ಮಹಿಳೆಯರ ಮತ ಗೆಲ್ಲಲು ರಾಜಕೀಯ ಪಕ್ಷಗಳಿಂದ ಭರ್ಜರಿ ಘೋಷಣೆ

ಬೆಂಗಳೂರು,ಜ.24-ಯಾವುದೇ ಚುನಾವಣೆಯಲ್ಲಿ ಪಕ್ಷ ಮತ್ತು ಅಭ್ಯರ್ಥಿಗಳ ಸೋಲು ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿರುವ ಮಹಿಳಾ ಮತದಾರರ ಮನಗೆಲ್ಲಲು ಪ್ರಮುಖ ರಾಜಕೀಯ ಪಕ್ಷಗಳು ಮುಂದಾಗಿವೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ನಾರಿಯರ ಮನಗೆಲ್ಲಲು ವಿಶೇಷ ಕಾರ್ಯಕ್ರಮಗಳನ್ನು ಜಾರಿಗೆ ತರುವುದಾಗಿ ಭರಪೂರ ಭರವಸೆಗಳನ್ನು ಘೋಷಣೆ ಮಾಡುತ್ತಿದ್ದಾರೆ.ರಾಜ್ಯದಲ್ಲಿ ಈ ಬಾರಿ ಒಟ್ಟು 5, 05,48,553ಮತದಾರರು ಇದ್ದು, ಇದರಲ್ಲಿ 2,51,76,605 ಪುರುಷರು ಮತ್ತು 2,47,53,779 ಮಹಿಳಾ ಮತದಾರರು ಇದ್ದಾರೆ. ಪುರುಷರಿಗೆ ಹೋಲಿಸಿದರೆ ಮಹಿಳಾ ಮತದಾರರ ಸಂಖ್ಯೆ ಕೇವಲ 3,55,399 […]

ಮತದಾರರನ್ನ ಮರುಳುಮಾಡಲು ‘ಉಚಿತ’ ಪೈಪೋಟಿಗಳಿದ ರಾಜಕೀಯ ಪಕ್ಷಗಳು

ಬೆಂಗಳೂರು,ಜ.17- ರಾಜ್ಯ ರಾಜಕಾರಣದಲ್ಲಿ ಮತದಾರರನ್ನು ಓಲೈಸಿಕೊಳ್ಳಲು ರಾಜಕೀಯ ಪಕ್ಷಗಳು ನಾನಾ ಕಸರತ್ತು ನಡೆಸುತ್ತಿರುವುದರ ಜೊತೆಗೆ ಉಚಿತ ಕೊಡುಗೆಗಳನ್ನು ಭರ್ಜರಿಯಾಗಿಯೇ ಘೋಷಣೆ ಮಾಡುತ್ತಿವೆ.ನಾವು ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೂ 200 ವ್ಯಾಟ್ ವಿದ್ಯುತ್ ಹಾಗೂ ನಾರಿಯರಿಗೆ ಮಾಸಿಕ 2000 ರೂ. ನೀಡುವುದಾಗಿ ಕಾಂಗ್ರೆಸ್ ಹೇಳಿಕೊಂಡಿದೆ. ನಾವೇನು ಕಮ್ಮಿ ಎಂಬಂತೆ ಆಡಳಿತಾರೂಢ ಬಿಜೆಪಿ ಕೂಡ ಕೋವಿಡ್ ಮತ್ತು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಬಡ ಕುಟುಂಬಗಳ ಮನೆ ವೆಚ್ಚ ನಿರ್ವಹಣೆಗಾಗಿ ಕುಟುಂಬದ ಯಜಮಾನಿ ಮಹಿಳೆಯರಿಗೆ ಗೃಹಿಣಿಶಕ್ತಿ ಯೋಜನೆ ಜಾರಿ ಮಾಡುವುದಾಗಿ ಘೋಷಿಸಿದೆ. […]

