ವಿಶ್ವಸಂಸ್ಥೆ, ಮೇ 31 (ಪಿಟಿಐ) ಭಾರತದ ಮೇಜರ್ ರಾಧಿಕಾ ಸೇನ್ ಅವರು ನಿಜವಾದ ನಾಯಕಿ ಮತ್ತು ಮಾದರಿ ಅವರ ಸೇವೆ ಒಟ್ಟಾರೆಯಾಗಿ ವಿಶ್ವಸಂಸ್ಥೆಗೆ ನಿಜವಾದ ಶ್ರೇಯವಾಗಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರು ಅಭಿಪ್ರಾಯಪಟ್ಟಿದ್ದಾರೆ.
ರಾಧಿಕಾ ಸೇನ್ ಅವರಿಗೆ ಲಿಂಗ ಸಮರ್ಥನೆಗಾಗಿ ನೀಡುವ ಅಡ್ವೋಕೇಟ್ ಆಫ್ ದಿ ಇಯರ್ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಿ ಮಾತನಾಡಿದರು.ಕಾಂಗೋ ಪ್ರಜಾಸತ್ತಾತಕ ಗಣರಾಜ್ಯದಲ್ಲಿ ವಿಶ್ವಸಂಸ್ಥೆಯ ಸ್ಥಿರೀಕರಣ ಮಿಷನ್‌ನಲ್ಲಿ ಸೇವೆ ಸಲ್ಲಿಸಿದ ಮೇಜರ್ ಸೇನ್ ಅವರು ವಿಶ್ವ ಸಂಸ್ಥೆಯ ಪ್ರಧಾನ ಕಛೇರಿಯಲ್ಲಿ ನಡೆದ ಸಮಾರಂಭದಲ್ಲಿ ಗುಟೆರಸ್ ಅವರಿಂದ ಪ್ರತಿಷ್ಠಿತ ವಿಶ್ವಸಂಸ್ಥೆಯ ಮಿಲಿಟರಿ ಲಿಂಗ ಅಡ್ವೊಕೇಟ್ ಆಫ್ ದಿ ಇಯರ್ ಪ್ರಶಸ್ತಿ ಪಡೆದರು.
ಮೇಜರ್ ಸೇನ್ ನಿಜವಾದ ನಾಯಕಿ ಮತ್ತು ಮಾದರಿ. ಒಟ್ಟಾರೆ ವಿಶ್ವಸಂಸ್ಥೆಗೆ ಆಕೆಯ ಸೇವೆ ನಿಜವಾದ ಶ್ರೇಯಸ್ಸು. ಭಾರತದ ಮೇಜರ್ ರಾಧಿಕಾ ಸೇನ್ ಅವರನ್ನು ಅಭಿನಂದಿಸಲು ದಯವಿಟ್ಟು ನನ್ನೊಂದಿಗೆ ಸೇರಿಕೊಳ್ಳಿ ಎಂದು ಗುಟೆರಸ್ ಕರೆ ನೀಡಿದರು.
ಮೇಜರ್ ಸೇನ್ ಅವರು ಮಾರ್ಚ್ 2023 ರಿಂದ ಏಪ್ರಿಲ್ 2024 ರವರೆಗೆ ಕಾಂಗೋ ಪ್ರಜಾಸತ್ತಾತಕ ಗಣರಾಜ್ಯದ ಪೂರ್ವದಲ್ಲಿ ಭಾರತೀಯ ರಾಪಿಡ್ ಡಿಪ್ರೋಯೆಂಟ್ ಬೆಟಾಲಿಯನ್‌ನಲ್ಲಿ ಎಂಗೇಜ್‌ಮೆಂಟ್ ಪ್ಲಟೂನ್‌ನ ಕಮಾಂಡರ್ ಆಗಿ ಸೇವೆ ಸಲ್ಲಿಸಿದರು.
ಉತ್ತರ ಕಿವುವಿನಲ್ಲಿ ಹೆಚ್ಚುತ್ತಿರುವ ಸಂಘರ್ಷದ ವಾತಾವರಣದಲ್ಲಿ, ಅವರ ಪಡೆಗಳು ವಿಶೇಷವಾಗಿ ಮಹಿಳೆಯರು ಮತ್ತು ಹುಡುಗಿಯರು ಸೇರಿದಂತೆ ಸಂಘರ್ಷ-ಪೀಡಿತ ಸಮುದಾಯಗಳೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿವೆ ಎಂದು ಅವರು ಹೇಳಿದರು. ಮಹಿಳೆಯರು ತಮ ಆಲೋಚನೆಗಳು ಮತ್ತು ಕಾಳಜಿಗಳನ್ನು ಹಂಚಿಕೊಳ್ಳಲು ಮೇಜರ್ ಸೇನ್ ಸುರಕ್ಷಿತ ಮತ್ತು ಸ್ವಾಗತಾರ್ಹ ವೇದಿಕೆಯನ್ನು ಒದಗಿಸಿದ್ದಾರೆ ಎಂದು ಯುಎನ್ ಮುಖ್ಯಸ್ಥರು ಹೇಳಿದರು.