ಬೆಂಗಳೂರು,ಮೇ.29- ಗ್ರೀನ್ ಬೆಂಗಳೂರು ಹಾಗೂ ಸ್ವಚ್ಚ ನಗರಿ ಕನಸು ಸಾಕಾರಕ್ಕೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಲು ಬಿಬಿಎಂಪಿ ತೀರ್ಮಾನಿಸಿದೆ.ಹೀಗಾಗಿ ಇನುಂದೆ ಬೆಂಗಳೂರಿನ ಸಮಸ್ಯೆಗಳನ್ನ ಕೃತಕ ಬುದ್ಧಿಮತ್ತೆ ಮಾನಿಟರ್ ಮಾಡುವುದರಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.
ಬೆಂಗಳೂರಿನ ರಸ್ತೆಗುಂಡಿ,ಕಸ, ಫುಟ್ ಪಾತ್ ಸಮಸ್ಯೆಗಳ ಪತ್ತೆಗೆ ಎಐ ಕ್ಯಾಮೆರಾ ಅಳವಡಿಸಿರೋ ವಾಹನ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಿರುವ ಎಐ ಆಧಾರಿತ ಕ್ಯಾಮೆರಾಗಳನ್ನು ಹೊಂದಿರುವ ವಾಹನಗಳು ನಗರದ ಸಮಸ್ಯೆಗಳನ್ನ ಪತ್ತೆಹಚ್ಚಿ ರಿಪೊರ್ಟ್ ನೀಡಲಿದೆ.
ಎಐ ಆಧಾರಿತ ವಾಹನಗಳು ರಸ್ತೆಗುಂಡಿ, ಕಸ ವಿಲೇವಾರಿ ಸೇರಿ ಹಲವು ಸಮಸ್ಯೆಗಳ ಮಾನಿಟರ್ ಮಾಡಲಿವೆ. ಜೊತೆಗೆ ರಸ್ತೆಯಲ್ಲಿ ಏನಾದ್ರೂ ಸಮಸ್ಯೆ ಕಂಡು ಬಂದರೆ ಆಯಾ ವಲಯದ ಇಂಜಿನಿಯರ್ ಗೆ ಮೆಸೇಜ್ ಕಳುಹಿಸಲಿದೆ.ಮೆಸೆಜ್ ಬಂದ ತಕ್ಷಣ ಅಧಿಕಾರಿಗಳು ಸಮಸ್ಯೆ ಇರುವ ಸ್ಥಳಕ್ಕೆ ದೌಡಾಯಿಸಿ ಸಮಸ್ಯೆ ಬಗೆಹರಿಸಲಿದ್ದಾರೆ.
ಸದ್ಯ ಪಾಲಿಕೆ ವ್ಯಾಪ್ತಿಯಲ್ಲಿ 15 ಕ್ಯಾಮರಾ ಫಿಟೆಡ್ ವಾಹನ ಸಂಚಾರಕ್ಕೆ ಪ್ಲಾನ್ ಮಾಡಲಾಗಿದ್ದು, ಈ ವಾಹನಗಳು ವಾರಕ್ಕೆ 1,400 ಕಿ.ಮೀ ದೂರ ಸಂಚರಿಸಿ ವರದಿ ನೀಡಲಿವೆ, ಇದರಿಂದ ಏರಿಯಾಗಳ ಸಮಸ್ಯೆಗಳ ಶೀಘ್ರಪರಿಹಾರ ಸಾಧ್ಯ ಎಂದು ನಂಬಲಾಗಿದೆ.