Sunday, November 24, 2024
Homeರಾಷ್ಟ್ರೀಯ | Nationalಮಹಿಳೆ ಮನೆಗೆ ಎಸ್‌‍ಪಿ ಎಂಎಲ್‌ಎ ಬೆಂಕಿ ಹಚ್ಚಿದ್ದ ಆರೋಪ ಸಾಬೀತು

ಮಹಿಳೆ ಮನೆಗೆ ಎಸ್‌‍ಪಿ ಎಂಎಲ್‌ಎ ಬೆಂಕಿ ಹಚ್ಚಿದ್ದ ಆರೋಪ ಸಾಬೀತು

ಕಾನ್ಪುರ,ಜೂ. 4- (ಪಿಟಿಐ) ಸುಮಾರು 19 ತಿಂಗಳ ಹಿಂದೆ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿ ಆಕೆಯ ಮನೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಜೈಲು ಪಾಲಾಗಿರುವ ಸಮಾಜವಾದಿ ಪಕ್ಷದ ಶಾಸಕ ಇರ್ಫಾನ್‌ ಸೋಲಂಕಿ ಮತ್ತು ಇತರ ನಾಲ್ವರನ್ನು ಅಪರಾಧಿಗಳು ಎಂದು ಕಾನ್ಪುರದ ಜನಪ್ರತಿನಿಧಿ ನ್ಯಾಯಾಲಯ ತೀರ್ಪು ನೀಡಿದೆ.

ನ್ಯಾಯಾಧೀಶ ಸತ್ಯೇಂದ್ರ ನಾಥ್‌ ತ್ರಿಪಾಠಿ ಈ ತೀರ್ಪು ನೀಡಿದ್ದು ಶಿಕ್ಷೆಯ ಪ್ರಮಾಣವನ್ನು ಶುಕ್ರವಾರ ಪ್ರಕಟಿಸಲಿದ್ದಾರೆ.ಎಸ್‌‍ಪಿ ಶಾಸಕ ಇರ್ಫಾನ್‌ ಸೋಲಂಕಿ, ಅವರ ಸಹೋದರ ರಿಜ್ವಾನ್‌ ಸೋಲಂಕಿ, ಬಿಲ್ಡರ್‌ ಶೌಕತ್‌ ಅಲಿ, ಮೊಹಮದ್‌ ಷರೀಫ್‌ ಮತ್ತು ಸುದೀರ್ಘ ಕ್ರಿಮಿನಲ್‌ ಇತಿಹಾಸ ಹೊಂದಿರುವ ಇಜ್ರೇಲ್‌ ಅಲಿಯಾಸ್‌‍ ಆಟೆ ವಾಲಾ ಅವರುಗಳು ನಜೀರ್‌ ಫಾತಿಮಾ ಅವರ ಮನೆಗೆ ಬೆಂಕಿ ಹಚ್ಚಿದ ಆರೋಪದಲ್ಲಿ ಶಿಕ್ಷೆಗೊಳಗಾದವರು ಎಂದು ಪೊಲೀಸ್‌‍ ಕಮಿಷನರ್‌ ಅಖಿಲ್‌ ಕುಮಾರ್‌ ಪಿಟಿಐಗೆ ತಿಳಿಸಿದ್ದಾರೆ.

ಆಪಾದಿತ ಘಟನೆಯು 2022 ರ ನವೆಂಬರ್‌ 7 ರಂದು ಸಂಭವಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇರ್ಫಾನ್‌ ಸೋಲಂಕಿ ಮತ್ತು ರಿಜ್ವಾನ್‌ ಕಳೆದ ವರ್ಷ ಡಿಸೆಂಬರ್‌ 2 ರಿಂದ ಜೈಲಿನಲ್ಲಿದ್ದಾರೆ ಎಂದು ಅವರು ಹೇಳಿದರು.ಗಲಭೆ ಮತ್ತು ಬೆಂಕಿ ಹಚ್ಚಿದ ಆರೋಪದಡಿ ಪೊಲೀಸ್‌‍ ಕಮಿಷನರ್‌ ಮುಂದೆ ಶರಣಾಗಿದ್ದರು. ನಾಲ್ಕು ಬಾರಿ ಶಾಸಕರಾಗಿರುವ ಸೋಲಂಕಿ ಪ್ರಸ್ತುತ ಮಹಾರಾಜ್‌ಗಂಜ್‌ ಜೈಲಿನಲ್ಲಿದ್ದಾರೆ.

RELATED ARTICLES

Latest News