ಮಹಾರಾಷ್ಟ್ರ ರಾಜ್ಯದಲ್ಲಿ 9.02 ಕೋಟಿಗೂ ಹೆಚ್ಚು ಮತದಾರು

ಮುಂಬೈ, ಜ- 6 -ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಂತರ ಮಹಾರಾಷ್ಟ್ರ ರಾಜ್ಯದಲ್ಲಿ 9.02 ಕೋಟಿಗೂ ಹೆಚ್ಚು ಮತದಾರರಿದ್ದಾರೆ ಎಂದು ಹಿರಿಯ ಹಿರಿಯ ಅಕಾರಿಯೊಬ್ಬರು ತಿಳಿಸಿದ್ದಾರೆ. ಪರಿಷ್ಕøತ ಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಲಾಗಿದೆ. ಆದರೆ ಕಳೆದ 2022ರ ನ. 9, ರಂದು ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯ ಪ್ರಕಾರ, 8,98,42,301 ಮತದಾರರಿದ್ದರು. ನಂತರ 9,21,453 ಮತದಾರರು ಹೊಸದಾಗಿ ಸೇರ್ಪಡೆಗೊಂಡರೆ ಇದೇ ವೇಳೆ ಸಾಮ್ಯತೆ ಇದ್ದ 4,77,953 ಹೆಸರುಗಳನ್ನು ಅಳಿಸಲಾಗಿದೆ. ವಿಶೇಷ ಪರಿಷ್ಕರಣೆ ಪ್ರಕಾರ ಮಹಾರಾಷ್ಟ್ರವು 9,02,85,801 ಮತದಾರರನ್ನು […]

ವಿಧಾನಸಭೆ ಚುನಾವಣೆಗೆ ಮತದಾರರ ಅಂತಿಮ ಪಟ್ಟಿ ಪ್ರಕಟ

ಬೆಂಗಳೂರು,ಜ.5- ಮುಂಬರುವ ವಿಧಾನಸಭೆ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗವು ಅಂತಿಮ ಮತದಾರರ ಕರಡು ಪಟ್ಟಿಯನ್ನು ಪ್ರಕಟಿಸಿದ್ದು, ಈ ಬಾರಿ ಪುರುಷರು, ಮಹಿಳೆಯರು ಹಾಗೂ ಇತರ ಸೇರಿದಂತೆ ಒಟ್ಟು 5,05,48,553 ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಇದರಲ್ಲಿ ಪುರುಷರು 2,54,49,775, ಮಹಿಳೆಯರು 2,50,94,326, ಇತರರು 4,502 ಸೇರಿದಂತೆ ಒಟ್ಟು 5,05,48,553 ಮಂದಿ ಮತದಾನದ ಹಕ್ಕು ಹೊಂದಿದ್ದಾರೆ ಎಂದು ರಾಜ್ಯ ಚುನಾವಣಾ ಮುಖ್ಯಾಧಿಕಾರಿ ಮನೋಜ್‍ಕುಮಾರ್ ಮೀನಾ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು 221 ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ […]

ವೋಟರ್ ಡೇಟಾ ಹಗರಣ : ಇಬ್ಬರು ಐಎಎಸ್ ಅಧಿಕಾರಿಗಳಿಗೆ ಮತ್ತೆ ಡ್ರಿಲ್

ಬೆಂಗಳೂರು,ಡಿ.7- ಚಿಲುಮೆ ಸಂಸ್ಥೆಯ ಮತದಾರರ ವೈಯಕ್ತಿಕ ಮಾಹಿತಿ ಕಳುವು ಪ್ರಕರಣದಿಂದ ಅಮಾನತುಗೊಂಡಿರುವ ಇಬ್ಬರು ಐಎಎಸ್ ಅಧಿಕಾರಿಗಳನ್ನು ಇಂದು ಮತ್ತೊಮ್ಮೆ ಪೊಲೀಸರು ವಿಚಾರಣೆ ನಡೆಸುವ ಸಾಧ್ಯತೆಗಳಿವೆ. ಪ್ರಕರಣ ಬೆಳಕಿಗೆ ಬಂದ ನಂತರ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾಗಿದ್ದ ಶ್ರೀನಿವಾಸ್ ಹಾಗೂ ಬಿಬಿಎಂಪಿ ವಿಶೇಷ ಆಯುಕ್ತ ರಂಗಪ್ಪ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಆರೋಪಕ್ಕೆ ಗುರಿಯಾಗಿದ್ದ ಇಬ್ಬರು ಐಎಎಸ್ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರೂ ಇಬ್ಬರು ವಿಚಾರಣೆಗೆ ಹಾಜರಾಗಿರಲಿಲ್ಲ. ಸಿದ್ಧಾಂತ ಮರೆತವರಿಗೆ ಬಿಸಿ ಮುಟ್ಟಿಸಲು ವ್ಯೂಹ ರಚಿಸಿದ […]

