ನವದೆಹಲಿ, ಜೂ. 6 (ಪಿಟಿಐ) ಉತ್ತರ ಪ್ರದೇಶದ ಜನತೆಗೆ ಅಭಿನಂದನೆ ಸಲ್ಲಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇಡೀ ದೇಶಕ್ಕೆ ಸಂವಿಧಾನವನ್ನು ಉಳಿಸುವ ಘನ ಸಂದೇಶವನ್ನು ನೀಡಿದ್ದಾರೆ ಮತ್ತು ಸಾರ್ವಜನಿಕ ಸಮಸ್ಯೆಗಳು ಮುಖ್ಯ ಎಂಬ ಹಳೆಯ ಆದರ್ಶವನ್ನು ಮರುಸ್ಥಾಪಿಸಿದ್ದಾರೆ ಎಂದು ಹೇಳಿದ್ದಾರೆ.
ಎಕ್‌್ಸನಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಯುಪಿ ಕಾಂಗ್ರೆಸ್‌ನ ನನ್ನ ಎಲ್ಲಾ ಸಹೋದ್ಯೋಗಿಗಳಿಗೆ ನನ್ನ ನಮಸ್ಕಾರಗಳು. ನೀವು ಬಿಸಿಲು ಮತ್ತು ಧೂಳಿನಲ್ಲಿ ಕಷ್ಟಪಟ್ಟು ಕೆಲಸ ಮಾಡುವುದನ್ನು ನಾನು ನೋಡಿದೆ, ನೀವು ತಲೆಬಾಗಲಿಲ್ಲ ನೀವು ಕಷ್ಟದ ಸಮಯದಲ್ಲಿ ಹೋರಾಡುವ ಧೈರ್ಯವನ್ನು ತೋರಿಸಿದ್ದೀರಿ ಎಂದು ಶ್ಲಾಘಿಸಿದ್ದಾರೆ.
ನಿಮ್ಮ ಮೇಲೆ ದೌರ್ಜನ್ಯಗಳು ನಡೆದಿವೆ, ನಿಮ್ಮ ವಿರುದ್ಧ ನಕಲಿ ಪ್ರಕರಣಗಳನ್ನು ದಾಖಲಿಸಲಾಗಿದೆ, ಜೈಲಿಗೆ ಹಾಕಲಾಗಿದೆ, ಪದೇ ಪದೇ ಗೃಹಬಂಧನದಲ್ಲಿ ಇರಿಸಲಾಗಿದೆ ಆದರೆ ನೀವು ಹೆದರಲಿಲ್ಲ, ಅನೇಕ ನಾಯಕರು ಭಯದಿಂದ ಹೊರಟುಹೋದರು, ನೀವು ದಢವಾಗಿ ನಿಂತಿದ್ದೀರಿ ಎಂದು ಅವರು ಹೇಳಿದರು.
ಈ ದೇಶದ ಆಳ ಮತ್ತು ಸತ್ಯವನ್ನು ಅರ್ಥಮಾಡಿಕೊಂಡು ಇಡೀ ಭಾರತಕ್ಕೆ ಸಂವಿಧಾನವನ್ನು ಉಳಿಸುವ ಘನ ಸಂದೇಶವನ್ನು ನೀಡಿದ ಉತ್ತರ ಪ್ರದೇಶದ ಜಾಗರೂಕ ಜನರ ಬಗ್ಗೆ ನನಗೆ ಹೆಮೆಯಿದೆ ಎಂದು ಗಾಂಧಿ ಹೇಳಿದರು. ನೀವು ಇಂದಿನ ರಾಜಕೀಯದಲ್ಲಿ ಹಳೆಯ ಆದರ್ಶವನ್ನು ಮರುಸ್ಥಾಪಿಸಿದ್ದೀರಿ – ಜನರ ಸಮಸ್ಯೆಗಳು ಮುಖ್ಯ, ಅವುಗಳನ್ನು ನಿರ್ಲಕ್ಷಿಸುವವರಿಗೆ ತಕ್ಕಪಾಠ ಕಲಸಿದ್ದಿರಿ ಎಂದಿದ್ದಾರೆ.ಚುನಾವಣೆಯು ಜನರದ್ದು, ಜನರು ಅದರ ವಿರುದ್ಧ ಹೋರಾಡುತ್ತಾರೆ ಮತ್ತು ಜನರು ಗೆಲ್ಲುತ್ತಾರೆ ಎಂದು ಗಾಂಧಿ ಹೇಳಿದರು.