Monday, June 17, 2024
Homeರಾಜಕೀಯಒಂದೇ ಹೆಸರು, ಹಲವು ಅಭ್ಯರ್ಥಿಗಳು : ಮತದಾರರಿಗೆ ಗೊಂದಲ ಸೃಷ್ಟಿಸಲು 'ಪೋಲಿ'ಟ್ರಿಕ್ಸ್

ಒಂದೇ ಹೆಸರು, ಹಲವು ಅಭ್ಯರ್ಥಿಗಳು : ಮತದಾರರಿಗೆ ಗೊಂದಲ ಸೃಷ್ಟಿಸಲು ‘ಪೋಲಿ’ಟ್ರಿಕ್ಸ್

ಬೆಂಗಳೂರು,ಏ.5- ರಾಜಕೀಯ ಜಿದ್ದಾಜಿದ್ದಿಗೆ ಹೆಸರುವಾಸಿಯಾಗಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಒಂದೇ ಹೆಸರಿನ ಐವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಐವರು ಮಂಜುನಾಥ್ ಹೆಸರಿನ ಹಾಗೂ ಮೂವರು ಸುರೇಶ್ ಹೆಸರಿನವರ ನಡುವೆ ಹಣಾಹಣಿ ನಡೆಯಲಿದೆ.

ಕಾಂಗ್ರೆಸ್‍ನ ಡಿ.ಕೆ.ಸುರೇಶ್ ಮತ್ತು ಬಿಜೆಪಿಯ ಡಾ.ಸಿ.ಎನ್.ಮಂಜುನಾಥ್ ನಡುವಿನ ಪ್ರತಿಷ್ಠೆಯ ಕದನದ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಇದರ ಜೊತೆಗೆ ಸಿ.ಮಂಜುನಾಥ್, ಎನ್.ಮಂಜುನಾಥ್, ಮಂಜುನಾಥ್.ಕೆ ಮತ್ತು ಸಿ.ಎನ್.ಮಂಜುನಾಥ್, ಎಸ್.ಸುರೇಶ್ ಮತ್ತು ಎಂ.ಎನ್.ಸುರೇಶ್ ಕಣಕ್ಕಿಳಿದು ಕ್ಷೇತ್ರದ ಮತದಾರರ ಗಮನ ಸೆಳೆಯಲು ಪೈಪೋಟಿ ನಡೆಸುತ್ತಿದ್ದಾರೆ.

ಆದರೆ ಇದು ಕೇವಲ ಒಂದು ಕ್ಷೇತ್ರದ ಕಥೆಯಲ್ಲ ಮತ್ತು ಇದೇ ಮೊದಲ ಬಾರಿಗೆ ನಡೆಯುತ್ತಿಲ್ಲ. ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್‍ನ ರಕ್ಷಾ ರಾಮಯ್ಯ ವಿರುದ್ಧ ಮಾಜಿ ಸಚಿವ, ಬಿಜೆಪಿ ಮುಖಂಡ ಡಾ.ಕೆ.ಸುಧಾಕರ್ ಸ್ಪರ್ಧಿಸಿದ್ದು, ಇನ್ನಿಬ್ಬರು ಸುಧಾಕರ್ ಕಣಕ್ಕಿಳಿದಿದ್ದಾರೆ.

ಡಿ.ಸುಧಾಕರ್ ಮತ್ತು ಕೆ.ಸುಧಾಕರ್ ಎಂಬ ಇಬ್ಬರು ಅಭ್ಯರ್ಥಿಗಳು ಪಕ್ಷೇತರರಾಗಿ ಸ್ರ್ಪಧಿಸಿದ್ದಾರೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿಯ ಕೋಟಾ ಶ್ರೀನಿವಾಸ್ ಪೂಜಾರಿ ವಿರುದ್ಧ ಸುರೇಶ್ ಪೂಜಾರಿ ಮತ್ತು ಸುಪ್ರೀತ್ ಪೂಜಾರಿ ಇದ್ದಾರೆ. ಅದೇ ರೀತಿ ಕಾಂಗ್ರೆಸ್ ಮುದ್ದಹನುಮೇಗೌಡ ವಿರುದ್ಧ ಹನುಮಯ್ಯ ಎಂಬುವರು ಕಣಕ್ಕಿಳಿದಿದ್ದಾರೆ.

ಬೆಂಗಳೂರು ಉತ್ತರದಲ್ಲಿ ಬಿಜೆಪಿಯಿಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಣಕ್ಕಿಳಿದಿದ್ದು, ಶೋಭಾ ಎಂಬ ಸ್ವತಂತ್ರ ಅಭ್ಯರ್ಥಿ ಹಾಗೂ ಶೋಭನ್ ಬಾಬು ವಿ. ಪುರುಷ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿಖಾನ್ ಅವರು ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಮುಕ್ತಾರ್ ಅಲಿ ಖಾನ್ ಅವರೊಂದಿಗೆ ಹಣಾಹಣಿ ನಡೆಸಲಿದ್ದಾರೆ.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ, ಅವರ ವಿರುದ್ಧ ಯಡೂರಪ್ಪ ಎಂಬ ಸ್ವತಂತ್ರ ಅಭ್ಯರ್ಥಿ ಕಣಕ್ಕೆ ಇಳಿದಿದ್ದಾರೆ.

ಇನ್ನೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸ್ರ್ಪಸುತ್ತಿರುವ ಮಂಡ್ಯ ಮತ್ತು ಮಾಜಿ ಸಚಿವ ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ಸ್ರ್ಪಧಿಸುತ್ತಿರುವ ಹಾಸನ ಲೋಕಸಭಾ ಕ್ಷೇತ್ರದಿಂದ ಎಚ್.ಡಿ .ರೇವಣ್ಣ ಎಂಬ ವ್ಯಕ್ತಿ ಸ್ರ್ಪಧಿಸುತ್ತಿದ್ದಾರೆ. ಅವರಲ್ಲಿ ಹಲವರು ಹಣ ನೀಡಿದಾಗ ಕಣದಿಂದ ಹಿಂದೆ ಸರಿಯುತ್ತಾರೆ ಎಂದು ಹಿರಿಯ ರಾಜಕಾರಣಿಯೊಬ್ಬರು ಹೇಳಿದ್ದಾರೆ. ಅವರಿಂದ ಗೆಲ್ಲುವ ಅಭ್ಯರ್ಥಿಗಳ ಭವಿಷ್ಯಕ್ಕೆ ತೊಂದರೆಯಿಲ್ಲ, ಆದರೆ ಅವರು ಗೊಂದಲ ಸೃಷ್ಟಿಸುತ್ತಾರೆ ಎಂದಿದ್ದಾರೆ.

RELATED ARTICLES

Latest News