ಈ ಬಾರಿ ವಿಭಿನ್ನ ತೀರ್ಪು ನೀಡಿ : ಗುಜರಾತ್ ಜನತೆಗೆ ಕೇಜ್ರಿವಾಲ್ ಮನವಿ

ಅಹಮದಾಬಾದ್,ಡಿ.5- ದೆಹಲಿ, ಪಂಜಾಬ್ ನಂತರ ಗುಜರಾತ್‍ನಲ್ಲಿ ಅಡಳಿತದ ಚುಕ್ಕಾಣಿ ಹಿಡಿಯುವ ಪ್ರಯತ್ನದಲ್ಲಿರುವ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಈ ಬಾರಿಯ ಚುನಾವಣೆಯಲ್ಲಿ ಗುಜರಾತ್ ಜನತೆ ಈ ಬಾರಿ ವಿಬಿನ್ನ ಪ್ರಯತ್ನಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಈ ಚುನಾವಣೆ ಗುಜರಾತ್‍ನ ಹೊಸ ಭರವಸೆ ಮತ್ತು ಆಕಾಂಕ್ಷೆಗಳಿಗಾಗಿ. ಇದು ದಶಕಗಳ ನಂತರ ಬಂದಿರುವ ಉತ್ತಮ ಅವಕಾಶ. ಭವಿಷ್ಯವನ್ನು ನೋಡುವಾಗ, ಗುಜರಾತ್‍ನ ಪ್ರಗತಿಗಾಗಿ ಮತ ಚಲಾಯಿಸಿ. ಈ ಬಾರಿ ವಿಭಿನ್ನವಾದ ಮತ್ತು […]

ಮತದಾರರಿಗೆ ತೀರ್ಥಯಾತ್ರೆ, ಪ್ರವಾಸ, ಭರ್ಜರಿ ಉಡುಗೊರೆಗಳ ಭಾಗ್ಯ

ಬೆಂಗಳೂರು,ನ.25-ರಾಜ್ಯ ವಿಧಾನಸಭೆಗೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿ ಇರುವಂತೆ ಮತದಾರರ ಮೂಗಿಗೆ ತುಪ್ಪ ಸವರಲು ಆಕಾಂಕ್ಷಿಗಳು ನಾನಾ ರೀತಿಯ ಆಮಿಷಗಳನ್ನೊಡುತ್ತಿದ್ದಾರೆ. ಹಾಲಿ ಸಚಿವರು, ಶಾಸಕರು ಹಾಗೂ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ಖಾತ್ರಿಯಲ್ಲಿರುವ ಆಕಾಂಕ್ಷಿಗಳು ಮತದಾರರಿಗೆ ಉಚಿತವಾಗಿ ಉಡುಗೊರೆ ತೀರ್ಥಯಾತ್ರೆ, ಪ್ರವಾಸ, ಕ್ರೀಡಾಕೂಟಗಳ ಆಯೋಜನೆ, ರಸಮಂಜರಿ ಕಾರ್ಯಕ್ರಮ, ಹಬ್ಬಹರಿದಿನಗಳಲ್ಲಿ ಯಥೇಚ್ಚವಾಗಿ ಹಣ ನೀಡುವುದು ಸೇರಿದಂತೆ ನಾನಾ ರೀತಿಯ ಭರವಸೆಗಳನ್ನು ನೀಡುತ್ತಿದ್ದಾರೆ. ಇನ್ನೇನು ಚುನಾವಣೆ ಸಮೀಪಿಸುತ್ತಿರುವುದರಿಂದ ಬಹುತೇಕ 224 ಕ್ಷೇತ್ರಗಳಲ್ಲಿ ಮತದಾರರಿಗೆ ಆಮಿಷವೊಡ್ಡುವ ದೃಶ್ಯಗಳು ಸರ್ವೇ ಸಾಮಾನ್ಯವಾಗಿದ್ದು, […]

