Sunday, December 1, 2024
Homeಅಂತಾರಾಷ್ಟ್ರೀಯ | Internationalಅಮೇರಿಕಾದಲ್ಲಿ ಗುಂಡಿನ ದಾಳಿ : ಶಂಕಿತ ಬಂದೂಕುಧಾರಿ ಸೇರಿದಂತೆ ಮೂವರ ಸಾವು

ಅಮೇರಿಕಾದಲ್ಲಿ ಗುಂಡಿನ ದಾಳಿ : ಶಂಕಿತ ಬಂದೂಕುಧಾರಿ ಸೇರಿದಂತೆ ಮೂವರ ಸಾವು

ಮಿನ್ನಿಯಾಪೋಲಿಸ್‌‍, ಮೇ 31- ಅಮೇರಿಕದ ಮಿನ್ನಿಯಾಪೋಲಿಸ್‌‍ನಲ್ಲಿ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಶಂಕಿತ ಬಂದೂಕುಧಾರಿ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದಕ್ಷಿಣ ಮಿನ್ನಿಯಾಪೋಲಿಸ್‌‍ನ ವಿಟ್ಟಿಯರ್‌ನಲ್ಲಿ ಈ ಗುಂಡಿನ ದಾಳಿ ನೆದಿದ್ದು ಘಟನೆಯಲ್ಲಿ ಇಬ್ಬರು ಪೊಲೀಸ್‌‍ ಅಧಿಕಾರಿಗಳು ನಾಲ್ವರು ನಾಗರಿಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇತರ ಯಾವುದೇ ವಿವರಗಳನ್ನುಬಿಡುಗಡೆ ಮಾಡಲ್ಲ .ಆದರೆ ಮಾದಕ ವ್ಯಸನಿ ಗುಂಡಿನ ದಾಳಿ ನಡೆಸಿದ್ದು ಇದಕ್ಕೆ ಪ್ರತಿಯಾಗಿ ಪೊಲೀಸರು ಆತನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಪ್ರದೇಶದಲ್ಲಿ ಮಾದಕ ವಸ್ತು ಜಾಲ ಹರಡಿದ್ದು ಇದನ್ನು ಮಟ್ಟ ಹಾಕಲು ವಿಶೇಷ ಪೊಲೀಸ್‌‍ ತಂಡ ವ್ಯಪಕ ಕಾರ್ಯಾಚರಣೆ ಕೈಗೊಂಡಿದ್ದಾರೆ.ಪ್ರಸ್ತುತ ತನಿಖೆ ನಡೆದಿದೆ ಎಂದು ಸ್ಥಳೀಯ ಕ್ಷೇತ್ರ ವಿಭಾಗದ ವಕ್ತಾರ ಆಶ್ಲೀ ಶೆರಿಲ್‌ ಹೇಳಿದರು.

RELATED ARTICLES

Latest News