬೇಕೆಂದು ಭಾರತ ಕೇಳಿಕೊಂಡಿದೆ. ಈ ಸಂಬಂಧ ಮಾತುಕತೆ ನಡೆಯುತ್ತಿದ್ದು, ಅದರ ಒಪ್ಪಂದವೂ ಆಗುವ ಸಾಧ್ಯತೆ ಇದೆ.

ಜನರಲ್‌ ಅಟಾಮಿಕ್‌್ಸ ಸಂಸ್ಥೆ ಎಂಕ್ಯೂ ಮಾದರಿಯ ಡ್ರೋನ್‌ ಬಹಳ ಶಕ್ತಿಶಾಲಿಯಾಗಿದೆ. ಭಾರತಕ್ಕೆ ಸಿಗಲಿರುವ ಎಂಕ್ಯೂ-9ಬಿ ಪ್ರಿಡೇಟರ್‌ ಡ್ರೋನ್‌ ಈ ರೀಪರ್‌ ಡ್ರೋನ್‌‍ನ ವೇರಿಯೆಂಟ್‌ ಆಗಿದೆ. 2022ರ ಜುಲೈನಲ್ಲಿ ಅಫ್ಘಾನಿಸ್ತಾನದ ಕಾಬೂಲ್‌‍ನಲ್ಲಿ ಅಲ್‌‍-ಖೈದಾ ನಾಯಕ ಆಯನ್‌ ಅಲ್‌ ಜವಾಹಿರಿ ಎಂಬಾತನನ್ನು ಕೊಲ್ಲಲು ಈ ಡ್ರೋನ್‌ ಅನ್ನು ಬಳಸಲಾಗಿತ್ತು.

ಎಂಕ್ಯೂ-9ಬಿ ಪ್ರಿಡೇಟರ್‌ ಡ್ರೋನ್‌ಗಳಲ್ಲಿ ಎರಡು ವೇರಿಯೆಂಟ್‌‍ಗಳಿಗೆ ಭಾರತ ಆರ್ಡರ್‌ ಕೊಟ್ಟಿದೆ. ಸೀಗಾರ್ಡಿಯನ್‌ ವೇರಿಯೆಂಟ್‌ನ 15 ಪ್ರಿಡೇಟರ್‌ ಡ್ರೋನ್‌‍ಗಳು ಭಾರತೀಯ ನೌಕಾಪಡೆಗೆ ನಿಯೋಜನೆಯಾಗಲಿವೆ. ಎಂಟೆಂಟು ಸ್ಕೈಗಾರ್ಡಿಯನ್‌ ಡ್ರೋನ್‌‍ಗಳು ಭಾರತೀಯ ಸೇನೆ ಮತ್ತು ವಾಯುಪಡೆಗೆ ಹೋಗಲಿವೆ.

ಎಂಕ್ಯು-9ಬಿ ಪ್ರಿಡೇಟರ್‌ ಡ್ರೋನ್‌ಗಳು ಬಹಳ ಎತ್ತರದಲ್ಲಿ, ಹೆಚ್ಚ ಅವಧಿ ಓಡಬಲ್ಲ ಶಕ್ತಿ ಹೊಂದಿರುತ್ತವೆ. 2,155 ಕಿಲೋ ಪೇಲೋಡ್‌ ಅಥವಾ ಬಾಹ್ಯವಸ್ತುಗಳ ತೂಕ ಹೊತ್ತು ಇದು 40,000 ಅಡಿ ಎತ್ತರದಲ್ಲಿ 40 ಗಂಟೆ ಕಾಲ ನಿರಂತರವಾಗಿ ಹಾರಬಲ್ಲದು. ಈ ಡ್ರೋನ್‌‍ನಲ್ಲಿ ನಾಲ್ಕು ಹೆಲ್‌‍ಫೈರ್‌ ಕ್ಷಿಪಣಿಗಳು ಮತ್ತು 450 ಕಿಲೋ ಬಾಂಬ್‌‍ಗಳನ್ನು ಇರಿಸಬಹುದಾಗಿದೆ.

RELATED ARTICLES

Latest News