ವೋಟರ್ ಐಡಿ ಹಗರಣ: ರಾಜಕಾರಣಿಗಳ ಸಂಪರ್ಕದ ಬಗ್ಗೆ ಬಾಯಿ ಬಿಡದ `ಚಿಲುಮೆ’ ರವಿ

ಬೆಂಗಳೂರು,ನ.24- ಮತದಾರರ ಪಟ್ಟಿ ಅಕ್ರಮ ಪ್ರಕರಣದಲ್ಲಿ ಪೊಲೀಸರು ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ಅವರನ್ನು ತೀವ್ರ ವಿಚಾರಣೆಗೊಳಪಡಿಸಿದ್ದು, ರಾಜಕೀಯ ಒತ್ತಡದ ಕಾರಣಕ್ಕಾಗಿ ತಾವು ದತ್ತಾಂಶಗಳನ್ನು ಸಂಗ್ರಹಿಸಿದ್ದಾಗಿ ಹೇಳಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಒತ್ತಡ ಹೇರಿದ ರಾಜಕಾರಣಿಗಳು ಯಾರು ಎಂಬ ವಿಷಯವನ್ನು ರವಿಕುಮಾರ್ ಬಾಯಿ ಬಿಡದೆ ಸತಾಯಿಸುತ್ತಿದ್ದಾರೆ. ತೀವ್ರ ಸಂಚಲನ ಮೂಡಿಸಿರುವ ಮತದಾರರ ಪಟ್ಟಿ ಅಕ್ರಮ ಪ್ರಕರಣದಲ್ಲಿ ರವಿಕುಮಾರ್ ಹೇಳಿಕೆಗಳು ಮಹತ್ವದಾಗಿದೆ. ಹೀಗಾಗಿ ಸಮಗ್ರ ಮಾಹಿತಿ ಕಲೆಹಾಕಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಆದರೆ ಬುದ್ದಿವಂತಿಕೆಯಿಂದ ವರ್ತಿಸುತ್ತಿರುವ ರವಿಕುಮಾರ್ ವಿಚಾರಣೆ ಸಂದರ್ಭದಲ್ಲಿ […]

2023ರ ಚುನಾವಣೆಗೆ 5.09 ಕೋಟಿ ಮತದಾರರು: ಕರಡು ಪಟ್ಟಿ ಪ್ರಕಟ

ಬೆಂಗಳೂರು,ನ.22- ರಾಜ್ಯ ಇನ್ನೇನು ಚುನಾವಣೆ ಹೊಸ್ತಿಲಲ್ಲಿ ಇದೆ. ಇತ್ತ ರಾಜಕೀಯ ಪಕ್ಷಗಳು ಈಗಾಗಲೇ ಚುನಾವಣಾ ತಾಲೀಮು ಆರಂಭಿಸಿವೆ. ಚುನಾವಣಾ ಆಯೋಗವೂ ಭರದಿಂದ ಸಿದ್ಧತೆ ಕೈಗೆತ್ತಿಕೊಂಡಿದೆ. ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗಪ್ರಕಟಿಸುವ ಮೂಲಕ ಚುನಾವಣಾ ತಯಾರಿ ಆರಂಭಿಸಿದೆ. ಕರ್ನಾಟಕ ಇದೀಗ ಚುನಾವಣೆಯ ಹೊಸ್ತಲಲ್ಲಿ ಇದೆ. ಇನ್ನೇನು ಐದಾರು ತಿಂಗಳಲ್ಲಿ ರಾಜ್ಯ ಚುನಾವಣೆ ಎದುರಿಸಲಿದೆ. ಹೀಗಾಗಿ ಎಲ್ಲಾ ರಾಜಕೀಯ ಪಕ್ಷಗಳು ಚುನಾವಣಾ ತಯಾರಿಯನ್ನು ಭರ್ಜರಿಯಾಗಿ ಆರಂಭಿಸಿವೆ. ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣಾ […]

ತಪ್ಪು ಮಾಡಿದ್ದರೆ ನಮಗೂ ಶಿಕ್ಷೆಯಾಗಲಿ : ಡಿಕೆಶಿ

ಬೆಂಗಳೂರು, ನ.21- ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಮಾಹಿತಿ ಕಳವು ಪ್ರಕರಣದಲ್ಲಿ ಕಾಂಗ್ರೆಸ್ ಮೇಲೆ ತಪ್ಪು ಹೊರಿಸಲು ಪ್ರಯತ್ನಿಸಲಾಗುತ್ತಿದೆ. 2013 ರಿಂದ ಚಿಲುಮೆ ಸಂಸ್ಥೆ ವ್ಯವಹಾರ ತನಿಖೆ ಮಾಡಿಸಲು ಮುಂದಾಗಿರುವ ಮುಖ್ಯಮಂತ್ರಿಗಳ ತೀರ್ಮಾನವನ್ನು ನಾವು ಸ್ವಾಗತಿಸುತ್ತೇವೆ. ನಾವು ಮತದಾರರ ಮಾಹಿತಿ ದುರ್ಬಳಕೆ ಮಾಡಿಕೊಂಡಿದ್ದರೆ ನಮಗೂ ಶಿಕ್ಷೆ ಆಗಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸವಾಲೆಸೆದಿದ್ದಾರೆ. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರ ಭೇಟಿಗೆ ಕಾಲಾವಕಾಶ ಕೇಳಿದ್ದೇವೆ. ಮತಪಟ್ಟಿ ಹಗರಣ ಸಂಬಂಧ […]